DistrictShivamogga

ಶಿವಮೊಗ್ಗ ಮತ್ತಷ್ಟು ಅಂದಕ್ಕೆ ಸೂಡಾ ಪ್ಲ್ಯಾನ್‌|ಹೊಸ ಪಾರ್ಕ್‌ ನಿರ್ಮಾಣ-ಉದ್ಯಮಿಗಳಿಗೆ ಜವಾಬ್ದಾರಿ|15 ಕೋಟಿ ಸ್ಕೈವಾಕ್, ಸಿಸಿಟಿವಿಗೆ 5 ಕೋಟಿ ಮೀಸಲು-ಸುಂದರೇಶ್

ಸೂಡಾವತಿಯಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ 50 ಪಾರ್ಕ್ ಅಭಿವೃದ್ಧಿಗೆ ಮುಂದಾಗಿದ್ದು, ಅಭಿವೃದ್ದಿಪಡಿಸಿದ ಪಾರ್ಕ್‌ಗಳ ನಿರ್ವಹಣೆ ಜವಾಬ್ದಾರಿಯನ್ನ ಉದ್ಯಮಿಗಳಿಗೆ ನೀಡಲಾಗುವುದು ಎಂದು ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು. ‌

ಶಿವಮೊಗ್ಗ: ಸೂಡಾ ವತಿಯಿಂದ ಶಿವಮೊಗ್ಗ -ಭದ್ರಾವತಿ ಅವಳಿ ನಗರಗಳನ್ನ ಹಸರೀಕರಿಸಿ ಸ್ವಚ್ಚ ಸುಂದರ ಶಿವಮೊಗ್ಗವಾಗಿ ಕಂಗೊಳಿಸುವಂತೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ ಇಟ್ಟಿದೆ ಎಂದು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.

ಸೂಡಾ ಕಚೇರಿಯಲ್ಲಿ ಮಂಗಳವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೂಡಾ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಉದ್ಯಾನವನಗಳ ನಿರ್ವಹಣೆಗೆ ಹಲವು ಉದ್ಯಮಿಗಳು, ಸಂಸ್ಥೆಗಳು ಆಸಕ್ತಿ ತೋರಿವೆ ಎಂದರು.

ಪಾರ್ಕಗಳ ನಿರ್ವಹಣೆಗೆ ನಗರದ ಉದ್ಯಮಿಗಳ ಸಹಕಾರ ಕೋರಿದ್ದು ಸೂಡಾ ಜೊತೆ ಕೈಜೋಡಿಸಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದರು.

ಶಿವಮೊಗ್ಗ ನಗರವನ್ನ ಸೌಂದರ್ಯೀಕರಣ,ಹಸಿರೀಕರಣ, ಸ್ವಚ್ಚ ಅಪರಾಧ ಮುಕ್ತ ನಗರವಾಗಿಸಲು ಸೂಡಾ ಕೈಗೊಳ್ಳುವ ಕಾರ್ಯಗಳಿಗೆ ಬೇಕಾದ ಸಹಕಾರ ನೀಡಲು ಎಲ್ಲ ಉದ್ಯಮಿಗಳ ಜೊತೆ ಚರ್ಚೆ ನಡೆಸಲಾಗಿದೆ.

ಮುಖ್ಯವಾಗಿ ಉದ್ಯಮಿ ಕಿಮ್ಮನೆ ರತ್ನಾಕರ್ ಸೇರಿದಂತೆ ಬಹುತೇಕ ಉದ್ಯಮಿಗಳು, ಎಲ್ಲ ಆಸ್ಪತ್ರೆಗಳ ಮಾಲೀಕರು, ರೋಟರಿ ಮತ್ತಿತರ ಸಂಘಸಂಸ್ಥೆಗಳು ಸಹಕರಿಲು ಒಪ್ಪಿಕೊಂಡಿವೆ ಎಂದರು.

ಅಪರಾಧಕೃತ್ಯ ಹೆಚ್ಚುತ್ತಿರುವ ಹಿನ್ನಲೆ ನಗರದ ಪ್ರಮುಖ ಮಾರ್ಗಗಳು, ಸೂಕ್ಷ್ಮ ಪ್ರದೇಶದಲ್ಲಿ, ಅಪರಾಧ ಕೃತ್ಯತಡೆಗೆ ಸಿಸಿಕ್ಯಾಮೆರಾ ಅಳವಡಿಸಲು 5 ಕೋಟಿ ಮೀಸಲಿಡಲಾಗಿದೆ ಎಂದು ಹೆಚ್.ಎಸ್. ಸುಂದರೇಶ್‌ ಹೇಳಿದರು.

ಇನ್ನು ನಗರದಲ್ಲಿ ಹೆಚ್ಚುತ್ತಿರುವ ಜನಸಂದಣಿಯಿಂದಾಗಿ ಪಾದಚಾರಿಗಳು ಆತಂಕದಿಂದ ಸಂಚರಿಸುವಂತಾಗಿದೆ ಎಂದರು.

ಅಲ್ಲದೆ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸುವ ಅಗತ್ಯವಿರುವ ಕಡೆ ವರ್ತುಲಗಳಲ್ಲಿ ಸ್ಕೈವಾಕ್‌, ಎಸ್ಕಲೇಟರ್‌ಗಳ ಅಳವಡಿಕೆಗೆ ಚಿಂತನೆ ನಡೆಸಿದ್ದು, ಅದಕ್ಕಾಗಿ ಸೂಡಾದಿಂದ 15ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ತಂತ್ರಜ್ಞರನ್ನು ಆಹ್ವಾನಿಸಿ, ಸಾಧಕ ಬಾಧಕ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ಸೌಂದರ್ಯವನ್ನು ಹೆಚ್ಚಿಸಿ ಹಸಿರೀಕರಣ ಮಾಡಲು ಅರಣ್ಯ ಇಲಾಖೆಗೆ 1. ಕೋಟಿ ನೀಡಿದ್ದು ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಮೂರು ವರ್ಷಗಳ ಅವಧಿಗೆ ಗಿಡಗಳನ್ನು ನೆಟ್ಟು ಬೆಳೆಸಲು ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಈ ಒಡಂಬಡಿಕೆ ಅನ್ವಯ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟು ಪೋಷಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ ಎಂದು ಹೆಚ್.ಎಸ್. ಸುಂದರೇಶ್ ಹೇಳಿದರು.

ಸೂಡಾವತಿಯಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ 50 ಪಾರ್ಕ್ ಅಭಿವೃದ್ಧಿಗೆ ಮುಂದಾಗಿದ್ದು, ಅಭಿವೃದ್ದಿಪಡಿಸಿದ ಪಾರ್ಕ್‌ಗಳ ನಿರ್ವಹಣೆ ಜವಾಬ್ದಾರಿಯನ್ನ ಉದ್ಯಮಿಗಳಿಗೆ ನೀಡಲಾಗುವುದು ಎಂದು ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು. ‌

ನೀರು, ಲೈಟ್ ,ಜಿಮ್ ಉಪಕರಣ ಅಳವಡಿಕೆ ವ್ಯವಸ್ಥಿತ ವಾಕಿಂಗ್ ಪಾಥ್‌ಗಳನ್ನು ಸೂಡಾ ನಿರ್ಮಿಸಿದರೆ ಅದರ ನಿರ್ವಹಣೆ ಜವಾಬ್ದಾರಿ ಉದ್ಯಮಿಗಳದ್ದಾಗಿದೆ ಎಂದರು.

15 ಕೆರೆಗಳನ್ನು ಗುರುತಿಸಿ ಟೆಂಡರ್ ಕರೆದಿದ್ದು ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಂದಾಯ ಇಲಾಖೆ ಮಹಾನಗರಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಒತ್ತುವರಿಯಾದ ಕರೆಗಳ ಜಾಗ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದಲ್ಲಿ ರಕ್ಷಣಾ ಬೇಲಿ ನಿರ್ಮಿಸುವುದರೊಂದಿಗೆ ಕೆರೆಗಳ ಕಾಯಕಲ್ಪಕ್ಕೆ ಶ್ರಮವಹಿಸುವುದಾಗಿ ತಿಳಿಸಿದರು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ನಿದಿಗೆ ,ಸೋಮಿನಕೊಪ್ಪ, ಜೆ.ಹೆಚ್.ಪಟೇಲ್ ಬಡಾವಣೆಗಳಲ್ಲಿ ಜಿ+7 ಮಾದರಿಯಲ್ಲಿ 1300 ಸಂಖ್ಯೆಯಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಂತರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದರು. ಸೂಡಾ ನಿರ್ಮಿಸಲಿರುವ ವಸತಿ ಸಮುಚ್ಚಯದಲ್ಲಿ ಅತ್ಯಾಧುನಿಕ ಸೌಲಭ್ಯವಿರಲಿದ್ದು, ಕ್ಲಬ್ ಹೌಸ್, ಸ್ಪೋರ್ಟ್ಸ್, ಸ್ವಿಮಿಂಗ್ ಪೂಲ್ ಇರಲಿದೆ ಎಂದು ತಿಳಿಸಿದರು.

ಸೂಡಾ ವತಿಯಿಂದ ನಿರ್ಮಿಸಲಾಗುವ ವಸತಿ ಸಮುಚ್ಚಯಕ್ಕೆ

ಹೊಸ ಮಾರ್ಗ ಸೂಚಿ ಅನ್ವಯ ನಗರದಲ್ಲಿ ಇನ್ಮುಂದೆ ನಿರ್ಮಾಣವಾಗುವ ಹೊಸ ಲೇಔಟ್‌ಗಳಲ್ಲಿ ಕಡ್ಡಾಯವಾಗಿ 40 ಅಡಿ ರಸ್ತೆ ನಿರ್ಮಿಸಬೇಕೆಂಬ ಆದೇಶವಿದೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ಬಿ.ಆರ್.ಮಂಜುನಾಥ್‌, ಪ್ರವೀಣ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button