KarnatakaPoliticalShivamogga

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ|ಸರ್ಕಾರದ ಪರ ನಿಯಾಸ್‌ ಸಂಸ್ಥೆ ವರದಿ? ಆರೋಪ|ಸಚಿವರ ಗೋಲ್‌ಮಾಲ್‌ ನಡೆಯಲು ಬಿಡಲ್ಲ-ಈಶ್ವರಪ್ಪ ಗುಡುಗು

ಮಾನ್ಯತೆಯೇ ಇಲ್ಲದ ಸಂಸ್ಥೆಯ ವರದಿ ಆಧರಿಸಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಯೋಜನೆ ಜಾರಿಗೆಗೆ ಪಟ್ಟು ಹಿಡಿದಿದ್ದಾರೆ ಎಂದು ಆರೋಪಿಸಿರುವ ಪರಿಸರಾಸಕ್ತರು, ನಿಯಾಸ್‌ ಸಂಸ್ಥೆಯ ವರದಿ ಬಹಿರಂಗಗೊಳಿಸುವಂತೇ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಿವಮೊಗ್ಗ: ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ವಿರೋಧಿಸಿ ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೇ, ಇನ್ನೊಂದೆಡೆ ರಾಜ್ಯ ಸರ್ಕಾರವು, ನಿಯಾಸ್‌ ಎಂಬ ಸಂಸ್ಥೆ ನೀಡಿರುವ ವರದಿಯನ್ನು ಮುಂದಿಟ್ಟುಕೊಂಡು ಯೋಜನೆ ಜಾರಿಗೆ ತರಲು ಮುಂದಾಗಿದೆ.

ಮಾನ್ಯತೆಯೇ ಇಲ್ಲದ ಸಂಸ್ಥೆಯ ವರದಿ ಆಧರಿಸಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಯೋಜನೆ ಜಾರಿಗೆಗೆ ಪಟ್ಟು ಹಿಡಿದಿದ್ದಾರೆ ಎಂದು ಆರೋಪಿಸಿರುವ ಪರಿಸರಾಸಕ್ತರು, ನಿಯಾಸ್‌ ಸಂಸ್ಥೆಯ ವರದಿ ಬಹಿರಂಗಗೊಳಿಸುವಂತೇ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರದಂದು ಪತ್ರಿಕಾಭವನದಲ್ಲಿ ನಡೆದ ಜಂಟಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರಭಕ್ತರ ಬಳಗದ ಮುಖಂಡರು, ಕೇಂದ್ರ ಸರ್ಕಾರದ ಪರಿಸರ ಇಲಾಖೆ ,ವನ್ಯಜೀವಿ ಮಂಡಳಿ ಸದಸ್ಯರ ವರದಿಗಳು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರುದ್ದವಾಗಿವೆ ಎಂದು ಹೇಳಿದರು.

ಈ ವರದಿಗಳ ಬಗ್ಗೆ ರಾಜ್ಯ ಸರ್ಕಾರವು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ 76 ಸಾವಿರ ಜನ ಸಹಿ ಹಾಕಿದ ಪತ್ರ ಡಿಸಿಗೆ ಸಲ್ಲಿಸಿದ್ದು, ಕೇಂದ್ರ ಹಾಗೂ ರಾಜ್ಯದ ಮಾನ್ಯತೆಯೇ ಇಲ್ಲದ ನಿಯಾಸ್ ಎಂಬ ಸಂಸ್ಥೆ ಯಾವಾಗ ಬಂದು ಸ್ಥಳ ಪರಿಶೀಲಿಸಿದೆ ಯಾರ ಅಭಿಪ್ರಾಯ ಸಂಗ್ರಹಿಸಿದೆ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

ನಿಯಾಸ್ ಸಂಸ್ಥೆ ಸಲ್ಲಿಸಿದ ವರದಿಯನ್ನ ಒಂದೇ ದಿನದಲ್ಲಿ ಅನುಮೋದಿಸಿ ತರಾತುರಿಯಲ್ಲಿ ಯೋಜನೆ ಜಾರಿಗೆ ಮುಂದಾಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಯೋಜನೆ ಹೆಸರಲ್ಲಿ ದುಡ್ಡುಹೊಡೆಯುವ ಕುತಂತ್ರ. ಇದನ್ನು ನೆರವೇರಲು ಬಿಡುವುದಿಲ್ಲ ಎಂದು ಕೆ.ಎಸ್‌.ಈಶ್ವರಪ್ಪ ನೇರವಾಗಿ ಆರೋಪ ಮಾಡಿದರು.

ರಾಷ್ಟ್ರಭಕ್ತರ ಬಳಗದ ಮುಖಂಡ ಶ್ರೀಕಾಂತ್ ಮಾತನಾಡಿ, ನಿಯಾಸ್ ಸಂಸ್ಥೆಯಿಂದ ಪೂರಕವಾಗುವ ರೀತಿಯಲ್ಲಿ ವರದಿ ತರಿಸಿಕೊಂಡು ರಾಜ್ಯ ಸರ್ಕಾರವು ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿದೆ ಎಂದು ಕಿಡಿಕಾರಿದರು.

ಈ ವರದಿ ಆಧರಿಸಿ ಶರಾವತಿ ಕಣಿವೆ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಕೆಪಿಸಿಎಲ್ ಸಾರ್ವಜನಿಕರು ಹಾಗೂ ನ್ಯಾಯಾಲಯವನ್ನು ದಾರಿತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.

ನಿಯಾಸ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ವರದಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಶ್ರೀಕಾಂತ್‌ ಹೇಳಿದರು.

ಹೈಕೋರ್ಟ್ ನಲ್ಲಿ ಶರಾವತಿ ಪಂಪ್ಡ್ ಪ್ರಾಜೆಕ್ಟ್‌ ಕುರಿತು ಸರ್ಕಾರ ಸಲ್ಲಿಸಿದ ಅಫಿಡೆವಿಟ್ನಲ್ಲಿ ಕೇಂದ್ರ ಸರ್ಕಾದ ತಜ್ಞರ ವರದಿಗಳಲ್ಲಿ ಅನುಮತಿ ನೀಡದಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಕೇಂದ್ರ ವನ್ಯಜೀವಿಮಂಡಳಿ ಸ್ಥಾಯಿಸಮಿತಿ ಸಭೆಯಲ್ಲಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳ ಪರಿಶೀಲನೆ ನಡೆಸಲು ನಿಯಾಸ್‌ಗೆ ಸೂಚಿಸಲು ರಾಜ್ಯ ಸರ್ಕಾರಕ್ಕೆ ಎನ್‌ಡಬ್ಲ್ಯೂಎಲ್ ಸೂಚಿಸಿತ್ತು ಎಂದು ರಾಷ್ಟ್ರಭಕ್ತರ ಬಳಗದ ಮುಖಂಡ ಶ್ರೀಕಾಂತ್ ಹೇಳಿದರು.

ಪರಿಸರವಾದಿ ಪ್ರೊ. ಬಿಎಂ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಪ್ರೊ. ಎಚ್.ಎಸ್.ಸಿಂಗ್ ಮತ್ತು ಪ್ರೊ. ಸುಕುಮಾರನ್ ನೀಡಿರುವ ವರದಿಯಲ್ಲಿ ಈ ಯೋಜನೆಯ ಬಗ್ಗೆ ಸ್ಪಷ್ಟವಾದ ವಿರೋಧ ವ್ಯಕ್ತವಾಗಿದೆ ಕೆಪಿಸಿಎಲ್ ಸಮರ್ಥನೆಯನ್ನೇ ವರದಿಯಲ್ಲಿ ಯಥಾವತ್ತಾಗಿರುವ ಇರುವದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ನಿಯಾಸ್ ಸಂಸ್ಥೆ ಸದಸ್ಯರು ನೈಜ ಪರಿಸರ ತಜ್ಞರಾಗಿದ್ದಲ್ಲಿ ವನ್ಯಜೀವಿಧಾಮಕ್ಕೆ ಧಕ್ಕೆಯುಂಟಾಗುವ ಬೇಜವಬ್ದಾರಿಯುತ ವರದಿ ನೀಡಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಬ್ಯಾಟರಿ ಚಾಲಿತ ಎನರ್ಜಿ ಸ್ಟೋರೇಜ್ ಯೋಜನೆ ಕ್ಷಮತೆ ಕಡಿಮೆ ಪರಿಸರ ನಾಶಮಾಡುವ ಯೋಜನೆಯೇ ಸೂಕ್ತವೆಂದು ಶಿಫಾರಸ್ಸು ಮಾಡುವ ಇವರುಗಳೆಲ್ಲ ಹೇಗೆ ಪರಿಸರ ವಿಜ್ಞಾನಿಗಳಾಗುವರೆಂದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಸರಕ್ಕಾಗಿ ನಾವು ಮುಖಂಡರಾದ ಜನಾರ್ಧನ ಪೈ ಅಶೋಕ್ ಕುಮಾರ್, ರಾಷ್ಟ್ರಭಕ್ತಬಳಗದ ಕಾಂತೇಶ್, ಈ ವಿಶ್ವಾಸ್, ಶ್ರೀಪತಿ ಮತ್ತಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button