DistrictShivamogga
Trending

12 ವರುಷ ಮೋದಿ ಯಶಸ್ವಿ ಆಡಳಿತ|ಮಲೆನಾಡಿಗೆ ಹರಿದು ಬಂದ 22 ಸಾವಿರ ಕೋಟಿ ಅನುದಾನ|ಜನಪರ ಯೋಜನೆ ಜನರಿಗೆ ತಲುಪಿಸಲು ಬದ್ದ-ಸಂಸದ ಬಿ.ವೈ.ರಾಘವೇಂದ್ರ

ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಶಿವಮೊಗ್ಗ ಕ್ಷೇತ್ರಕ್ಕೆ ವಿವಿಧ ಯೋಜನೆಗಳ ಮೂಲಕ 22 ಸಾವಿರ ಕೋಟಿ ಅನುದಾನ ಭರಪೂರವಾಗಿ ನೀಡಿದ್ದಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 12 ವರ್ಷಗಳ ಯಶಸ್ವಿ ಆಡಳಿತ ನಡೆಸುತ್ತಿದ್ದು, ಭಾರತದ ಆರ್ಥಿಕತೆ ನಾಲ್ಕನೇ ಸ್ಥಾನಕ್ಕೇರಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಕಳೆದ 12 ವರ್ಷಗಳಲ್ಲಿ ಮಲೆನಾಡಿಗೆ 22 ಸಾವಿರ ಕೋಟಿ ವಿವಿಧ ಯೋಜನೆಗೆ ಅನುದಾನ ಹರಿದು ಬಂದಿದೆ. ಭಾರತದ ರಕ್ಷಣಾ ವಲಯದ ರಫ್ತು 21 ಸಾವಿರ ಕೋಟಿ ದಾಟಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮೋದಿ ಆಡಳಿತದ ಸಾಧನೆಗಳ ಪಟ್ಟಿಯನ್ನು ತೆರೆದಿಟ್ಟಿದ್ದಾರೆ.

ಶುಕ್ರವಾರದಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ನೆಹರೂ ಆಡಳಿತದ ದಾಖಲೆ ಮುರಿದು 4339 ದಿನಗಳ ಹೊಸ ದಾಖಲೆಗೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದರು.

ಕೇಂದ್ರದಲ್ಲಿ ಮೋದಿ ಸರ್ಕಾರ 12 ವರ್ಷಗಳನ್ನ ಪೂರೈಸಿದ ಹಿನ್ನಲೆ ಶಿವಮೊಗ್ಗ ಜಿಲ್ಲೆಯ 100ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.

ದೇಶಕ್ಕೆ ಯಾವುದೇ ಗಂಡಾಂತರಗಳು ಬರದೇ ಪ್ರಧಾನಿ ಮೋದಿಗೆ ಎಲ್ಲ ಸವಾಲುಗಳನ್ನ ಎದುರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಲಾಯಿತೆಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ 25 ಸಾವಿರ ಕೋಟಿ ಜನರನ್ನ ಬಡತನದಿಂದ ಮೇಲೆತ್ತಲಾಗಿದೆ ಇದರಿಂದ ಜನರ ಜೀವನಮಟ್ಟ ಸುಧಾರಣೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಡಿಜಿಟಲ್ ಇಂಡಿಯಾದ ಕ್ರಾಂತಿಕಾರಕ ನಿಲುವುಗಳಿಂದಾಗಿ ವಿಶ್ವದ ಜಿಟಿಟಲ್ ಪಾವತಿಯಲ್ಲಿ ಭಾರತದ ಪಾಲು ಶೇ85% ರಷ್ಟಿದೆ. ಹಿಂದಿಗಿಂತ 9 ಪಟ್ಟು ಜನಸಾಮಾನ್ಯರು ಯೂಪಿಐ ಬಳಸುತ್ತಿದ್ದು ಯುಪಿಐ ಬಳಕೆಯಲ್ಲಿ ವಿಶ್ವಗುರುವೆಂದರೂ ತಪ್ಪಾಗದು ಎಂದರು.

ಸ್ವಚ್ಚಭಾರತ ಕಾರ್ಯಕ್ರಮದಡಿ 12 ಕೋಟಿಗಿಂತ ಅಧಿಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಲಜೀವನ್ ಮಿಷನ್ ಮೂಲಕ 15 ಕೋಟಿ ಜನರಿಗೆ ಶುದ್ದ ಕುಡಿಯುವ ನೀರು ತಲುಪಿಸುವ ಕಾರ್ಯವಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಮೂಲಕ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ.

ಮೋದಿ ಪ್ರಧಾನಿಯಾಗುವ ಮುನ್ನ ಮೆಟ್ರೋ ಜಾಲ ಕೇವಲ ಐದು ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರದಲ್ಲಿ ದೇಶಾದ್ಯಂತ ಮೆಟ್ರೋ ಜಾಲ 29 ನಗರಗಳಿಗೆ ವಿಸ್ತರಿಸಲ್ಪಟ್ಟಿದೆ ಸಂಸದ ಬಿ.ವೈ.ರಾಘವೇಂದ್ರ ಎಂದು ತಿಳಿಸಿದರು.

1100 ಕಿಲೋಮೀಟರಗೂ ಹೆಚ್ಚು ಮೆಟ್ರೋ ರೈಲು ಕಾಮಗಾರಿ ನಡೆದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಧಾನಿ ಮೋದಿ ಅವರ ಅಧಿಕಾರವಧಿಯಲ್ಲಿ ಯುವಜನತೆಗೆ ಎರಡೂವರೆ ಲಕ್ಷ ಸ್ಟಾರ್ಟ್ ಅಪ್ ಯೋಜನೆ ರೂಪಿಸಲಾಗಿದೆ.

ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ 2 ಲಕ್ಷಕೋಟಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ತಿಳಿಸಿದರು.

ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಶಿವಮೊಗ್ಗ ಕ್ಷೇತ್ರಕ್ಕೆ ವಿವಿಧ ಯೋಜನೆಗಳ ಮೂಲಕ 22 ಸಾವಿರ ಕೋಟಿ ಅನುದಾನ ಭರಪೂರವಾಗಿ ನೀಡಿದ್ದಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸಿದ್ದು ಬ್ರಹ್ಮೋಸ್ ಆಕಾಶ್ ನಂತಹ ಕ್ಷಿಪಣಿ ತಂತ್ರಜ್ಞಾನ ಗಳ ಮೂಲಕ 21 ಸಾವಿರ ಕೋಟಿ ರಕ್ಷಣಾ ವಲಯದ ರಪ್ತು ವಹಿವಾಟು ದಾಖಲೆ ಮೆರೆದಿರುವುದು ಹೆಮ್ಮೆಯ ಸಂಗತಿ ಎಂದರು.

ಅಂತರಾಷ್ಟ್ರೀಯ ಸಂಬಂಧಗಳು , ರಾಜತಾಂತ್ರಿಕೆ, ವಿದೇಶಾಂಗ ನೀತಿಗಳಲ್ಲಿ ಭಾರತ ಅಗ್ರಗಣ್ಯ ಸ್ಥಾನಪಡೆದಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಚಂದ್ರಯಾನ 3 ಮೂಲಕ ಸಲಚಂದ್ರನ ದಕ್ಷಿಣ ದೃವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇಸ್ರೋ ಮೈಲಿಗಲ್ಲುಗಳು ಭಾರತವನ್ನ ಸೂಪರ್ ಪವರ್ ದೇಶವಾಗಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೆಮ್ಮೆಯಿಂದ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡ ವೇಳೆ ಹೇಳಿದ್ದ ಮಾತನ್ನ ಸ್ಮರಿಸಿದ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಸರ್ಕಾರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದೇ ತಮ್ಮ ಸೋಲಿಗೆ ಕಾರಣ ಎಂದಿದ್ದರು.

ಇದೀಗ ಮೋದಿ ಸರ್ಕಾರದ ಆಡಳಿತದಲ್ಲಾದ ಕ್ರಾಂತಿಕಾರಕ ಬದಲಾವಣೆಗಳು , ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ತಲುಪಿಸಲು ನಾವು ಬದ್ದರಾಗಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ,ಮುಖಂಡರಾದ ಹರಿಕೃಷ್ಣ, ಕುಪೇಂದ್ರಪ್ಪ ,ಪದ್ಮಿನಿ, ಮಾಲತೇಶ್, ಮಂಜುನಾಥ್, ಚಂದ್ರಶೇಖರ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button