DharwadDistrict

ಹುಬ್ಬಳ್ಳಿ: ಸುಕ್ಷೇತ್ರ ಶ್ರೀ ಗುರು ರೇವಣಸಿದ್ಧೇಶ್ವರ್ ಸಂಸ್ಥಾನ ವಿರಕ್ತಮಠ|ಧನುರ್ಮಾಸ ಪೂಜೆ ಮಹಾಮಂಗಳ ಕಾರ್ಯಕ್ರಮ|ಜನ ಕಲ್ಯಾಣಕ್ಕಾಗಿ ಶ್ರೀಗಳ ಕಾರ್ಯ ಶ್ಲಾಘನೀಯ-ಬಂಗಾರೇಶ್‌ ಹಿರೇಮಠ

ಶ್ರೀಗಳು ಮಠಕ್ಕೆ ಬಂದ ನಂತರ, ಮಠದ ಅಭಿವೃದ್ಧಿಯ ಜೊತೆಗೆ ಜನ ಕಲ್ಯಾಣಕ್ಕಾಗಿ ಕೈಗೊಳ್ಳುತ್ತಿರುವ ಪೂಜೆ , ಯಜ್ಞ ,ತಪೋ ಅನುಷ್ಠಾನ ಮಠದ ಭಕ್ತರ ಜೊತೆಗೆ ಸಮಾಜಕ್ಕೂ ಒಳಿತಾಗುತ್ತಿದೆ ಎಂದು ಕೆಪಿಸಿಸಿ ಸಂಯೋಜಕ ಬಂಗಾರೇಶ್‌ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಧನುರ್ಮಾಸ ಪೂಜೆಯ ಮಹಾಮಂಗಳ ನಿಮಿತ್ತವಾಗಿ ಹುಬ್ಬಳ್ಳಿ ತಾಲ್ಲೂಕು ರಾಯನಾಳ ಗ್ರಾಮದಲ್ಲಿರುವ ಸುಕ್ಷೇತ್ರ ಶ್ರೀ ಗುರು ರೇವಣಸಿದ್ಧೇಶ್ವರ್ ಸಂಸ್ಥಾನ ವಿರಕ್ತಮಠದಲ್ಲಿ ಕರ್ತೃ ರೇವಣಸಿದ್ಧೇಶ್ವರರ ಗದ್ದುಗೆಗೆ 3001 ಕೆಜಿ ಬಿಡಿ ಹೂವಿನಲ್ಲಿ ಪುಷ್ಪ ಅಭಿಷೇಕ ಮಾಡಲಾಯಿತು.

ಇದೇ ವೇಳೆ ಶ್ರೀ ಮಠದಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಸಂಯೋಜಕ ಬಂಗಾರೇಶ್‌ ಹಿರೇಮಠ ಹಾಗೂ ಕುಟುಂಬದವರು ಭಾಗವಹಿಸಿದ್ದರು. ಶ್ರೀ ಮನಿಪ್ರ ಅಭಿನವ ರೇವಣಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದರು.

ಕೆಪಿಸಿಸಿ ಸಂಯೋಜಕ ಬಂಗಾರೇಶ್‌ ಹಿರೇಮಠ ಹಾಗೂ ಕುಟುಂಬದವರಿಗೆ ಶ್ರೀ ಮನಿಪ್ರ ಅಭಿನವ ರೇವಣಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕ ಬಂಗಾರೇಶ್‌ ಹಿರೇಮಠ, ಶ್ರೀಗಳು ಮಠಕ್ಕೆ ಬಂದ ನಂತರ, ಮಠದ ಅಭಿವೃದ್ಧಿಯ ಜೊತೆಗೆ ಜನ ಕಲ್ಯಾಣಕ್ಕಾಗಿ ಕೈಗೊಳ್ಳುತ್ತಿರುವ ಪೂಜೆ , ಯಜ್ಞ ,ತಪೋ ಅನುಷ್ಠಾನ ಮಠದ ಭಕ್ತರ ಜೊತೆಗೆ ಸಮಾಜಕ್ಕೂ ಒಳಿತಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂತಹ ಪೂಜ್ಯರ ಕಾರುಣ್ಯ ನಮ್ಮ ಮೇಲೂ ಇರುವುದು ನಮ್ಮ ಭಾಗ್ಯ ಎಂದು ಬಂಗಾರೇಶ್‌ ಹಿರೇಮಠ ಹೇಳಿದರು.

Follow Us

Leave a Reply

Your email address will not be published. Required fields are marked *

Back to top button