ವಂದೇ ಮಾತರಂ ಹಾಡು ಎರಡೇ ಚರಣಕ್ಕೆ ಮೊಟಕು|ವೇದಿಕೆಯಿಂದ ಹೊರನಡೆದ ಶಾಸಕ ಚೆನ್ನಬಸಪ್ಪ|ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಘಟನೆ
ವಂದೇ ಮಾತರಂ ಗೀತೆಗೆ ಅಗೌರ ತೋರವ ಕಾರ್ಯಕ್ರಮದಲ್ಲಿ ನಾನಿರಲ್ಲ ಎಂದು ಅಧಿಕಾರಿಗಳ ನಡೆಯನ್ನು ವಿರೋಧಿಸಿ ಶಾಸಕ ಎಸ್.ಎನ್. ಚೆನ್ನಬಸಪ್ಪ ಹೊರನಡೆದರು.

ಶಿವಮೊಗ್ಗ: ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನು ಎರಡೇ ಚರಣಕ್ಕೆ ಮೊಟಕುಗೊಳಿಸಿದ್ದನ್ನು ವಿರೋಧಿಸಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚೆನ್ನಬಸಪ್ಪ ಕಾರ್ಯಕ್ರಮದಿಂದಲೇ ಹೊರ ನಡೆದಿರುವ ಘಟನೆ ನಡೆದಿದೆ.
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ವಂದೇ ಮಾತರಂ ಹಾಡು ಎರಡೇ ಚರಣಕ್ಕೆ ಮೊಟಕುಗೊಳಿಸುತ್ತಿದ್ದಂತೆ, ವೇದಿಕೆಯಲ್ಲಿದ್ದ ಶಾಸಕ ಚೆನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದೇಶಕ್ಕೆ ಬೇರೆ ರಾಜ್ಯಕ್ಕೆ ಬೇರೆ ಪ್ರಜಾಪ್ರಭುತ್ವ ಇದೆಯಾ? ಎಂದು ಅಧಿಕಾರಿಗಳನ್ನ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದು ಕಡ್ಡಾಯಗೊಳಿಸಿ ಕಾನೂನು ಜಾರಿಗೆ ತಂದಿದೆ ಎಂದು ಶಾಸಕ ಚೆನ್ನಬಸಪ್ಪ ಹೇಳಿದರು.

ವಂದೇ ಮಾತರಂ ಗೀತೆಗೆ ಅಗೌರ ತೋರವ ಕಾರ್ಯಕ್ರಮದಲ್ಲಿ ನಾನಿರಲ್ಲ ಎಂದು ಅಧಿಕಾರಿಗಳ ನಡೆಯನ್ನು ವಿರೋಧಿಸಿ ಶಾಸಕ ಎಸ್.ಎನ್. ಚೆನ್ನಬಸಪ್ಪ ಹೊರನಡೆದರು.
ಈ ವೇಳೆ ದಲಿತ ಸಂಘಟನೆಗಳ ಮುಖಂಡರು ವೇದಿಕೆ ಕಾರ್ಯಕ್ರಮ ವಿರೋಧಿಸಿ ಪ್ರಜಾಪ್ರಭುತ್ವದ ಉಲ್ಲಂಘನೆ ಮಾಡಿದ್ದೀರೆಂದು ಶಾಸಕ ಎಸ್.ಎನ್. ಚೆನ್ನಬಸಪ್ಪ ವಿರುದ್ದ ಆರೋಪಿಸಿದರು.

ರಾಜ್ಯ ಸರ್ಕಾರ ಎರಡೇ ಸಾಲು ವಂದೇ ಮಾತರಂ ಗೀತೆ ಹಾಡಲು ಆದೇಶಿಸಿದೆ ಅಧಿಕಾರಿಗಳದ್ದು ಇದರಲ್ಲಿ ತಪ್ಪೇನಿದೆ ಎಂದು ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರನ್ನು ಸಮಾಧಾನ ಪಡಿಸಲು ಮುಂದಾದರು.
ಆದರೆ ಶಾಸಕ ಚೆನ್ನಬಸಪ್ಪ, ಕೇಂದ್ರದ ಕಾನೂನನ್ನು ಪಾಲಿಸುವುದು ಪ್ರಜಾಪ್ರಭುತ್ವವವೇ ಆಗಿದೆ. ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿ ರಾಜ್ಯಸರ್ಕಾರ ಹೇಗೆ ಹೊಸ ಆದೇಶ ನೀಡಲು ಸಾಧ್ಯ ಎಂದು ಕಿಡಿಕಾರಿದರು.
ಸ್ವಾತಂತ್ರ್ಯದ ವೇಳೆ ಹೋರಾಟದ ಕಿಚ್ಚುಹಚ್ಚಿದ್ದ ಒಂದೇಮಾತರಂ ಗೀತೆಗೆ ಅಗೌರವ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಅವರು ಹೊರನಡೆದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್, ನ್ಯಾಯಮೂರ್ತಿ ಸಂತೋಷ್ ಹಾಜರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







