“ಪ್ರಿವೆಂಟಿವ್ ಹೆಲ್ತಕಿಟ್, ಟೂಲ್ಕಿಟ್” ಖರೀಧಿಯಲ್ಲಿ ಭಾರಿ ಅವ್ಯವಹಾರ|ಸಂತೋಷ್ ಲಾಡ್ನ ಕರ್ಮಕಾಂಡ|ತನಿಖೆಗೆ ಸದನದಲ್ಲಿ ಒತ್ತಾಯ ಮಾಡ್ತೀರಾ? ಆರ್ ಅಶೋಕ್ ಸರ್..
ಅನಿಮೀಯಾ ಆದ ಕಾರ್ಮಿಕರಿಗೆ ಪ್ರಿವೆಂಟಿವ್ ಹೆಲ್ತ್ಕಿಟ್ ಯೋಜನೆ ಅಡಿಯಲ್ಲಿ ನೀಡಲಾಗುವ ಔಷಧಿಗಳ ಬೆಲೆ ನೋಡಿದರೇ, ಬ್ರಹ್ಮಾಂಡ ಭ್ರಷ್ಟರು ತಲೆತಿರುಗಿ ಬೀಳಬೇಕು. ಮಾರುಕಟ್ಟೆ ದರಕ್ಕಿಂತ ಹತ್ತು ಪಟ್ಟು ಹೆಚ್ಚಿನ ದರ ನೀಡಿದ ಬಗ್ಗೆ ಲೆಕ್ಕ ತೋರಿಸಲಾಗಿದೆ.

ಈ ಕೆಳಗೆ ನೀಡಿರುವ ವರದಿ ಕೇವಲ ಮುಖ್ಯಾಂಶಗಳು ಮಾತ್ರ..
Breking News Only
ಬಡವರ ಭಕ್ಷಕ ಎಂದು ಕುಖ್ಯಾತಿ ಪಡೆದಿರುವ ಸಂತೋಷ್ ಲಾಡ್, ಕಾರ್ಮಿಕ ಸಚಿವರಾದ ನಂತರ ನಡೆಸಿರುವ ಅವ್ಯವಹಾರ ಬಹುಷಃ ಇನ್ನೊಂದು ವರುಷಕ್ಕೆ ಸಾವಿರ ಕೋಟಿರೂ. ದಾಟುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಪ್ರಿವೆಂಟಿವ್ ಹೆಲ್ತ್ಕಿಟ್, ಟೂಲ್ಕಿಟ್ ಯೋಜನೆಗಳಲ್ಲಿ ಸಂತೋಷ್ ಲಾಡ್ ನಡೆಸಿರುವ ಅಪರಾತಪರಾ ಎಂತಹವರನ್ನು ಬೆಚ್ಚಿ ಬೀಳಿಸಲಿದೆ.
ಉದಾಹರಣೆಗೆ ಅನಿಮೀಯಾ ಆದ ಕಾರ್ಮಿಕರಿಗೆ ಪ್ರಿವೆಂಟಿವ್ ಹೆಲ್ತ್ಕಿಟ್ ಯೋಜನೆ ಅಡಿಯಲ್ಲಿ ನೀಡಲಾಗುವ ಔಷಧಿಗಳ ಬೆಲೆ ನೋಡಿದರೇ, ಬ್ರಹ್ಮಾಂಡ ಭ್ರಷ್ಟರು ತಲೆತಿರುಗಿ ಬೀಳಬೇಕು. ಮಾರುಕಟ್ಟೆ ದರಕ್ಕಿಂತ ಹತ್ತು ಪಟ್ಟು ಹೆಚ್ಚಿನ ದರ ನೀಡಿದ ಬಗ್ಗೆ ಲೆಕ್ಕ ತೋರಿಸಲಾಗಿದೆ.
ಕಾರ್ಮಿಕರಿಗೆ ನೀಡಲಾಗುವ ಟೂಲ್ಕಿಟ್ ಮತ್ತು ಸುರಕ್ಷತಾ ಕಿಟ್ ಖರೀಧಿಯಲ್ಲಿಯು ಭಾರಿ ಅವ್ಯವಹಾರ ನಡೆಸಲಾಗಿದೆ. ವಿಚಿತ್ರ ಎಂದರೇ ಈ ಕುರಿತು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ಕೇಳಿದ ಮಾಹಿತಿಯಲ್ಲಿ ಕಾರ್ಮಿಕ ಇಲಾಖೆ ನೀಡಿದೆ.
ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ನೂರಾರು ಕೋಟಿರೂಗಳ ಅವ್ಯವಹಾರದ ಸಂಪೂರ್ಣ ಮಾಹಿತಿ ಆರ್.ಅಶೋಕ್ ಅವರ ಬಳಿ ಇದೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕರ ಹೆಸರಿನಲ್ಲಿ ನಡೆದಿರುವ ಈ ಲೂಟಿ ದಂಧೆಯ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಈಗ ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಕೇಳ್ತಾರಾ? ಇದರ ತನಿಖೆಗೆ ಒತ್ತಾಯ ಮಾಡ್ತಾರಾ? ಕಾದು ನೋಡೋಣ..
ಇದರ ಸಂಪೂರ್ಣ ತನಿಖಾ ವರದಿ ಇನ್ನಷ್ಟೇ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ..
ವರದಿ: ಇನವೆಸ್ಟಿವ್ಗೇಟ್ ಟೀಮ್
ನ್ಯೂಇಂಡಿಯಾ ಕನ್ನಡ
ಬೆಂಗಳೂರು.






