DistrictKarnatakaNationalShivamoggaUttara Kannada

Shivmogga:ಸಮಾಜದಲ್ಲಿ ಶಾಂತಿ ನೆಲೆಸಲು ಭಗವದ್ಗೀತೆ ಅಭಿಯಾನ ಪ್ರೇರಣೆಯಾಗಲಿ-ಬಿ ಎಸ್‌ ಯಡಿಯೂರಪ್ಪ

ಭಗವದ್ಗೀತೆ ಸದಾ ನಮ್ಮ ರಕ್ಷಣೆಗೆ ಇರುವ ಪವಿತ್ರ ಗ್ರಂಥವಾಗಿದೆ. ಅದರ ಸದುಪಯೋಗ ಎಲ್ಲರೂ ಮಾಡಿಕೊಳ್ಳಬೇಕು. ಮಹಾತ್ಮಾ ಗಾಂಧಿಜಿಯವರು ಭಗವದ್ಗೀತೆಯನ್ನು ತಾಯಿ ಸಮಾನ ಎಂದು ಪೂಜಿಸುತ್ತಿದ್ದರು ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹೇಳಿದರು.

ಸೋಂದಾ ಶ್ರೀಗಳು ಹಮ್ಮಿಕೊಂಡಿರುವ ಶ್ರೀ ಭಗವದ್ಗೀತೆಯ ಅಭಿಯಾನದ ಮೂಲಕ ಸಮಾಜದಲ್ಲಿ ಶಾಂತಿ ನೆಲಸಬೇಕಿದೆ. ಭಗವದ್ಗೀತೆಯ ಮೂಲಕ ಶ್ರೀಕೃಷ್ಣನು ವಿಶ್ವಕ್ಕೆ ಅನೇಕ ದಿವ್ಯ ಸಂದೇಶಗಳನ್ನು ನೀಡಿದ್ದಾನೆ. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯರವರ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶಿರಸಿ, ಸ್ವರ್ಣರಶ್ಮಿ ಟ್ರಸ್ಟ್ ,ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರದಂದು ಆಯೋಜಿಸಲಾಗಿದ್ದ “ಶ್ರೀ ಭಗವದ್ಗೀತಾ ಅಭಿಯಾನ–2025” ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಭಗವದ್ಗೀತೆ ಸದಾ ನಮ್ಮ ರಕ್ಷಣೆಗೆ ಇರುವ ಪವಿತ್ರ ಗ್ರಂಥವಾಗಿದೆ. ಅದರ ಸದುಪಯೋಗ ಎಲ್ಲರೂ ಮಾಡಿಕೊಳ್ಳಬೇಕು.

ಮಹಾತ್ಮಾ ಗಾಂಧಿಜಿಯವರು ಭಗವದ್ಗೀತೆಯನ್ನು ತಾಯಿ ಸಮಾನ ಎಂದು ಪೂಜಿಸುತ್ತಿದ್ದರು ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹೇಳಿದರು.

ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ ಮಾತನಾಡಿ, ಭಗವದ್ಗೀತೆಯಲ್ಲಿರುವ ಜ್ಞಾನವನ್ನು ಸಂಪಾದಿಸುವದರಿಂದ ಎಂದಿಗೂ ನಷ್ಟವಾಗುವದಿಲ್ಲ ಮತ್ತು ಅಂತ್ಯವಾಗುವದಿಲ್ಲ ಇದನ್ನು ಅರಿತು ಭಗವದ್ಗೀತೆಯ ಪಠಣವನ್ನು ಎಲ್ಲರೂ ಮಾಡಬೇಕು ಎಂದು ಪ್ರತಿಪಾದಿಸಿದರು.

ಮಾನವನ ಅನೇಕ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ. ಇದನ್ನು ಪುಷ್ಟಿಕರಿಸುವಂತಹ ಅನೇಕ ನಿದರ್ಶನಗಳು ಅನಾಧಿಕಾಲದಿಂದಲೂ ಇತಿಹಾಸದಲ್ಲಿ ನಾವು ನೋಡಬಹುದಾಗಿದೆ ಎಂದರು.

ಭಗವದ್ಗೀತೆಯು ಮಾನವ ಸಮಾಜದ ಕಲ್ಯಾಣಕ್ಕಾಗಿ ಇರುವದಿರಂದ ಈ ಗ್ರಂಥ ವಿಶ್ವಕ್ಕೆ ಪೂಜ್ಯನೀಯ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ ಅಭಿಪ್ರಾಯಪಟ್ಟರು.

ಇಡೀ ಜಗತ್ತಿನ ಎಲ್ಲ ಆಗು ಹೋಗುಗಳಿಗೆ ಭಗವದ್ಗೀತೆಯ ಸಾರಗಳು ಅತಿ ಅವಶ್ಯಕವಾಗಿದೆ. ಭಗವದ್ಗೀತೆಯ ದಾರಿಯಲ್ಲಿ ನಡೆದರೇ ಇಡೀ ವಿಶ್ವವೇ ಸುಕ್ಷೇಲವಾಗಲು ಸಾಧ್ಯ ಎಂದು ಹೇಳಿದರು.

ಅಧರ್ಮ ಮುನ್ನಲೆಗೆ ಬಂದಾಗ ಧರ್ಮ ಉಳಿಸಲು ಶ್ರೀಕೃಷ್ಣನು ಬಂದಂತೇ, ಕೇರಳದಲ್ಲಿ ಆದಿ ಶಂಕರಾಚಾರ್ಯರು ಹಾಗು ಕರ್ನಾಟಕದಲ್ಲಿ ಬಸವೇಶ್ವರರ ರೂಪದಲ್ಲಿಯು ಬಂದಿದ್ದಾರೆ ಎಂದು ಅರ್ಲೇಕರ ಹೇಳಿದರು.

ಭಗವದ್ಗೀತೆ ಅಭಿಯಾನದ ರೂವಾರಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು, ಭಗವದ್ಗೀತೆ ಅಭಿಯಾನದ ಉದ್ದೇಶವನ್ನು ವಿವರಿಸಿದರು.

ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಮದ್ದು ಭಗವದ್ಗೀತೆಯಲ್ಲಿ ಇದೆ. ಇದನ್ನು ನೈತಿಕ ಪುನರುತ್ಥಾನದ ಮೂಲಕ ನಾವು ಸಾಧಿಸಲು ಅವಕಾಶವಿದೆ ಎಂದು ಹೇಳಿದರು.

ಸಮಾಜದಲ್ಲಿ ಮಾನಸಿಕ ಖಿನ್ನತೆಯಿಂದ ಅನೇಕ ರೋಗಗಳಿಂದ ಜನರು ಬಳಲುವಂತಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತೆಯಲ್ಲಿ ದಾರಿ ತೋರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವ ಎಚ್‌ ಡಿ ಕುಮಾರಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಪಾಠಗಳು ಇರಬೇಕಿದೆ. ಇದನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸೋಂದಾ ಶ್ರೀಗಳು ಆಯೋಜಿಸಿರುವ ಭಗವದ್ಗೀತೆಯ ಅಭಿಯಾನವು ಪ್ರತಿ ಶಾಲಾ ಮಟ್ಟದಲ್ಲಿಯು ನಡೆಯಬೇಕು ಎಂದು ಹೇಳಿದರು.

ಇದೇ ವೇಳೆ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಗವದ್ಗೀತೆಯ 11ನೇ ಅಧ್ಯಾಯದ ಶ್ಲೋಕವನ್ನು ಪಠಣ ಮಾಡಿದರು.

ಭಗವದ್ಗೀತೆಯ ಶಾಶ್ವತ ಸಂದೇಶದಲ್ಲಿ ಹೇಳಿರುವ ಧರ್ಮ, ಜ್ಞಾನ, ಶಾಂತಿ ಮತ್ತು ಮಾನವೀಯತೆಯ ಸಾರಾಂಶವನ್ನು ಮತ್ತೊಮ್ಮೆ ಸಮಾಜಕ್ಕೆ ಪ್ರಸರಿಸುವ ಮೂಲಕ ಶ್ರೀ ಭಗವದ್ಗೀತಾ ಅಭಿಯಾನ–2025 ರ ರಾಜ್ಯಮಟ್ಟದ ಮಹಾಸಮರ್ಪಣೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು, ಮುರಘಾಮಠದ ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರ ಶ್ರೀಗಳು, ಆದಿಚುಂಚನಗಿರಿ ಶಾಖಾ ಮಠದ ದಮಯಾನಂದನಾಥ ಶ್ರೀಗಳು ಹಾಗು ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ, ಭಗವದ್ಗೀತೆಯ ಮಹಾಸಮರ್ಪಣೆ ಯಶಸ್ವಿನ ರೂವಾರಿ ಹಾಗು ಲೋಕಸಭಾ ಸದಸ್ಯ ವಿ ವೈ ರಾಘವೇಂದ್ರ, ಶಾಸಕ ಡಿ ಎಸ್‌ ಅರುಣ್‌, ಅಶೋಕ್ ಜಿ. ಭಟ್, ಅಶೋಕ್ ಜಿ. ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button