DistrictShivamogga

ಶಿವಮೊಗ್ಗ: ಪ್ರಸಿದ್ದ ಮಾರಿಕಾಂಬಾ ಜಾತ್ರೆಗೆ ಸಿದ್ದತೆ ಶುರು!ದೇವಿಯ ವಿಸರ್ಜನಾ ಮೂರ್ತಿ ಕೆತ್ತನೆಗೆ ಪತ್ರಕರ್ತ ಎನ್‌.ಮಂಜುನಾಥ್‌ ಚಾಲನೆ|ದೇವಿ ತವರು ಮನೆಯಲ್ಲಿ ಶಾಸ್ತೋಕ್ತ ಪೂಜೆ

ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್‌ ಮಂಜುನಾಥ್‌ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಮೂರ್ತಿ ಕೆತ್ತನೆಯ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಶಿವಮೊಗ್ಗ: ಪ್ರಸಿದ್ದ ಕೋಟೆ ಮಾರಿಕಾಂಬ ಜಾತ್ರೆಯು ಬರುವ ಫೆ. 24 ರಿಂದ ಫೆ, 28 ರವರೆಗೆ 5 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ದೇವಿಯ ವಿಸರ್ಜನಾ ಮೂರ್ತಿ ಕೆತ್ತನೆ ಮಾಡಲು ಕಳೆದ ವಾರ ಮಡಿವಾಳರು ಕಾಡಿಗೆ ಹೋಗಿ ಮರ ತಂದು ಪೂಜೆ ಸಲ್ಲಿಸಿ ವಿಶ್ವಕರ್ಮ ಸಮಾಜಕ್ಕೆ ಹಸ್ತಾಂತರಿಸಿದ್ದಾರೆ.

ಈ ಮಧ್ಯೆ ಮಾರಿಕಾಂಬ ದೇವಿಯ ತವರು ಮನೆಯಾದ ಗಾಂಧಿ ಬಝಾರನಲ್ಲಿ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್‌ ಮಂಜುನಾಥ್‌ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಮೂರ್ತಿ ಕೆತ್ತನೆಯ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್‌ ಮಂಜುನಾಥ್‌

1964 ರಿಂದಲೂ ಕೋಟೆ ಮಾರಿಕಾಂಬ ದೇವಿಯ ವಿಗ್ರಹ ಮೂರ್ತಿಯನ್ನು ಶಿಲ್ಪಿ ಕಾಶೀನಾಥ್ ಕೆತ್ತನೆ ಮಾಡಿಕೊಂಡು ಬಂದಿದ್ದಾರೆ.

ವೃದ್ಯಾಪವಿದ್ದರೂ ಸಹ ಈ ಬಾರಿಯು ದೇವಿಯ ಆಶೀರ್ವಾದದಿಂದಲೇ ತಮ್ಮಿಂದ ಈ ಕೆತ್ತನೆ ಕಾರ್ಯ ಪೂರ್ಣಗೊಳಿಸುತ್ತಾಳೆ ಎಂದು ಶಿಲ್ಪಿ ಕಾಶೀನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಎನ್ ಉಮಾಪತಿ,ಎಸ್ ಪಿ ಶೇಷಾದ್ರಿ,ಸುನೀಲ್,ನವುಲೆ ಶ್ರೀಧರ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button