DistrictShivamogga

ಪ್ರೌಢಶಾಲೆಗಳಿಗೆ ಪಿಯೂ ಉಪನ್ಯಾಸಕರ ನಿಯೋಜನೆ |ಸರ್ಕಾರದ ಆದೇಶಕ್ಕೆ ಉಪನ್ಯಾಸಕರ ಸಂಘದ ವಿರೋಧ|ಏಕಪಕ್ಷೀಯ ನಿರ್ಧಾರ ಖಂಡಿಸಿ ಪ್ರತಿಭಟನೆ|

ಸರ್ಕಾರ ಹೊರಡಿಸಿರುವ ಏಕಪಕ್ಷೀಯ ಆದೇಶವನ್ನು ಖಂಡಿಸಿ, ಜುಲೈ‌ ಮೊದಲ ವಾರದಲ್ಲಿ‌ ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಯೋಗೀಶ್ ತಿಳಿಸಿದರು.

ಶಿವಮೊಗ್ಗ: 9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪಿಯು ಉಪನ್ಯಾಸಕರನ್ನು ನಿಯೋಜಿಸುವ ಸರ್ಕಾರದ ನಿಲುವು ಅವೈಜ್ಞಾನಿಕವಾಗಿದ್ದು ಸರ್ಕಾರದ ಏಕಪಕ್ಷೀಯ ನಿಲುವು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಿಯೂ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೇಶ್ ತಿಳಿಸಿದರು.

ಮಂಗಳವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ‌ ಮಾಹಿತಿ‌ ನೀಡಿದ ಅವರು, ಸರ್ಕಾರ ಸಾಮಾನ್ಯ ಸೇವೆಗಳು, ಪದವಿಪೂರ್ವ ಶಿಕ್ಷಣ, ನೇಮಕಾತಿ ನಿಯಮ 2026 ಕ್ಕೆ ತಿದ್ದುಪಡಿ ಕರಡು ಆದೇಶ ಹೊರಡಿಸಿರುವುದನ್ನ ಕರ್ನಾಟಕ ರಾಜ್ಯ ಪಪೂ ಉಪನ್ಯಾಸಕರ ಸಂಘದ ವಿರೋಧವಿದೆ ಎಂದರು.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಇಂತಹ ಮಹತ್ವದ ನಿರ್ಧಾರವನ್ನು ಸರ್ಕಾರವು ತಜ್ಞರ ಜೊತೆ ಯಾವುದೇ ಸಮಾಲೋಚನೆ ನಡೆಸದೆ, ಅಧ್ಯಯನ ಕೈಗೊಳ್ಳದೆ ಏಕಪಕ್ಷೀಯವಾಗಿ ಪ್ರಕಟಿಸಿರುವುದಕ್ಕೆ ಉಪನ್ಯಾಸಕರ ಸಂಘ ಆಕ್ರೋಶ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಸರ್ಕಾರ ಹೊರಡಿಸಿರುವ ಏಕಪಕ್ಷೀಯ ಆದೇಶವನ್ನು ಖಂಡಿಸಿ, ಜುಲೈ‌ ಮೊದಲ ವಾರದಲ್ಲಿ‌ ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಯೋಗೀಶ್ ತಿಳಿಸಿದರು.

ಈ ಕರಡು ಪ್ರಸ್ತಾವನೆ ಯಾವುದೇ ಗಂಭೀರ ಶೈಕ್ಷಣಿಕ ಸುಧಾರಣೆಯನ್ನು ಒಳಗೊಂಡಿರುವುದಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಕರ್ನಾಟಕದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಅಪಾಯದ ಪ್ರಪಾತಕ್ಕೆ ತಳ್ಳುವ ಅಧಿಕಾರಿಶಾಹಿಗಳ ಆಡಳಿತಾತ್ಮಕ ಪ್ರಯೋಗದ ಹುನ್ನಾರವಾಗಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ಹಾಗೂ ರಾಷ್ಟ್ರೀಯ ಶಾಲಾ ಶಿಕ್ಷಣ ಚೌಕಟ್ಟು-2023 (NCFSE-2023) ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದರು.

Follow Us

Leave a Reply

Your email address will not be published. Required fields are marked *

Back to top button