DistrictKarnatakaShivamogga

ಶಿವಮೊಗ್ಗ:ನಿರ್ಗಮಿತ ಜಿಲ್ಲಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ|ಪುಷ್ಟವೃಷ್ಟಿಗೈದು ವಿದಾಯ ಹೇಳಿದ ಸಿಬ್ಬಂದಿ|ಗುರುದತ್ತ ಹೆಗಡೆ ಅವರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ

ಎರಡು ವರುಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದುಕೊಂಡು ಎಂದಿಗೂ ಹಮ್ಮು ಬಿಮ್ಮು ತೋರಿಸದೇ ಸಿಬ್ಬಂದಿಯ ಪ್ರೀತಿ, ಗೌರವ ಸಂಪಾದಿಸಿದ್ದ ಗುರುದತ್ತ ಹೆಗಡೆ ಅವರನ್ನು ಸಿಬ್ಬಂದಿವರ್ಗವು ಭಾರದ ಹೃದಯದಿಂದಲೇ ಬೀಳ್ಕೊಟ್ಟರು.

ಸರ್ಕಾರಿ ಅಧಿಕಾರಿಗಳು ಬರುವುದು, ವರ್ಗಾವಣೆಗೊಳ್ಳುವುದು ಸಹಜ. ಆದರೆ ಇದ್ದಷ್ಟು ಕಾಲ ಜನರೊಂದಿಗೆ ಬೆರೆತು ಸಮಾಜಮುಖಿ ಕಾರ್ಯ ಮಾಡುವದಲ್ಲದೇ ತಮ್ಮ ಸಿಬ್ಬಂದಿಯೊಂದಿಗೂ ಉತ್ತಮ ಬಾಂಧವ್ಯ ಹೊಂದುವುದು ವಿರಳ. ಅಂತಹವರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಎರಡು ವರುಷ ಸೇವೆ ಸಲ್ಲಿಸಿ, ಈಗ ವರ್ಗಾವಣೆಗೊಂಡಿರುವ ಗುರುದತ್ತ ಹೆಗಡೆ ಅವರು ಒಬ್ಬರು.

ಆರೋಗ್ಯ ಹಾಗು ಕುಟುಂಬ ಇಲಾಖೆಯ ಆಯುಕ್ತರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೊನೆಯದಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಗುರುದತ್ತ ಹೆಗಡೆ ಅವರನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ದಾರಿಯುದ್ದಕ್ಕೂ ಪುಷ್ಪ ಮಳೆಗೈದು ಸ್ವಾಗತಿಸಿದರು.

ಎರಡು ವರುಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದುಕೊಂಡು ಎಂದಿಗೂ ಹಮ್ಮು ಬಿಮ್ಮು ತೋರಿಸದೇ ಸಿಬ್ಬಂದಿಯ ಪ್ರೀತಿ, ಗೌರವ ಸಂಪಾದಿಸಿದ್ದ ಗುರುದತ್ತ ಹೆಗಡೆ ಅವರನ್ನು ಸಿಬ್ಬಂದಿವರ್ಗವು ಭಾರದ ಹೃದಯದಿಂದಲೇ ಬೀಳ್ಕೊಟ್ಟರು.

ಗುರುದತ್ತ ಹೆಗಡೆ ಅವರ ಕಾರ್ಯವೈಖರಿಗೆ ಸಿಬ್ಬಂದಿವರ್ಗ ಅಪಾರ ಮೆಚ್ಚುಗೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಗುರುದತ್ತ ಹೆಗಡೆ ಅವರ ಪತ್ನಿಯು ಸಹ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button