Shivamogga

ಶಿವಮೊಗ್ಗದ ಮಹಾತ್ಮಾಗಾಂಧಿ ಪಾರ್ಕ್‌ ಕಾಮಗಾರಿ ಗೋಲ್‌ಮಾಲ್| ಆಮ್‌ ಆದ್ಮಿ ಪಕ್ಷದಿಂದ ಗಂಭೀರ ಆರೋಪ| ಸೋಮವಾರ ಪತ್ರಿಕಾಗೋಷ್ಠಿ

ಶಿವಮೊಗ್ಗದ ಪಾಲಿಕೆ ಇಂಜಿನಿಯರ್‌ಗಳು, ಗುತ್ತಿಗೆದಾರೊಂದಿಗೆ ಶಾಮೀಲಾಗಿ 173ಲಕ್ಷ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿರುವ ಆಮ್‌ಆದ್ಮಿ ಪಕ್ಷವು ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದೆ.

ಶಿವಮೊಗ್ಗದ ಮಹಾತ್ಮಾಗಾಂಧಿ ಪಾರ್ಕ್‌ ನವೀಕರಣದ ಹೆಸರಲ್ಲಿ ಲಕ್ಷಾಂತರ ರೂಪಾಯಿ ಗೋಲ್‌ಮಾಲ್‌ ನಡೆಯುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷದ ಶಿವಮೊಗ್ಗ ಘಟಕದ ಅಧ್ಯಕ್ಷ ಮನೋಹರಗೌಡ ಸೆಪ್ಟಂಬರ್‌7ರ ಬೆಳಿಗ್ಗೆ ಮಹಾತ್ಮಾಗಾಂಧಿ ಪಾರ್ಕ್‌ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಕೆಲವು ಪೂರಕ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದ ಪಾಲಿಕೆ ಇಂಜಿನಿಯರ್‌ಗಳು, ಗುತ್ತಿಗೆದಾರೊಂದಿಗೆ ಶಾಮೀಲಾಗಿ 173ಲಕ್ಷ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿರುವ ಆಮ್‌ಆದ್ಮಿ ಪಕ್ಷವು ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದೆ.

ದುರಸ್ಥಿಯೇ ಆಗದ ಪುಟಾಣಿ ರೈಲಿಗೆ, ಅಳವಡಿಸದ ಸ್ಪಿಂಕ್ಲರ್‌ಗೆ, ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಕಾಮಗಾರಿಗಳಿಗೆ, ಹೆಚ್ಚುವರಿ ಅಂದಾಜುವೆಚ್ಚ ದಾಖಲಿಸಿರುವ ಬಗ್ಗೆ ಆರ್‌ಟಿಐ ಮೂಲಕ ಪಡೆದ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ಆಮ್‌ ಆದ್ಮಿ ಪಕ್ಷ ತಿಳಿಸಿದೆ.

ವರದಿ: ನ್ಯೂಸ್‌ ಡೆಸ್ಕ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.

Follow Us

Leave a Reply

Your email address will not be published. Required fields are marked *

Back to top button