CrimeDistrictShivamogga

ಆರ್‌ಎಸ್‌ಎಸ್‌ಗೆ ಬೈದವರ ಕೋಟಾದಲ್ಲಿ ಪ್ರಿಯಾಂಕ್‌ ಖರ್ಗೆಗೆ ಮಂತ್ರಿಗಿರಿ |RSS ಗೆ ಟೀಕೆ ಮಾಡದ ಕಾರಣಕ್ಕೆ ಅಜಯ್‌ಸಿಂಗ್‌ಗೆ ಕೊಕ್|ಧರ್ಮಸ್ಥಳ ಸನ್ನಿಧಿಯಲ್ಲಿ ಆಣೆ ಪ್ರಮಾಣ ಬೇಡ-ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ: ಆರ್‌ಎಸ್‌ಎಸ್ ವಿರುದ್ದ ದ್ವೇಷ ಮಾಡುತ್ತ ಬೈದಿದ್ದರಿಂದಲೇ ಪ್ರಿಯಾಂಕ್‌ ಖರ್ಗೆ ಮತ್ತು ಯತೀಂದ್ರ ಅವರಿಗೆ ಕಾಂಗ್ರೆಸ್‌ ಪಕ್ಷವು ಮಂತ್ರಿಗಿರಿ ದಯಪಾಲಿಸಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಅನ್ನು ಟೀಕಿಸದೇ ಇರುವದರಿಂದ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್‌ ಗೆ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು ವ್ಯಂಗ್ಯವಾಡಿದ್ದಾರೆ.

ಶುಕ್ರವಾರದಂದು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಭಕ್ತ ಸಂಘಟನೆಯಾದ ಆರ್‌ಎಸ್ಎಸ್ ವಿದೇಶದಲ್ಲೂ ಶಾಖೆ ತರೆದು ಸೇವೆ ಸಲ್ಲಿಸುತ್ತಿದೆ.

ಆರ್‌ಎಸ್‌ಎಸ್‌ ಸಂಘಟನೆಯು ಕಾನೂನು ಬಾಹಿರವಾಗಿದ್ದಲ್ಲಿ ಗೃಹ ಸಚಿವರೂ ಆಗಿರುವ ಪ್ರಿಯಾಂಕ್‌ ಖರ್ಗೆ ಕ್ರಮ ಕೈಗೊಳ್ಳಲಿ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸವಾಲು ಹಾಕಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ವಿಚಾರಕ್ಕೆ ಸಂಭಂದಿಸಿದಂತೆ, ಬಿಜೆಪಿ ಶಾಸಕರನ್ನು ಮಂಜುನಾಥಸ್ವಾಮಿ ಸನ್ನಿಧಿಗೆ ಕರೆದು ಆಣೆ ಪ್ರಮಾಣ ಮಾಡಿ ಒರೆಹಚ್ಚುವ ನಿಲುವನ್ನ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೀಂದ್ರ ಅವರಿಗೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸಲಹೆ ನೀಡಿದರು.

ರಾಜಕೀಯಕ್ಕಾಗಿ ಆಣೆ ಪ್ರಮಾಣದ ಮೂಲಭಕ್ತಿ ಒರೆಹಚ್ಚುವುದನ್ನ ಭಕ್ತರು ಒಪ್ಪಲ್ಲ. ಇದು ನೋವಿನ ಸಂಗತಿ ಹಾಗಾಗಿ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗುವಂತೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶೇಷಾಚಲ, ಕುಬೇರಪ್ಪ, ವಿಶ್ವಾಸ್, ಸೀತಾಲಕ್ಷ್ಮೀ, ಶಿವಾಜಿ, ಕೆಂಪಮ್ಮ ಮತ್ತಿತರರು ಉಪಸ್ಥಿತರಿದ್ದರು

Follow Us

Leave a Reply

Your email address will not be published. Required fields are marked *

Back to top button