AgricultureKarnatakaShivamogga

ಮಹಾರಾಷ್ಟ್ರದಲ್ಲಿ ಮಲೆನಾಡಿನ ಅಡಿಕೆ ಜಪ್ತಿ ವಿಚಾರ|ಸಿಎಂ ಫಡ್ನವೀಸ್‌ ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ|ಅಡಿಕೆ ವಾಹನ ಬಿಡುಗಡೆಗೆ ಒತ್ತಾಯ-ಸಾಥ್‌ ನೀಡಿದ ಪ್ರಲ್ಹಾದ ಜೋಶಿ

ಅಡಿಕೆಯು ರೈತರ ಜೀವನೋಪಾಯ, ಸಕಾಲಿಕ ಮಾರುಕಟ್ಟೆ ವ್ಯಾಪಾರವನ್ನು ಅವಲಂಬಿಸಿದೆ. ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ, ಅಡಿಕೆ ಕೇವಲ ಬೆಳೆಯಲ್ಲ - ಅದು ಅವರ ಜೀವನಾಧಾರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನವದೆಹಲಿ/ಶಿವಮೊಗ್ಗ: ಮಹಾರಾಷ್ಟ್ರದಲ್ಲಿ ಜಪ್ತಿ ಮಾಡಲಾಗಿರುವ ಕರ್ನಾಟಕದ ಅಡಿಕೆ ಸಾಗಣೆ ಸರಕುಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಶತಪ್ರಯತ್ನ ನಡೆಸಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಂಗಳವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಅಡಿಕೆ ರೈತರ ಪರವಾಗಿ ಮಧ್ಯಪ್ರವೇಶಿಸಿ, ಜಪ್ತಿ ಮಾಡಲಾಗಿರುವ ಅಡಿಕೆ ಸಾಗಣೆ ವಾಹನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಸಾಂಧರ್ಬಿಕ ಚಿತ್ರ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಉತ್ತಮ ಅಡಿಕೆ ಸಾಗಣೆ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯಲಾಗಿರುವುದರಿಂದ ಕರ್ನಾಟಕದಾದ್ಯಂತ ಮತ್ತು ದಕ್ಷಿಣ ಭಾರತದ ವ್ಯಾಪಕ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಬೆಳೆಗಾರರಿಗೆ ಗಣನೀಯ ತೊಂದರೆ ಉಂಟಾಗಿದೆ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ನಿಯೋಗವು ಒತ್ತಾಯಿಸಿತು.

ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿದ್ದ, ಸೂಕ್ತ ದಾಖಲೆ ಹೊಂದಿರುವ, ಸುಮಾರು 50ಕ್ಕೂ ಅಧಿಕ ಅಡಿಕೆ ಸರಕು ಸಾಗಣೆ ಟ್ರಕ್‌ಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಹಾ ಸಿಎಂ ದೇವೇಂದ್ರ ಫಡ್ನವೀಸ್‌ ಅವರಿಗೆ ನಿಯೋಗವು ವಿವರಣೆ ನೀಡಿತು.

ಅಡಿಕೆ ಬೆಳೆಗಾರರ ನಿಯೋಗವು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರನ್ನು ಇತ್ತೀಚೆಗೆ ಶಿವಮೊಗ್ಗದಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡುತ್ತಿರುವದು.
ಅಡಿಕೆ ಬೆಳೆಗಾರರ ನಿಯೋಗವು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರನ್ನು ಇತ್ತೀಚೆಗೆ ಶಿವಮೊಗ್ಗದಲ್ಲಿ ಭೇಟಿಯಾಗಿದ್ದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡುತ್ತಿರುವದು.

ನಿಯೋಗದ ಪರವಾಗಿ ಮಹಾ ಸಿಎಂ ದೇವೇಂದ್ರ ಫಡ್ನವೀಸ್‌ ಅವರ ಮುಂದೆ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಣೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಭಾರತದ ಅಡಿಕೆ ಕೃಷಿಯ ಶೇ. 70 ಕ್ಕಿಂತ ಹೆಚ್ಚು ಪಾಲನ್ನು ಕರ್ನಾಟಕ ಹೊಂದಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯವು ಅಡಿಕೆ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು.

ಮಹಾರಾಷ್ಟ್ರದಲ್ಲಿ ಅಡಿಕೆ ಬೆಳೆ ವಾಹನ ಜಪ್ತಿಯಾಗಿರುವ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಅಡಿಕೆ ಬೆಳೆಗಾರರು.

ಪ್ರಸಕ್ತ ತಡೆಹಿಡಿಯಲ್ಪಟ್ಟಿರುವ ಸರಕುಗಳು, ಜಿಎಸ್‌ಟಿ ಇನ್‌ವಾಯ್ಸ್‌ಗಳು, ಇ-ವೇ ಬಿಲ್‌ಗಳು ಮತ್ತು ಎಫ್‌ಎಸ್‌ಎಸ್‌ಎಐ ನೋಂದಣಿಗಳು ಸೇರಿದಂತೆ ಶಾಸನಬದ್ಧ ದಾಖಲೆಗಳನ್ನು ಹೊಂದಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ, ಮಹಾ ಸಿಎಂ ಗೆ ಬಿ.ವೈ.ರಾಘವೇಂದ್ರ ಮನವರಿಕೆ ಮಾಡಿದರು.

ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯುವುದು ಪೂರೈಕೆಯನ್ನು ಅಡ್ಡಿಪಡಿಸುವ ಮಾರುಕಟ್ಟೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇದರಿಂದ ರೈತರು ಮತ್ತು ಸಹಕಾರಿ ಸಂಸ್ಥೆಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನುಂಟುಮಾಡುತ್ತದೆ ಎಂದು ರಾಘವೇಂದ್ರ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಜಪ್ತಿಯಾಗಿರುವ ಅಡಿಕೆ ತುಂಬಿದ್ದ ವಾಹನಗಳ ಬಿಡುಗಡೆಗೆ ಸಹಾಯ ಕೋರಿ ಭೇಟಿಯಾಗಿದ್ದ ಅಡಿಕೆ ಬೆಳೆಗಾರರು.

ಆಧುನಿಕ ಅಡಿಕೆ ಸಂಸ್ಕರಣೆಯ ಅಂತರ್ಗತ ನಿಯಮಿತ ಯಾಂತ್ರಿಕ ಸಿಪ್ಪೆ ತೆಗೆಯುವ ಗುರುತುಗಳು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಉತ್ತಮ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯಲು ಕಾರಣವಾಗಬಾರದು ಎಂದು ನಿಯೋಗದ ಸದಸ್ಯರ ಪರವಾಗಿ ಹಾಗೂ ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಮಹಾ ಸಿಎಂ ಅವರಲ್ಲಿ ವಿನಂತಿಸಿದರು.

ಪ್ರತಿಯೊಂದು ಟ್ರಕ್‌ನಲ್ಲಿರುವ ಅಡಿಕೆಯ ಹಿಂದೆ ನೂರಾರು ಶ್ರಮಿಕ ಕೃಷಿ ಕುಟುಂಬಗಳಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿವರಿಸಿದರು.

ಅಡಿಕೆಯು ರೈತರ ಜೀವನೋಪಾಯ, ಸಕಾಲಿಕ ಮಾರುಕಟ್ಟೆ ವ್ಯಾಪಾರವನ್ನು ಅವಲಂಬಿಸಿದೆ. ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ, ಅಡಿಕೆ ಕೇವಲ ಬೆಳೆಯಲ್ಲ – ಅದು ಅವರ ಜೀವನಾಧಾರವಾಗಿದೆ ಎಂದು ತಿಳಿಸಿದರು.

ಸೂಕ್ತ ದಾಖಲೆಗಳೊಂದಿಗೆ ಮಹಾರಾಷ್ಟವನ್ನು ಹಾದುಹೋಗುವ ನೈಜ ಅಡಿಕೆ ಸರಕು ಸಾಗಣೆ ವಾಹನಗಳನ್ನು ತಡೆಹಿಡಿಯದಂತೆ ಗೌರವಪೂರ್ವಕವಾಗಿ ತಮ್ಮನ್ನು ಕೋರುತ್ತೇವೆ ಎಂದು ಸಂಸದ ರಾಘವೇಂದ್ರ ಹೇಳಿದರು.

ಸದ್ಯ ತಡೆಹಿಡಿಯಲ್ಪಟ್ಟಿರುವ ಅಡಿಕೆ ಸರಕು ಸಾಗಣೆ ವಾಹನಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಸ್ಥೆಗಳಿಗೆ ಸೇರಿದ ಸೂಕ್ತ ದಾಖಲೆ ಒಳಗೊಂಡ ಸಾಗಣೆ ಸರಕುಗಳನ್ನು ತಡೆಹಿಡಿಯದಂತೆ ಪಾರದರ್ಶಕ ಮತ್ತು ಕಾಲಬದ್ಧ ಕಾರ್ಯವಿಧಾನವನ್ನು ಜಾರಿಗೆ ತರಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ನಿಯೋಗವು ಮಹಾ ಸಿಎಂಗೆ ಒತ್ತಾಯಿಸಿತು.

ತಮ್ಮ ಒತ್ತಡ ಕಾರ್ಯಬಾಹುಳ್ಯದ ನಡುವೆಯೂ, ಅದರಲ್ಲೂ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ನಡುವೆಯೂ ಕೂಡ ಸಭೆಗೆ ಅವಕಾಶ ನೀಡಿದ್ದಕ್ಕಾಗಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರ, ಕೃತಜ್ಞತೆ ಸಲ್ಲಿಸಿದರು.

ಮಹಾ ಸಿಎಂ ದೇವೇಂದ್ರ ಫಡ್ನವೀಸ್ ಅವರು ಕೂಡಲೇ ಮಧ್ಯಪ್ರವೇಶಿಸಿ, ಭವಿಷ್ಯದಲ್ಲಿ ಅಡಿಕೆ ಸಾಗಣೆಗೆ ತಡೆರಹಿತ ವ್ಯವಸ್ಥೆ ಮಾಡಬೇಕು. ಇದರಿಂದ ಅಂತರ-ರಾಜ್ಯ ಕೃಷಿ ವ್ಯಾಪಾರವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ಸಂಸದ ಬಿ.ವೈ ರಾಘವೇಂದ್ರ ವ್ಯಕ್ತಪಡಿಸಿದರು.

ನಿಯೋಗದಲ್ಲಿ ತೀರ್ಥಹಳ್ಳಿ ಶಾಸಕ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ , ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಮ್ಕೋಸ್‌ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಕ್ಯಾಂಪ್ಕೋ ಹಾಗು ಟುಮ್ಕೋದ ಉಪಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರ್ಕೆಟಿಂಗ್ ಸಹಕಾರ ಸಂಘಗಳ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button