CrimeDistrictFashionHealthKarnatakaShivamogga

ಎಚ್ಚರ..ಶಿವಮೊಗ್ಗದಲ್ಲಿದ್ದಾರೆ ನಕಲಿ ಚರ್ಮರೋಗ ವೈದ್ಯರು!”ಬ್ಯೂಟಿಶಿಯನ್ಸ್‌”‌ಹೆಸರಿನಲ್ಲಿ ನಡೆಯುತ್ತಿದೆ”ಹಗಲು ಮೋಸ”!

ಶಿವಮೊಗ್ಗ ನಗರದಲ್ಲಿ ಅನಧಿಕೃತ ವ್ಯಕ್ತಿಗಳು, ಅಲೋಪಥಿ ಪದವಿ ಪಡೆಯದ ಚಿಕಿತ್ಸಕರು, ತರಬೇತಿ ಮತ್ತು ಪರವಾನಗಿ ಇಲ್ಲದ, ಅನರ್ಹ ಬ್ಯೂಟಿ ಕ್ಲಿನಿಕ್ ಸಿಬ್ಬಂದಿಗಳು ಲೇಸರ್ ಹೇರ್ ರಿಮೂವರ್ ಹಾಗು ಕೆಮಿಕಲ್ ಪೀಲ್, ಪಿಆರ್‌ಪಿ, ಬೋಟಾಕ್ಸ್, ಫಿಲ್ಲರ್ ಹಾಗೂ ಮಚ್ಚೆ ತೆಗೆದುಹಾಕುವಂತಹ ಚಿಕಿತ್ಸೆಗಳನ್ನ ಅನಧಿಕೃತವಾಗಿ ನೀಡುತ್ತಿದ್ದಾರೆ.

ಸೌಂದರ್ಯ ಮತ್ತು ಚರ್ಮ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆಯನ್ನ ನೀಡುವದಾಗಿ ಹೇಳುವ ನಕಲಿ ವೈದ್ಯರಿಂದ ಹುಷಾರಾಗಿರಬೇಕು ಎಂದು ಸಹ್ಯಾದ್ರಿ ಡರ್ಮಾ ಅಸೋಸಿಯೇಶನ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರೊ. ಡಾ.ದಾದಾ ಪೀರ್‌, ಥೆರಪಿ , ಸೌಂದರ್ಯ ಚಿಕಿತ್ಸೆ ಹೆಸರಲ್ಲಿ ವೈದ್ಯರಲ್ಲದವರು ನೀಡಿದ ಔಷಧಿಯ ಅಡ್ಡ ಪರಿಣಾಮದಿಂದ ಅಮಾಯಕರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಸೌಂದರ್ಯ ಮತ್ತು ಚರ್ಮ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆಯನ್ನ ಪರಿಣಿತ ನೋಂದಾಯಿತ ತಜ್ಞ ವೈದ್ಯರ ಬಳಿಯೇ ಪಡೆಯಬೇಕು ಎಂದರು.

ಶಿವಮೊಗ್ಗದಲ್ಲಿ ಚರ್ಮರೋಗ ವಿಚಾರವಾಗಿ ಅನಧಿಕೃತ ಮತ್ತು ನಕಲಿ ಚಿಕಿತ್ಸಕರ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.

ಈ ನಕಲಿ ವ್ಯಕ್ತಿಗಳು ವೈದ್ಯರಂತೇ ವಿವಿಧ ಔಷಧಿ ನೀಡುವದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಆತಂಕ ಉಂಟುಮಾಡುತ್ತಿದೆ.

ಇಂತಹ ನಕಲಿ ವೈದ್ಯರನ್ನು ತಹಬಂದಿಗೆ ತರಲು ಜಿಲ್ಲಾಧಿಕಾರಿಗೆ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಾ.ದಾದಾ ಪೀರ್‌ ಹೇಳಿದರು.

ಜಿಲ್ಲೆಯಲ್ಲಿ ನಕಲಿ ಚರ್ಮ ವೈದ್ಯರು ಅಥವಾ ಅರ್ಹತೆ ಪಡೆಯದವರೂ ಚಿಕಿತ್ಸೆ ನೀಡಿದ ಪರಿಣಾಮ ಹಲವರು ಸಂಕಷ್ಟಕ್ಕೆ ಸಿಲುಕಿದ ನಂತರ ನಮ್ಮ ಬಳಿ ಬರುತ್ತಿದ್ದಾರೆ ಎಂದು ತಿಳಿಸಿದರು.

ಸಾಕಷ್ಟು ತರಬೇತಿ ಹಾಗು ವಿದ್ಯಾರ್ಹತೆ ಪಡೆಯದ ಇಂತಹ ಬ್ಯೂಟಿಷಿಯನ್‌ಗಳಿಂದ ಮುಖದ ಸೌಂದರ್ಯ ಮತ್ತಷ್ಟು ಹದೆಗೆಡುವ ಎಲ್ಲ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾರ್ವಜನಿಕರು ಚಿಕಿತ್ಸೆ ಪಡೆಯುವ ಮೊದಲು ಅವರು ಅಸಲಿ ವೈದ್ಯರೇ ಎಂದು ಪರೀಕ್ಷೀಸಬೇಕು ಎಂದು ಸಾರ್ವಜನಿಕರಿಗೆ ಡಾ.ದಾದಾ ಪೀರ್‌ ಮನವಿ ಮಾಡಿದರು.

ಚಿಕಿತ್ಸೆ ನೀಡುವ ವ್ಯಕ್ತಿಗಳು ಚರ್ಮರೋಗ ಪದವಿ ಮತ್ತು ಕೆಎಂಸಿ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದ ನಂತರವೇ ಚಿಕಿತ್ಸೆಗೆ ಮುಂದಾಗಬೇಕು.

ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಕ್ಕೆ ಬಲಿಯಾಗುವ ಸಾಧ್ಯತೆ ಎಂದು ಅವರು ಎಚ್ಚರಿಕೆ ನೀಡಿದರು.

ಎಂಬಿಬಿಎಸ್‌ ಬಳಿಕ ಚರ್ಮರೋಗ ವಿಭಾಗದಲ್ಲಿ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವೈದ್ಯರು ಮಾತ್ರ ಚಿಕಿತ್ಸೆ ನೀಡಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಿದರು.

ಚರ್ಮ, ಕೂದಲಿಗೆ ಚಿಕಿತ್ಸೆ…. ಕಾಸ್ಮೆಟಿಕ್ ಮತ್ತು ಲೇಸರ್ ವಿಧಾನಗಳನ್ನು, ಕೂದಲು ಕಸಿ ಶಸ್ತ್ರಚಿಕಿತ್ಸೆ ಗಳನ್ನು ನಡೆಸುವುದಕ್ಕೆ ಕಾನೂನುಬದ್ಧ ಹಕ್ಕು ಈ ತಜ್ಞ ವೈದರು ಮಾತ್ರ ಹೊಂದಿರುತ್ತಾರೆ ಎಂದರು.

ಶಿವಮೊಗ್ಗ ನಗರದಲ್ಲಿ ಅನಧಿಕೃತ ವ್ಯಕ್ತಿಗಳು, ಅಲೋಪಥಿ ಪದವಿ ಪಡೆಯದ ಚಿಕಿತ್ಸಕರು, ತರಬೇತಿ ಮತ್ತು ಪರವಾನಗಿ ಇಲ್ಲದ, ಅನರ್ಹ ಬ್ಯೂಟಿ ಕ್ಲಿನಿಕ್ ಸಿಬ್ಬಂದಿಗಳು ಲೇಸರ್ ಹೇರ್ ರಿಮೂವರ್ ಹಾಗು ಕೆಮಿಕಲ್ ಪೀಲ್, ಪಿಆರ್‌ಪಿ, ಬೋಟಾಕ್ಸ್, ಫಿಲ್ಲರ್ ಹಾಗೂ ಮಚ್ಚೆ ತೆಗೆದುಹಾಕುವಂತಹ ಚಿಕಿತ್ಸೆಗಳನ್ನ ಅನಧಿಕೃತವಾಗಿ ನೀಡುತ್ತಿದ್ದಾರೆ.

ಇಂತಹ ಸುರಕ್ಷಾರಹಿತ ಮತ್ತು ಅವೈಜ್ಞಾನಿಕ ವಿಧಾನಗಳಿಂದ ನೀಡುವ ಚಿಕಿತ್ಸೆಗಳಿಂದ ಸೋಂಕುಗಳು, ಅಲರ್ಜಿಗಳಾಗುವ ಸಾಧ್ಯತೆ ಇದೆ ಎಂದು ಡಾ.ದಾದಾ ಪೀರ್‌ ಕಳವಳ ವ್ಯಕ್ತಪಡಿಸಿದರು.

ಅನಧಿಕೃತ ವ್ಯಕ್ತಿಗಳು ನೀಡುವ ಚಿಕಿತ್ಸೆ ಆರೋಗ್ಯದಲ್ಲಿ ತೀವ್ರ ಅಡ್ಡಪರಿಣಾಮ ಬೀರುತ್ತದಲ್ಲದೇ ಮುಂದೆ ಜೀವ ಹಾನಿಗೂ ಕಾರಣವಾಗುವ ಸಾಧ್ಯತೆ ಇರುವದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಘದ ಕಾರ್ಯದರ್ಶಿ ಡಾ.ಮಂಜುನಾಥ, ಆದಿನಾಥ್ ಭಂಡಾರ್ಕರ್, ಡಾ. ಸುಮಲತಾ, ಡಾ. ಶಾಂತಲಾ ಇನ್ನಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button