DistrictShivamogga

ಕೆ.ಎಸ್.ಆರ್.ಟಿ.ಸಿ ಬಸ್‌, ಕಾರು ಮುಖಾಮುಖಿ ಡಿಕ್ಕಿ|ಕಾರ್‌ನಲ್ಲಿದ್ದ ನಾಲ್ವರ ದುರ್ಮರಣ,ಮೂವರಿಗೆ ಗಾಯ|ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಸ್‌ ಮತ್ತು ಕಾರ್‌ ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಶ್ರೀಮತಿ ಫಾತೀಮ ಬಿ, 70 ವರ್ಷ, ಮತ್ತು ರಿಹಾನ್ 14 ವರ್ಷ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 4 ಜನರು ಸ್ಥಳದಲ್ಲಿ ಸಾವನ್ನಪ್ಪಿದ್ದ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತೀಪುರದ ಭುವನೇಶ್ವರಿ ದೇವಸ್ಥಾನದ ಎದುರಿನ ತಿರುವು ರಸ್ತೆಯಲ್ಲಿ ನಡೆದಿದೆ.

ಮಂಗಳವಾರದಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕೆಎ 19 ಎಫ್ 3539 ನಂಬರಿನ ಕೆ.ಎಸ್.ಆರ್.ಟಿ.ಸಿ ಬಸ್ ಮಂಗಳೂರಿನಿಂದ ರಾಯಚೂರಿಗೆ ಹೊರಟಿದ್ದಾಗ ಸ್ವಿಫ್ಟ್ ಡಿಜೈರ್ ಕಾರೊಂದು ಮಹೀಂದ್ರಾ ಟೆಂಪೋವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವ ಪ್ರಯತ್ನದಲ್ಲಿದ್ದಾಗ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಸ್‌ ಮತ್ತು ಕಾರ್‌ ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಶ್ರೀಮತಿ ಫಾತೀಮ ಬಿ, 70 ವರ್ಷ, ಮತ್ತು ರಿಹಾನ್ 14 ವರ್ಷ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಹಿಲ್ 9 ವರ್ಷ ಮತ್ತು ಝಯಾನ್ 12 ವರ್ಷ ಇಬ್ಬರು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಕಾರ್‌ನಲ್ಲಿದ್ದ ಶ್ರೀಮತಿ ಝರೀನಾ, 35 ವರ್ಷ, ಕುಮಾರಿ. ರಿಹಾ 12 ವರ್ಷ ಹಾಗೂ ಕಾರ್ ಚಾಲಕ ಜಯಾನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದ ಎಲ್ಲರೂ ಮೇಣಸೇ ಗ್ರಾಮ ಶೃಂಗೇರಿ ತಾಲ್ಲೂಕುಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

Follow Us

Leave a Reply

Your email address will not be published. Required fields are marked *

Back to top button