DistrictShivamogga

ಕುವೆಂಪು ವಿವಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಎಬಿವಿಪಿ ವಿರೋಧ|ಫಲಿತಾಂಶದಲ್ಲಿ ಲೋಪದೋಷ ಆರೋಪ|ವಿವಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ

ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಎರಡನೆ ಸೆಮಿಸ್ಟರ್ ಪರೀಕ್ಷೆ ಹತ್ತಿರ ಬಂದ್ರೂ ಫಲಿತಾಂಶ ಪ್ರಕಟವಾಗದೇ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಪ್ರವೇಶ ಪರೀಕ್ಷಾ ಶುಲ್ಕ ಮತ್ತು ಅಂಕಪಟ್ಟಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಕುವೆಂಪು ವಿವಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ಮಂಗಳವಾರ ಪ್ರತಿಭಟನೆ ನಡೆಸಿದ ನೂರಾರು ಎಬಿವಿಪಿ ಕಾರ್ಯಕರ್ತರು, ಪ್ರವೇಶ ಪರೀಕ್ಷೆ ಹಾಗೂ ಅಂಕಪಟ್ಟಿ ಶುಲ್ಕ ಅತ್ಯಂತ ದುಬಾರಿಯಾಗಿದ್ದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿ, ವಿವಿಯ ಆವರಣಕ್ಕೆ ಆಗಮಿಸಿ, ಬಳಿಕ ಕಚೇರಿ ಆವರಣದಲ್ಲಿ ಕುಳಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಎರಡನೆ ಸೆಮಿಸ್ಟರ್ ಪರೀಕ್ಷೆ ಹತ್ತಿರ ಬಂದ್ರೂ ಫಲಿತಾಂಶ ಪ್ರಕಟವಾಗದೇ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಕೂಡಲೇ ಎಲ್ಲಾ ಸೆಮಿಸ್ಟರ್ ಫಲಿತಾಂಶ ನೀಡಬೇಕು. ಮತ್ತು ಶುಲ್ಕ ಹೆಚ್ಚಳ ಕೈಬಿಟ್ಟು ಹಿಂದಿನ ವರ್ಷದಷ್ಟೇ ಶುಲ್ಕ ವಿಧಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ವಿದ್ಯಾರ್ಥಿಗಳ ಹಿತಮರೆತು ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ ಎಂಬ ಗಂಭೀರ ಆರೋಪ ಮಾಡಿದ್ದ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆ ಕಳೆದ ವಾರವಷ್ಟೇ ಕುವೆಂಪು ವಿವಿಯಲ್ಲಿ ಪ್ರತಿಭಟನೆ ನಡೆಸಿತ್ತು.

ವಿದ್ಯಾರ್ಥಿಗಳ ಅಂಕಪಟ್ಟಿ ಸಮಸ್ಯೆ, ಫಲಿತಾಂಶದಲ್ಲಿ ಲೋಪದೋಷಗಳು, ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ಹಲವಾರು ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ರಾಜ್ಯಪಾಲರಿಗೆ ಮನವಿಯನ್ನೂ ಮಾಡಿತ್ತು.

ಇದೀಗ ಸಮಸ್ಯೆ ಬಗೆಹರಿಯದ ಹಿನ್ನಲೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಕೂಡಲೇ ಎಲ್ಲಾ ಸೆಮಿಸ್ಟರ್ ಫಲಿತಾಂಶ ನೀಡಬೇಕು, ಶುಲ್ಕ ಹೆಚ್ಚಳ ಕೈಬಿಟ್ಟು ಹಿಂದಿನ ವರ್ಷದಷ್ಟೇ ಶುಲ್ಕ ವಿಧಿಸಬೇಕು ಕುವೆಂಪು ವಿವಿ ಕುಲಪತಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೂಡಲೇ ಪರಿಹರಿಸುವಂತೆ ಒತ್ತಾಯಿಸಿದೆ.

Follow Us

Leave a Reply

Your email address will not be published. Required fields are marked *

Back to top button