DistrictShivamogga

ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಹಾನಿ|ಶಾಸಕ ಚೆನ್ನಬಸಪ್ಪ ಅವರಿಂದ ಪರಿಶೀಲನೆ|ಸೂರು ಒದಗಿಸುವ ಭರವಸೆ

ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ವಿಳಂಬವಿಲ್ಲದೆ ವಿತರಿಸಲು ಎಸ್.ಎನ್‌.ಚೆನ್ನಬಸಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಿದ್ದೇಶ್ವರ ನಗರದಲ್ಲಿ ಗುರುವಾರದಂದು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹಾನಿಗೀಡಾದ ಮನೆಗೆ ಶುಕ್ರವಾರದಂದು ಶಾಸಕ ಎಸ್.ಎನ್‌.ಚೆನ್ನಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಚೆನ್ನಬಸಪ್ಪ, ಸ್ಪೋಟದ ತೀವ್ರತೆಗೆ ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಬಾಡಿಗೆದಾರರು ಕಡುಬಡವರಾಗಿದ್ದು, ಬದುಕು ದುಸ್ತರವಾಗಿದೆ.

ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ವಿಳಂಬವಿಲ್ಲದೆ ವಿತರಿಸಲು ಎಸ್.ಎನ್‌.ಚೆನ್ನಬಸಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಮೊದಲ ಆದ್ಯತೆಯಾಗಿ ತಾತ್ಕಾಲಿಕ ನೆರವು ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲು ಶಾಸಕ ಎಸ್.ಎನ್‌.ಚೆನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಶಾಸಕ ಚೆನ್ನಬಸಪ್ಪ ವೈಯಕ್ತಿಕವಾಗಿ ಹಣದ ಸಹಾಯದ ಜೊತೆ ದಿನಸಿ ವಸ್ತುಗಳನ್ನು ನೀಡಿದರು.

ಸಂತ್ರಸ್ತರಿಗೆ ಧೈರ್ಯ ತುಂಬಿದ ಶಾಸಕ ಚೆನ್ನಬಸಪ್ಪ, ಸರ್ಕಾರದಿಂದ ಶೀಘ್ರ ಸೌಕರ್ಯ ಒದಗಿಸಿಕೊಡುವದಾಗಿ ಭರವಸೆ ನೀಡಿದರು.

ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಉಪಾಧ್ಯಕ್ಷ ಜ್ಞಾನೇಶ್ವರ್ ನಾಗರಾಜ್, ಪ್ರಮುಖರಾದ ಪ್ರಭಾಕರ್ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button