Bengaluru UrbanDharwadDistrictKarnatakaNationalShivamoggaSpecial Stories
Trending

2025ರ ಸಾಲಿನ ನೀಟ್‌ ಪರೀಕ್ಷೆ-45ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಸ್-ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಸಾಧನೆ ಗಮನಾರ್ಹ-ಮಾಜಿ ಸಚಿವ ಗೋಪಾಲಯ್ಯ

ಮೆಡಿಕಲ್‌ ಸೀಟು ಪಡೆಯುವುದು ಮಧ್ಯಮ ವರ್ಗದವರಿಗೂ ಸಾಧ್ಯ ಎಂದು ವಿಶ್ವಾಸದಿಂದ ಹೇಳುತ್ತದೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ. ಈ ಸಾಧನೆಗೆ ಮಕ್ಕಳು ಆಸಕ್ತಿ ಹೊಂದಿದ್ದು ಮತ್ತು ಪ್ರತಿಭಾವಂತರಾಗಿದ್ದರೇ ಸಾಕು, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಜವಾಬ್ದಾರಿ ನಮ್ಮದು ಎನ್ನುತ್ತದೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ.

ಡಾಕ್ಟರ್‌ ಆಗಬೇಕೆಂಬ ಕನಸು…ಈಗಿನ ಬಹುತೇಕ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಆದರೆ ಅದರ ಫೀಸು.. ಕೋಟಿಗಟ್ಟಲೇ ದುಡ್ಡು ಅಂತ ಕೇಳಿದಾಗ, ಮಧ್ಯಮ ವರ್ಗವು ಇದರ ಸಹವಾಸವೇ ಬೇಡ ಎಂದು ಬೇರೆ ದಾರಿ ಹಿಡಿಯುತ್ತಾರೆ.

ಆ ಮೂಲಕ ತಮ್ಮ ಮಕ್ಕಳಲ್ಲಿ ಮೂಡಿದ ವೈದ್ಯರಾಗುವ ಕನಸುಗಳನ್ನು ಆರಂಭದಲ್ಲಿಯೇ ನಮ್ಮ ಕೈಯಲ್ಲಿ ಇದು ಆಗದ ವಿಚಾರ ಎಂದು ಬಹುತೇಕ ಪಾಲಕರು ಕೈ ಚೆಲ್ಲಿ ಬಿಡುತ್ತಾರೆ.

ಪಾಲಕರ ಈ ನಿರ್ಧಾರ ಮಕ್ಕಳಲ್ಲಿ ಬೇಸರ ತರುತ್ತದೆ ನಿಜ. ಆದರೆ ಮಧ್ಯಮ ವರ್ಗದವರ ಈ ನಿರ್ಧಾರ ಅವರ ಹಣಕಾಸಿನ ವ್ಯವಸ್ಥೆ ಮೇಲೆ ನಿಂತಿರುತ್ತದೆ ಎಂಬುದು ಮಾತ್ರ ಸುಳ್ಳಲ್ಲ.

ಆದರೆ, ಮೆಡಿಕಲ್‌ ಸೀಟು ಪಡೆಯುವುದು ಮಧ್ಯಮ ವರ್ಗದವರಿಗೂ ಸಾಧ್ಯ ಎಂದು ವಿಶ್ವಾಸದಿಂದ ಹೇಳುತ್ತದೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ.

ಈ ಸಾಧನೆಗೆ ಮಕ್ಕಳು ಆಸಕ್ತಿ ಹೊಂದಿದ್ದು ಮತ್ತು ಪ್ರತಿಭಾವಂತರಾಗಿದ್ದರೇ ಸಾಕು, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಜವಾಬ್ದಾರಿ ನಮ್ಮದು ಎನ್ನುತ್ತದೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ.

ಬಡತನ ರೇಖೆಗಿಂತ ಕಡಿಮೆ ಇರುವ ಮಕ್ಕಳು ಸಹ ವೈದ್ಯ ಪದವಿ ಹೊಂದಬಹುದು ಎಂಬುದನ್ನು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ಈಗಾಗಲೇ ಸಾಧಿಸಿ ತೋರಿಸುವ ಮೂಲಕ ದೊಡ್ಡ ಸಾಧನೆಯನ್ನೆ ಮೆರೆದಿದೆ.

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ” ಈ ಸಾಧನೆ, ಮೆಡಿಕಲ್‌ ಮಾಡುವ ಕನಸುಗಳನ್ನು ನನಸಾಗಿಸುವ ಹೊಸ ಆಶಾಭಾವನೆ ಮಕ್ಕಳಲ್ಲಿ ಮೂಡಿಸಿದೆ.

ಇದಕ್ಕೆ ದಾಖಲೆ ಸಮೇತ ಸಾಧಿಸಿ ತೋರಿಸಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ತಮ್ಮಲ್ಲಿ ಕಲಿತ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು 2025ರ ಸಾಲಿಗೆ “ನೀಟ್‌ ಪರೀಕ್ಷೆ”ಯಲ್ಲಿ ಪಾಸಾಗಿ ಫ್ರೀ ಮೆಡಿಕಲ್‌ ಸೀಟ್‌ ಪಡೆದಿದ್ದು ಸಂಸ್ಥೆಯ ಕಲಿಕಾ ಸಾಮರ್ಥದ ಗುಣಮಟ್ಟವನ್ನು ಎತ್ತಿ ತೋರಿಸಿದೆ.

ಹೌದು…ಪ್ರತಿಭಾವಂತರಾಗಿದ್ದರೇ ಸಾಕು, ಬಡ, ಶ್ರೀಮಂತ ಎನ್ನದೇ ಎಲ್ಲ ಮಕ್ಕಳು ಮೆಡಿಕಲ್‌ ಸೀಟ್‌ ಪಡೆಯಬಹುದು ಎಂಬುದಕ್ಕೆ ದಾರಿ ಮಾಡಿಕೊಟ್ಟಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ. ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, “ನೀಟ್‌ ಪರೀಕ್ಷೆ” ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು.

ಬೆಂಗಳೂರು ಉತ್ತರ ವಲಯ- 2025 ನೀಟ್ ಪರೀಕ್ಷೆ ಮೂಲಕ ಎಂಬಿಬಿಎಸ್ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಹಾಗು ಶಾಸಕ ಕೆ.ಗೋಪಾಲಯ್ಯ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಕ್ಕಳ ಸಾಧನೆಯನ್ನು ಕೊಂಡಾಡಿದ ಕೆ.ಗೋಪಾಲಯ್ಯ, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಕಲಿಕಾ ಗುಣಮಟ್ಟದ ವಿಷಯದಲ್ಲಿ ಬಹಳ ಉತ್ತಮ ಸಂಸ್ಥೆಯಾಗಿದೆ ಎಂದು ಪ್ರಶಂಶಿಸಿದರು.

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಂತಹ ಮಹಾಲಕ್ಷ್ಮಿ ಲೇಔಟ್ ಹಾಗೂ ರಾಜಾಜಿನಗರದ 45ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಬಿಬಿಎಸ್ ಪ್ರವೇಶ ಪಡೆದಿರುವುದು ತಮಗೆ ವೈಯಕ್ತಿಕವಾಗಿ ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.

ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಹಾಗೂ ಸಂಸ್ಕಾರವನ್ನು ಕಲಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

ಇದರ ಜೊತೆಗೆ ವಿದ್ಯಾರ್ಥಿಗಳು ಉತ್ತಮವಾದ ಸಂಸ್ಕೃತಿಯನ್ನು ಕಲಿತು ಹೇಗೆ ಹೊರಹೊಮ್ಮಬೇಕು ಎಂಬುದನ್ನು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಉತ್ತಮ ಸಂಸ್ಕ್ರತಿಯನ್ನು ಕಲಿಸುತ್ತಿದೆ ಎಂಬುದಕ್ಕೆ ಈ ಸಾಧನೆಯೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈಗ ಮೆಡಿಕಲ್‌ ವ್ಯಾಸಂಗಕ್ಕೆ ಪ್ರವೇಶಿಸುತ್ತಿರುವ ಮಕ್ಕಳು, ಮುಂದೆ ಇನ್ನಷ್ಟು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯದಲ್ಲಿ ಉತ್ತಮ ಸೇವೆ ಸಲ್ಲಿಸಲಿ ಎಂದು ಆಶಿಸಿದರು.

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ವತಿಯಿಂದ ಸಾವಿರಾರು ವಿದ್ಯಾರ್ಥಿಗಳು ಮುಂದೆಯು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೆಡಿಕಲ್‌ ಸೀಟುಗಳನ್ನು ಪಡೆಯುವಂತಾಗಲಿ ಎಂದು ಹೇಳಿದರು.

ಇದಕ್ಕೂ ಮುನ್ನ ಮೆಡಿಕಲ್‌ ಸೀಟುಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಕೆ.ಗೋಪಾಲಯ್ಯ ಸನ್ಮಾನಿಸಿದರು.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button