KarnatakaShivamogga

ಕನ್ನಡ ಶಾಲೆಗಳಿಗೆ ಅನುದಾನ ಕೊಡಿ|ರಕ್ತವನ್ನೇ ಶಾಯಿ ಮಾಡಿಕೊಂಡು ಮಧು ಬಂಗಾರಪ್ಪಗೆ ಮನವಿ|ನವಂಬರ್‌ ನಂತರ ರಾಜ್ಯಾದ್ಯಂತ ರಕ್ತ ಚಳುವಳಿಯ ಎಚ್ಚರಿಕೆ..

15 ಸಾವಿರ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಕೈಬಿಟ್ಟುಹೋಗಿದ್ದ ಉರ್ದು ಮತ್ತು ಮರಾಠಿ ಶಿಕ್ಷಕರ ನೇಮಕಾತಿಗೆ ಸಚಿವರಾದ ಜಮೀರ್ ಅಹ್ಮದ್, ಯು.ಟಿ.ಖಾದರ್ ಹಾಲಿ ವಿಧಾನಪರಿಷತ್‌ ಸಭಾಪತಿ ಸಲೀಂ ಅಹ್ಮದ್‌ ಅವರುಗಳು ಒತ್ತಡದಿಂದಾಗಿ ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನಕ್ಕೊಳಪಡಿಸುವಂತೆ ಕಳೆದೊಂದು ವರ್ಷದಿಂದ ನಿರಂತರ ಮನವಿ ಮಾಡಿ ಬೇಸತ್ತ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆ ಶಿಕ್ಷಕರು ರಕ್ತದಲ್ಲಿ ಮನವಿ ಪತ್ರ ಬರೆಯುವ ರಕ್ತ ಚಳುವಳಿ ಆರಂಭಿಸಿ ಗಮನಸೆಳೆದಿದ್ದಾರೆ.

ಪ್ರಜಾಸೇವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಮಂಗಳವಾರದಂದು ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಶಿಕಾರಿಪುರ ಭಾಗದ ಶಿಕ್ಷಕರು ರಕ್ತದಲ್ಲಿ ಬರೆದು ತಮ್ಮ ಅಹವಾಲನ್ನು ಸಲ್ಲಿಸಿದರು.

ಮಧು ಬಂಗಾರಪ್ಪನವರು ಈ ಹಿಂದೆ ಶಿಕ್ಷಣ ಸಚಿರಾದಾಗಿನಿಂದಲೂ ಕರ್ನಾಟಕ ಕನ್ನಡಮಾಧ್ಯಮ ಶಾಲಾ ಕಾಲೇಜುಗಳ ಒಕ್ಕೂಟ ಸಾಕಷ್ಟು ಬಾರಿ ಮನವಿ ಮಾಡಿತ್ತು.

ಆಗ ಸಚಿವ ಮಧುಬಂಗಾರಪ್ಪ ಕನ್ನಡ ನನ್ನ ರಕ್ತದಲ್ಲೇ ಇದೆ ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ‌ಕೊಡಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಈಡೇರಿಲ್ಲ.

ಹೀಗಾಗಿ ವಿಧಿಯಿಲ್ಲದೇ ರಕ್ತಚಳುವಳಿ ಮಾಡುತ್ತಿರುವುದಾಗಿ ಕರ್ನಾಟಕ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಒಕ್ಕೂಟ ಸದಸ್ಯರು ಹೇಳಿದರು.

ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 50 ಕನ್ನಡ ಮಾಧ್ಯಮದ ಅನುದಾನರಹಿತ ಶಾಲೆಗಳು ಮುಚ್ಚಲ್ಪಟ್ಟಿವೆ. ಶಿಕಾರಿಪುರವೊಂದರಲ್ಲೇ 2 ಶಾಲೆ ಮುಚ್ಚಿವೆ.

30 ವರ್ಷಗಳಿಂದ ಶಿಕ್ಷಕರಾಗಿ ದುಡಿದು ಬರಿಗೈಲಿ ನಿವೃತ್ತಿಯಾಗುವ ಕನ್ನಡ ಮಾಧ್ಯಮ ಶಿಕ್ಷಕರ ಕಣ್ಣೀರು ನಿಟ್ಟುಸಿರು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಮನವಿ ಪತ್ರ ಸಲ್ಲಿಸಿದ ನಂತರ ಅನುದಾನ ರಹಿತ ಶಾಲಾ ಕಾಲೇಜು ಒಕ್ಕೂಟದ ನೊಂದ ಶಿಕ್ಷಕ ಪ್ರದೀಪ್ ಬೇಸರ ವ್ಯಕ್ತಪಡಿಸಿದರು.

ಬರುವ ಕನ್ನಡ ರಾಜ್ಯೋತ್ಸವದ ಒಳಗೆ ಅನುದಾನ ನೀಡಿ ಕನ್ನಡ ಶಿಕ್ಷಕರನ್ನು ಉಳಿಸದಿದ್ದಲ್ಲಿ ಮುಂದಿನ ಹಂತದಲ್ಲಿ ಎಲ್ಲ ಶಿಕ್ಷಕರೂ ಇದೇ ರೀತಿ ರಾಜ್ಯಾದ್ಯಂತ ರಕ್ತ ಚಳುವಳಿ ಆರಂಭಿಸಲಿದ್ದಾರೆ ಎಂದು ನೊಂದ ಶಿಕ್ಷಕ ಪ್ರದೀಪ್ ಹೇಳಿದರು.

ನ್ಯೂ ಇಂಡಿಯಾ ಕನ್ನಡ ಡಿಜಿಟಲ್‌ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇವಲ ಸರ್ಕಾರ ಶಿಕ್ಷರ ಹೆಸರಿನ ಮುಂದೆ “TR”ಅಂತ ಅಧಿಸೂಚನೆ ಹೊರಡಿಸಿ ಗೌರವ ಸಮರ್ಪಿಸಿದರೆ ಹೊಟ್ಟೆ ತುಂಬುವುದಿಲ್ಲ.

ಬದಲಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನಕ್ಕೊಳಪಡಿಸುವ ಅಧಿಸೂಚನೆ ಹೊರಡಿಸಿ ಶಿಕ್ಷಕರ ಬಗ್ಗೆ ನೈಜ ಕಾಳಜಿ ತೋರಬೇಕೆಂದು ಮನವಿ ಮಾಡಿದರು.

ರಕ್ತದಲ್ಲೇ ಕನ್ನಡವಿದೆ ಎಂದು ಈ ಹಿಂದೆ ಸಚಿವ ಮಧು ಬಂಗಾರಪ್ಪನವರು ಹೇಳಿದ್ದರು. ಅವರಂತೇ ನಮ್ಮ ರಕ್ತವೂ ಸಹ ಕನ್ನಡಕ್ಕಾಗಿಯೇ ಶ್ರಮಿಸುತ್ತಿದೆ.

ಅನುದಾನ ನೀಡಿ, ಕನ್ನಡ ಶಾಲೆ ಮತ್ತು ಶಿಕ್ಷಕರನ್ನು ಉಳಿಸಿ ಎಂದು ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡರು.

15 ಸಾವಿರ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಕೈಬಿಟ್ಟುಹೋಗಿದ್ದ ಉರ್ದು ಮತ್ತು ಮರಾಠಿ ಶಿಕ್ಷಕರ ನೇಮಕಾತಿಗೆ ಸಚಿವರಾದ ಜಮೀರ್ ಅಹ್ಮದ್, ಯು.ಟಿ.ಖಾದರ್ ಹಾಲಿ ವಿಧಾನಪರಿಷತ್‌ ಸಭಾಪತಿ ಸಲೀಂ ಅಹ್ಮದ್‌ ಅವರುಗಳು ಒತ್ತಡದಿಂದಾಗಿ ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ದೌರ್ಭಾಗ್ಯವೆಂದರೆ ಕರ್ನಾಟಕದ ಆದ್ಯ ಭಾಷೆ ಕನ್ನಡಕ್ಕೆ ಮನ್ನಣೆ ಸಿಕ್ಕಿರೋದು ಅಷ್ಟಕ್ಕಷ್ಟೇ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ‌ ಶಿಕ್ಷಕರು ಅನುದಾನ ಪಡೆಯಲು ಹೋರಾಟ ಮಾಡಬೇಕಾಗಿರುವುದು ದುರಂತವೇ ಸರಿ ಎಂದು ಶಿಕ್ಷಕ ಪ್ರದೀಪ್ ಬೇಸರ ಹೊರಹಾಕಿದ್ದಾರೆ.

ಮನವಿ ಸ್ವೀಕರಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅನುದಾನರಹಿತ ಕನ್ನಡ ಶಾಲೆಗಳ ಶಿಕ್ಷಕರ ಪರಿಸ್ಥಿತಿಯನ್ನು ಯಥಾವತ್ತಾಗಿ ಸಿಎಂ ಡಿ.ಕೆ.ಶಿವಕುಮಾರ್‌ ಅವರ ಗಮನಕ್ಕೆ ತರುವದಾಗಿ ಭರವಸೆ ನೀಡಿದರು.

Follow Us

Leave a Reply

Your email address will not be published. Required fields are marked *

Back to top button