CrimeDistrictShivamogga

ತೀರ್ಥಹಳ್ಳಿ ಭಾಗದ ರೈತರ ನಿದ್ದೆಗೆಡಿಸಿದ್ದ ಮೋಟಾರ್ ಕೇಬಲ್ ಕಳ್ಳನ ಸೆರೆ|ಮಾಳೂರು ಪೊಲೀಸರ ಕಾರ್ಯಾಚರಣೆ|93 ಸಾವಿರರೂ. ಮೌಲ್ಯದ ಕೇಬಲ್ ಜಪ್ತಿ|

ಬಂಧಿತನಿಂದ 93,000 ರೂ. ಮೌಲ್ಯದ , 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ ವೈರ್‌, ಆತ ಬಳಸುತ್ತಿದ್ದ ಅಂದಾಜು 30,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ನದಿ ತೀರದ ತೋಟಗಳಲ್ಲಿ ರೈತರು ನೀರು ಹಾಯಿಸಲು ಬಳಸುತ್ತಿದ್ದ ಬೆಲೆಬಾಳುವ ಮೋಟಾರ್ ಕೇಬಲ್ ವೈರುಗಳ ಕಳವು ಪ್ರಕರಣವನ್ನ ಭೇದಿಸಿದ ತೀರ್ಥಹಳ್ಳಿ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದ 4ನೇ ಕ್ರಾಸ್ ನಿವಾಸಿ, ಕುಮಾರ ಎಸ್.ಕೆ 31 ವರ್ಷ ಬಂಧಿತ ಆರೋಪಿ. ಬಂಧಿತನಿಂದ 93,000 ರೂ. ಮೌಲ್ಯದ , 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ ವೈರ್‌, ಆತ ಬಳಸುತ್ತಿದ್ದ ಅಂದಾಜು 30,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ನಿಡಗಳಲೆ ಗ್ರಾಮದ ಮುಡುಬಾ, ಮುಂಡುವಳ್ಳಿ ,ಹೊಸಳ್ಳಿ ಹಾಗೂ ತೂದೂರು ಗ್ರಾಮದ ಸುತ್ತಮುತ್ತಲಿನ ರೈತರು ತಮ್ಮ ತೋಟಗಳಿಗೆ ನೀರು ಹಾಯಿಸಲು ತುಂಗಾ ನದಿಗೆ ಮೋಟಾರ್‌ಗಳನ್ನು ಅಳವಡಿಸಿದ್ದರು.

ಆದರೆ, ಕಳ್ಳರು ಈ ಮೋಟಾರ್‌ಗಳ ಬೆಲೆಬಾಳುವ ಕೇಬಲ್ ವೈರುಗಳನ್ನು ಕತ್ತರಿಸಿ ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ರೈತರು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸುನೀಲ್ ಬಿಸಿ ಪಿಎಸ್ ಐ, ಎ ಎಸ್ ಐ ನಾಗರಾಜ್ ಬಿ , ಸುರೇಶ್ ಎನ್ ,ಸಿಬ್ಬಂದಿಗಳಾದ ಸುರಕ್ಷಿತ,ಪುನೀತ್ ಕುಮಾರ್ ಕೇಶವ ಮೂರ್ತಿ ಹೆಚ್ , ಸಂತೋಷ್ ಕುಮಾರ್ , ಕೇಶವ್ ಕುಮಾರ್ ಸಾದುದ್ದೀನ್, ಮಂಜು , ವಸಂತ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಪ್ರಕರಣ ಭೇದಿಸಿದ್ದು, ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಬಿ ನಿಖಿಲ್ ಅಭಿನಂದಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button