ಕಳುವಾಗಿದ್ದ 20 ಲಕ್ಷರೂ. ಮೌಲ್ಯದ ಮೊಬೈಲ್‌ಗಳ ಪತ್ತೆ|ಸಂತ್ರಸ್ಥರಿಗೆ ಮೊಬೈಲ್ ಹಸ್ತಾಂತರಿಸಿದ ಎಸ್ಪಿ ಬಿ.ನಿಖಿಲ್|ದೊಡ್ಡಪೇಟೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ
ಸೋಮವಾರದಂದು ದೊಡ್ಡಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮ ಅಕ್ಷರಶಃ ಸಂಭ್ರಮಾಚರಣೆ ಸಂತಸ ಮೂಡುವಂತೆ ಮಾಡಿತ್ತು.

ಶಿವಮೊಗ್ಗ: ಕಳ್ಳರ ಕರಾಮತ್ತಿನಿಂದ ಹಾಗೂ ಆಕಸ್ಮಾತ ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಪತ್ತೆ ಹಚ್ಚಿರುವ ದೊಡ್ಡಪೇಟೆ ಠಾಣಾ ಪೊಲೀಸರು, ಸೋಮವಾರದಂದು ಅವುಗಳನ್ನು ವಾರಸುದಾರರಿಗೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಪತ್ತೆಯಾದ 20 ಲಕ್ಷ ಮೌಲ್ಯದ ಮೊಬೈಲ್ ಒಟ್ಟು ನೂರು ಮೊಬೈಲ್‌ಗಳನ್ನು ಅದರ ವಾರಸುದಾರರಿಗೆ ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಲ್ಲೆಯಲ್ಲಿ ಕಳುವು ಮಾಡಿದ ಹಲವು ಮೊಬೈಲ್‌ಗಳು ಹೊರ ರಾಜ್ಯಗಳಾದ , ಕೇರಳ, ಆಂದ್ರ, ತೆಲಂಗಾಣಗಳಲ್ಲಿ ಪತ್ತೆಯಾಗಿವೆ ಎಂದು ಹೇಳಿದರು.

ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ಕೂಡಲೇ ಸಿಇಐಆರ್ ಪೋರ್ಟಲ್ ಮೂಲಕ ಅಥವಾ ಠಾಣೆಗೆ ಬಂದು ದೂರು ನೀಡುವ ಮೂಲಕ ಮತ್ತೆ ತಮ್ಮ ಮೊಬೈಲ್ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ಈಗ ಕಳುವಾದ ಮತ್ತು ಮಿಸ್ ಆಗಿದ್ದ 100 ಜನರ ಮೊಬೈಲ್‌ಗಳನ್ನು ಕೇವಲ ದೊಡ್ಡಪೇಟೆ ಠಾಣೆ ವ್ಯಾಪ್ತಿಯದ್ದಾಗಿದೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ಸಾವಿರ ಮೊಬೈಲ್ಗಳನ್ನು ಪತ್ತೆ ಹಚ್ಚಿ ಹಂತ ಹಂತವಾಗಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಮರಳಿಸಲಾಗುತ್ತಿದೆ ಎಂದು ತಿಳಿಸಿದರು.
ದೊಡ್ಡಪೇಟೆ ಠಾಣಾ ಆವರಣದಲ್ಲಿ ಸಂತಸದ ವಾತಾವರಣ|
ಪೊಲೀಸ್ ಠಾಣೆ ಅಂದರೇ ಸದಾ ಗದ್ದಲ, ರೌಡಿಗಳ, ಅಪರಾಧಿಗಳ ಓಡಾಟ ಎಂದೇ ನಂಬಿದ್ದ ಜನ ಇಂದು ಸಹ ಅದೇ ಗಾಬರಿ, ಆತಂಕದಲ್ಲಿಯೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಆದರೆ ದೊಡ್ಡಪೇಟೆ ಆವರಣದಲ್ಲಿ ಸೋಮವಾರದಂದು ಏರ್ಪಟ್ಟಿದ್ದ ಕಾರ್ಯಕ್ರಮ ನೋಡಿದ ಜನರಿಗೆ ಪೊಲೀಸರು ನೀಡಿದ ಆದರ ಸತ್ಕಾರದಿಂದ ಜನರಲ್ಲಿ ಇದ್ದ ಭಯ ದೂರ ಮಾಡಿತ್ತು.
ಇನ್ನು ಕಳೆದುಕೊಂಡ ಮೊಬೈಲ್ ಮರಳಿ ಸಿಕ್ಕ ಖುಷಿಯಿಂದಾಗಿ ಸ್ಥಳದಲ್ಲಿ ಅಕ್ಷರಶಃ ಸಂಭ್ರಮಾಚರಣೆ ಸಂತಸ ಮೂಡುವಂತೆ ಮಾಡಿತ್ತು.
ಮೊಬೈಲ್ ಸಿಗಲ್ಲ ಎಂದುಕೊಂಡಿದ್ದ ಜನರಲ್ಲಿ ಸಂತಸ|
ಮೊಬೈಲ್ ಕಳೆದುಹೋದ ನಂತರ ಬಹಳಷ್ಟು ಜನರಲ್ಲಿ ಇನ್ನು ಅದು ಮರಳಿ ಸಿಗುತ್ತೆ ಎಂಬ ನಂಬಿಕೆ ಇರಲ್ಲ. ಕೆಲವರು ಕಂಪ್ಲೆಂಟ್ ಕೊಟ್ಟರೇ ಇನ್ನು ಕೆಲವರು ಹೆಂಗೂ ಸಿಗಲ್ಲ ಬಿಡು ಎಂದು ಯಾಕೀ ಉಸಾಬರಿ ಎಂದು ಸುಮ್ಮನಾಗಿ ಬಿಡುತ್ತಾರೆ.

ಆದರೆ ಈಗ ದೊಡ್ಡಪೇಟೆ ಪೊಲೀಸರು ಪತ್ತೆ ಹಚ್ಚಿದ್ದಲ್ಲದೇ ಮೊಬೈಲ್ ಅನ್ನು ಸೋಮವಾರದಂದು ಮರಳಿ ನೀಡಿದಾಗ ಕಳೆದುಕೊಂಡ ಜನರಲ್ಲಿ ಭಾರಿ ಸಂತಸ ಉಂಟು ಮಾಡುವಂತೇ ಮಾಡಿತ್ತು.
ಮೊಬೈಲ್ ಪಡೆಯಲು ಬಂದಿದ್ದ ಹಲವರು ತಮ್ಮ ಮೊಬೈಲ್ ಅನ್ನು ಕಳೆದುಕೊಂಡ ಅನುಭವವನ್ನು ಮಾಧ್ಯಮದವರ ಮುಂದೆ ಹಂಚಿಕೊಂಡರು.
ಘಟನೆ..1)
ಸಹ್ಯಾದ್ರಿ ಕಾಲೇಜಿನ ಯುವತಿ ಲಾವಣ್ಯ ಎಂಬುವವರು ಬಸ್‌ನಿಂದ ಇಳಿಯುವಾಗ ಅಶೋಕ ವೃತ್ತದ ಬಳಿ ಮೊಬೈಲ್ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡರು. ಕೂಡಲೇ ಅವರು ಪೊಲಿಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ದೂರು ಕೊಟ್ಟರು ಪ್ರಯೋಜನವಿಲ್ಲವೆಂದೇ ಸುಮ್ಮನಾಗಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡರು. ಮೊಬೈಲ್ ಮತ್ತೆ ವಾಪಸ್ ಸಿಗುವ ಭರವಸೆ ಇರಲಿಲ್ಲ ಎಂದು ಹೇಳಿದರು.
ಒಂದು ವರ್ಷದ ಬಳಿಕ ತನ್ನ ಮೊಬೈಲ್ ಮರಳಿ ಸಿಕ್ಕಿರುವುದು ಸಂತಸ, ಖುಷಿತಂದಿದೆ ಎಂದು ಹೇಳಿದರು.
ಘಟನೆ..2)
ಮೊಬೈಲ್ ಸಿಕ್ಕ ಖುಷಿ|
ತಾಯಿಯ ಫೋಟೋ ಡಿಲಿಟ್ ಆದ ಬೇಸರ|
ಇನ್ನು ಆರ್‌ಎಂಎಲ್ ನಗರದ ನಿವಾಸಿ ಅಜ್ಗರ್ ಅಲಿ ಎಂಬುವರು ಮನೆಯಿಂದ ಬರುವಾಗ ರಸ್ತೆಯಲ್ಲಿ ಬಿದ್ದು ಹೋಗಿ ಮೊಬೈಲ್ ಕಳೆದುಕೊಂಡಿದ್ದರು.
ಈ ಕುರಿತು ಸಿಇಐಆರ್ ಪೋರ್ಟಲ್ ಮೂಲಕ ದೂರು ನೀಡಿದ್ದು ವರ್ಷದ ಬಳಿಕ ಮತ್ತೆ ಮೊಬೈಲ್ ಸಿಕ್ಕಿದ್ದು ಭಾರೀ ಖುಷಿಯಾಯಿತು ಎಂದು ಹೇಳಿದರು.
ಆದರೆ ತಾಯಿಯ ಅಪರೂಪದ ಪೋಟೋಗಳು ಅಳಿಸಿಹೋಗಿದ್ದು ಕೊಂಚ ಬೇಸರವಾಗಿದೆ ಎಂದರು. ಮೊಬೈಲ್ ಹುಡುಕಿಕೊಟ್ಟ ಪೊಲೀಸರಿಗೆ ಅವರು ಧನ್ಯವಾದ ತಿಳಿಸಿದರು.
ಹೀಗೆ ಹಲವರು ಮೊಬೈಲ್ ಕಳೆದಕೊಂಡ ತಮ್ಮ ವಿಭಿನ್ನ ಅನುಭವ ಹಂಚಿಕೊಂಡರು.
ಸಂದರ್ಶಕರ ಪ್ರತ್ಯೇಕ ಕೊಠಡಿಗೆ ಚಾಲನೆ|
ಮೊಬೈಲ್ ಹಸ್ತಾಂತರ ಕಾರ್ಯಕ್ರಮಕ್ಕೂ ಮುನ್ನ ದೊಡ್ಡಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸಂದರ್ಶಕರಿಗಾಗಿ ನಿರ್ಮಿಸಲಾದ ಪ್ರತ್ಯೇಕ ಕೊಠಡಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ನಿಖಿಲ್ ಉದ್ಘಾಟಿಸಿದರು.


ದೊಡ್ಡಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡುವ ಸಂದರ್ಶಕರ ಅನುಕೂಲಕ್ಕಾಗಿ ಕುಳಿತುಕೊಳ್ಳಲು ನೂತನ ವಿಸಿಟರ್ ಕೊಠಡಿಯನ್ನ ಹೊಸದಾಗಿ ನಿರ್ಮಿಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಗರ ವಿಭಾಗದ ಎಎಸ್ಪಿ ಬೆನಕಪ್ರಸಾದ್, ಪೊಲೀಸ್ ಉಪಾಧೀಕ್ಷಕ ಸಿಎಸ್ ಹೊಸಮನಿ, ದೊಡ್ಡಪೇಟೆ ಪಿಎಸ್ಐ ಸತ್ಯನಾರಾಯಣ್, ವಿನೋಬನಗರ ಪಿಎಸ್ಐ ಸಂತೋಷ್ ಕುಮಾರ್, ಕೋಟೆ ಠಾಣೆ ಪಿಎಸ್ಐ ಹರೀಶ್ ಪಾಟೀಲ್ , ಸಂಚಾರಿ ವೃತ್ತ ನಿರೀಕ್ಷಕ ದೇವರಾಜ್, ಮತ್ತಿತರ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







