KarnatakaShivamogga

ಪ್ರಧಾನಿಯಾಗಿ ನರೇಂದ್ರ ಮೋದಿ ಇತಿಹಾಸ ನಿರ್ಮಾಣ| ಮಲೆನಾಡು ಅಭಿವೃದ್ಧಿ ಪಾಲಿಗೆ ಪ್ರಗತಿಯ ಯುಗ-ಸಂಸದ ಬಿ.ವೈ.ರಾಘವೇಂದ್ರ

ಕಳೆದ ಒಂದು ದಶಕದಲ್ಲಿ ಭಾರತ ಮೋದಿ ಅವರ ನೇತೃತ್ವದ ಸರ್ಕಾರದ ಆಡಳಿತವನ್ನಷ್ಟೇ ಕಂಡಿಲ್ಲ, ಬದಲಿಗೆ ಅಭೂತಪೂರ್ವ ‘ರಾಷ್ಟ್ರೀಯ ಪುನರುತ್ಥಾನ’ಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗ: ಭಾರತದ ಪ್ರಜಾಸತ್ತಾತ್ಮಕ ಇತಿಹಾಸದ ಅಸಾಧಾರಣ ಸಾಧನೆಯ ಮೈಲಿಗಲ್ಲು ಪ್ರಧಾನಿ ನರೇಂದ್ರ ಮೋದಿ ಅವರ ಮುಡಿಗೇರಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಸತತ 4,399 ದಿನಗಳ ಕಾಲ ಸಾರ್ಥಕ, ದೂರದರ್ಶಿ ಹಾಗೂ ಪರಿವರ್ತನಾತ್ಮಕ ಜನಸೇವೆಯನ್ನು ಪೂರೈಸಿ, ದೇಶದ ಅತ್ಯಂತ ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಯಾಗಿ ಇತಿಹಾಸ ನಿರ್ಮಿಸಿರುವ ಹೆಮ್ಮೆಯ ವಿಶ್ವನಾಯಕ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನರೇಂದ್ರ ಮೋದಿ ಅವರು ಸುದೀರ್ಘ ಅವಧಿ ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸಂಸದ ಬಿ.ವೈ.ರಾಘವೇಂದ್ರ, ಪ್ರಧಾನಿ ಮೋದಿ ಅವರು, ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಗಳು ಮಾತ್ರವಲ್ಲ ‘ಶಾಶ್ವತ ಸಾಧನೆಗಳ ಸರದಾರರೂ’ ಆಗಿದ್ದಾರೆ ಎಂದು ಬಣ್ಣಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಭಾರತ ಮೋದಿ ಅವರ ನೇತೃತ್ವದ ಸರ್ಕಾರದ ಆಡಳಿತವನ್ನಷ್ಟೇ ಕಂಡಿಲ್ಲ, ಬದಲಿಗೆ ಅಭೂತಪೂರ್ವ ‘ರಾಷ್ಟ್ರೀಯ ಪುನರುತ್ಥಾನ’ಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸುವುದರಿಂದ ಹಿಡಿದು, ಭಾರತವನ್ನು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಬೆಳೆಸುವವರೆಗೆ, ಜಾಗತಿಕ ಮಟ್ಟದ ಮೂಲಸೌಕರ್ಯ ಕ್ರಾಂತಿ, ಡಿಜಿಟಲ್ ಒಳಗೊಳ್ಳುವಿಕೆ ಹಾಗೂ ಪ್ರತಿಯೊಬ್ಬ ಭಾರತೀಯನಂಲ್ಲಿ ದೇಶದ ಬಗ್ಗೆ ಹೆಮ್ಮೆಯನ್ನು ಮರುಸ್ಥಾಪಿಸುವ ಮೂಲಕ ಪ್ರಧಾನಿ ಮೋದಿ ಅವರು “ದೇಶ ಮೊದಲು” ಎಂಬ ತತ್ವದೊಂದಿಗೆ ಸುಶಾಸನದ ಸಾಧ್ಯತೆಗಳನ್ನೇ ಮರುವ್ಯಾಖ್ಯಾನಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ನಮ್ಮ ಶಿವಮೊಗ್ಗ ಮತ್ತು ಸಮಗ್ರ ಮಲೆನಾಡು ಪ್ರದೇಶದ ಪಾಲಿಗೆ ಕೂಡ ಈ 12 ವರ್ಷಗಳು ನಿಜಕ್ಕೂ ಅಭೂತಪೂರ್ವ ಪ್ರಗತಿಯ ಯುಗವಾಗಿದೆ. ಸಂಪರ್ಕ ಕ್ರಾಂತಿ, ವಾಯುಯಾನ, ರೈಲ್ವೆ, ನಗರಾಭಿವೃದ್ಧಿ ಹಾಗೂ ಗ್ರಾಮೀಣ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಐತಿಹಾಸಿಕ ಹೂಡಿಕೆಗಳು ಮತ್ತು ಯೋಜನೆಗಳು ನಮ್ಮ ಜನರ ಬದುಕಿನಲ್ಲಿ ಪ್ರಗತಿ ಮತ್ತು ಹೊಸ ಅವಕಾಶಗಳ ಮಹಾದ್ವಾರವನ್ನೇ ತೆರೆದಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಭಾರತ 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ಗುರಿಯತ್ತ ದೃಢ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಈ ಮೈಲಿಗಲ್ಲು ಕೇವಲ ದೀರ್ಘಾವಧಿ ಅಧಿಕಾರದ ಸಂಭ್ರಮವಲ್ಲ. ಬದಲಿಗೆ, ಇದು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ ಹಾಗೂ ದೇಶಸೇವೆಗಾಗಿ ಕೋಟ್ಯಂತರ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮತ್ತು ಬದ್ಧತೆಯನ್ನು ತುಂಬಿದ ಧೀಮಂತ ನಾಯಕತ್ವಕ್ಕೆ ಸಂದ ಗೌರವವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರಧಾನಿಯಾಗಿ ಸುದೀರ್ಘ ಅವಧಿ ಪೂರೈಸಿರುವ ನರೇಂದ್ರ ಮೋದಿ ಅವರ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ದೇಶದ ನಿರಂತರ ಅಭಿವೃದ್ಧಿಗಾಗಿ ಬುಧವಾರದಂದು ಶಿವಮೊಗ್ಗದ ವಿನೋಬನಗರದ ಶ್ರೀ ಅಭೀಷ್ಟ ವರ ಗಣಪತಿ ದೇವಸ್ಥಾನದಲ್ಲಿ ಸಂಸದ ಬಿ.ವೈ.ರಾಘವೇಂದ್ರ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ 12 ವರ್ಷಗಳಿಂದ ದೇಶವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು, ಕೋಟ್ಯಂತರ ಭಾರತೀಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವು ಇನ್ನಷ್ಟು ಬಲಿಷ್ಠವಾಗಿ ಸಾಕಾರಗೊಳ್ಳಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಾನ್ಯ ಪ್ರಧಾನಿಯವರ ಜನಪರ ಹಾಗೂ ದೇಶಭಕ್ತಿಯ ನಾಯಕತ್ವವು ನಮಗೆಲ್ಲರಿಗೂ ಸದಾ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರಂತರ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಬಿಜೆಪಿ 7ನೇ ವಾರ್ಡ್ ಅಧ್ಯಕ್ಷ ವಿಶ್ವನಾಥ್, ಮಾಜಿ ಪಾಲಿಕೆ ಸದಸ್ಯರಾದ ಸೋಮಸುಂದರ್, ಮಾಲತೇಶ್ ಸಿ.ಹೆಚ್., ಪದ್ಮನಾಭ ಭಟ್, ರಂಗೇಶ್ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

Follow Us

Leave a Reply

Your email address will not be published. Required fields are marked *

Back to top button