Shivamogga

ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಪತ್ರಿಕಾ ದಿನಾಚರಣೆ|ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ|ಸುದರ್ಶನ್ ಚೆನ್ನಂಗಿಹಳ್ಳಿ, ಸಿ.ಎಸ್. ಷಡಕ್ಷರಿ ಎನ್.ಮಂಜುನಾಥ್ ಉಪಸ್ಥಿತಿ

ಆರ್‌ಟಿಓ ರಸ್ತೆಯಲ್ಲಿರುವ ಪತ್ರಿಕಾಭವನದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ವಿಜಯ ಕರ್ನಾಟಕದ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿ ಉದ್ಘಾಟಿಸಲಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಜುಲೈ31 ರಂದು ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ.

ಆರ್‌ಟಿಓ ರಸ್ತೆಯಲ್ಲಿರುವ ಪತ್ರಿಕಾಭವನದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ವಿಜಯ ಕರ್ನಾಟಕದ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿ ಉದ್ಘಾಟಿಸಲಿದ್ದಾರೆ.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ದಶಕಗಳ ಕಾಲ ಸೇವೆಸಲ್ಲಿಸಿದ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ.

ಮುದ್ರಣ ವಿಭಾಗದಿಂದ ತುಂಗಾತರಂಗ ಪತ್ರಿಕೆ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ, ದೃಶ್ಯಮಾಧ್ಯಮದಿಂದ ಸುವರ್ಣ ಟಿವಿ ಹಿರಿಯ ವರದಿಗಾರ ರಾಜೇಶ್ ಕಾಮತ್, ನ್ಯೂಸ್ ಫಸ್ಟ್ ಸೀನಿಯರ್ ವೀಡಿಯೋ ಜರ್ನಲಿಸ್ಟ್ ಮಹೇಶ್ ಕೆಎ, ಹಿಂದೂ ಪತ್ರಿಕೆಯ ಛಾಯಾಗ್ರಾಹಕ ಎಸ್ ಕೆ ದಿನೇಶ್, ಮುದ್ರಣ ವಿಭಾಗದಲ್ಲಿ ಹೊಸದಿಗಂತದ ರಾಘವೇಂದ್ರ, ಜಾಹೀರಾತು ವಿಭಾಗದಿಂದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಕಾರ್ತಿಕ್ ಡಿ.ಕೆ, ಪುಟವಿನ್ಯಾಸ ವಿಭಾಗದಲ್ಲಿ ಎಸ್.ಪಿ.ಶೋಭಾ, ಆಡಳಿತ ವಿಭಾಗದಿಂದ ಟಿಸಿ ಮಂಜುನಾಥ್ , ವಾರ್ತಾ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿಎಸ್ ತಿಮ್ಮೋಳಿ , ಪತ್ರಿಕಾ ವಿತರಕ ಶಿವಪ್ಪ ಡಿ ಅವರಿಗೆ ಈ ವೇಳೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow Us

Leave a Reply

Your email address will not be published. Required fields are marked *

Back to top button