DistrictShivamogga

ಕೋರ್ಟ್‌ ಆದೇಶ ಎಂದು ತೋರಿಸಿ ಮೋಸ|ಸರ್ಕಾರಿ ಶಾಲಾ ಕಟ್ಟಡವನ್ನೆ ಕೆಡವಿದ ಭೂಪರು|ಮರು ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಸರ್ಕಾರಿ ಶಾಲಾ ಕಟ್ಟಡಕ್ಕೆ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ, ಕಿಟಿಕಿ ಬಾಗಿಲುಗಳನ್ನ ಹೊತ್ತೊಯ್ದು ಗುಜರಿಗೆ ಮಾರಲಾಗಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಶಿವಮೊಗ್ಗ: ನ್ಯಾಯಾಲಯದ ನಕಲಿ ಆದೇಶ ಮುಂದಿಟ್ಟುಕೊಂಡು ಕೆಲ ವ್ಯಕ್ತಿಗಳು ಮಂಗೋಟೆ ಗ್ರಾಮಪಂಚಾಯ್ತಿಗೆ ಸೇರಿದ ಸರ್ಕಾರಿ ಶಾಲಾ ಕಟ್ಟಡವನ್ನ ಏಕಾಏಕಿ ಬೀಳಿಸಿರುವುದನ್ನ ಖಂಡಿಸಿ, ಮಂಗೋಟೆ ಗ್ರಾಮಸ್ಥರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿರು.

ಹೊಳೆಹೊನ್ನೂರು ವ್ಯಾಪ್ತಿಯ ಮಂಗೋಟೆ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡವನ್ನ ಮೂವರು ಖಾಸಗೀ ವ್ಯಕ್ತಿಗಳು ಶುಕ್ರವಾರ ಜೆಸಿಬಿ ತರಿಸಿ ಏಕಾಏಕಿ ಅತಿಕ್ರಮಣ ಮಾಡಿ ತೆರವುಗೊಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕೃತ್ಯವನ್ನು ತಡೆದಿದ್ದಲ್ಲದೇ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.

ಗ್ರಾಮಪಂಚಾಯ್ತಿಗೆ ಸೇರಿದ ಸರ್ಕಾರಿ ಆಸ್ಥಿಯಾಗಿರುವ ಹಳೆಯ ಶಾಲಾ ಕಟ್ಟಡ ಬೀಳಿಸಲು ಈವರೆಗೂ ನ್ಯಾಯಾಲಯದಲ್ಲಿ ಶಿಕ್ಷಣ ಇಲಾಖೆ ಬಿಇಒ, ಎಸ್ ಡಿ ಎಂಸಿ ಸಮಿತಿಗಾಗಾಲೀ ನೋಟಿಸ್ ನೀಡಿ ಮೊಕದ್ದಮೆಯೇ ನಡೆದಿಲ್ಲ ಹೀಗಿರುವಾಗ ಸರ್ಕಾರಿ ಶಾಲಾ ಕಟ್ಟಡ ತೆರವುಗೊಳಿಸಿದ್ದು ಅಕ್ಷಮ್ಯ ಅಪರಾಧವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲಾ ಕಟ್ಟಡಕ್ಕೆ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ, ಕಿಟಿಕಿ ಬಾಗಿಲುಗಳನ್ನ ಹೊತ್ತೊಯ್ದು ಗುಜರಿಗೆ ಮಾರಲಾಗಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಮಧ್ಯೆ ಹೊಳೆಹೊನ್ನೂರು ಠಾಣಾ ಪೊಲೀಸರು ಮಧ್ಯಸ್ಥಿಕೆ ವಹಿಸಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ನ್ಯಾಯಯುತವಾಗಿ ಶಾಲಾ ಕಟ್ಟಡದ ವಿವಾದವನ್ನ , ಜಿಲ್ಲಾಧಿಕಾರಿಗಳು ಗಮನ ಹರಿಸಿ ಬಗೆಹರಿಸಬೇಕು. ಗ್ರಾಮಪಂಚಾಯ್ತಿಗೆ ಸೇರಿದ ಸರ್ಕಾರಿ ಶಾಲೆ ಉಳಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button