ಶಿವಮೊಗ್ಗದಲ್ಲಿ ತಜ್ಞ ವೈದ್ಯರ “ಕ್ಯಾಪಿಕಾನ್-2026” ಸಮ್ಮೇಳನ|ರಾಜ್ಯದ 2 ಸಾವಿರ ವೈದ್ಯರು ಭಾಗಿ|ನುರಿತ ವೈದ್ಯರಿಂದ ಉಪನ್ಯಾಸ
ದೇಶ, ವಿದೇಶಗಳಿಂದ ನುರಿತ ವೈದ್ಯರು ಉಪನ್ಯಾಸ ನೀಡಲು ಆಗಮಿಸಲಿದ್ದು, ಮೇ 8 ರಂದು ಬೆಳಿಗ್ಗೆ 9 ರಿಂದ 11ರವರೆಗೆ ಶಿವಮೊಗ್ಗದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಜೀವರಕ್ಷಕ ತರಬೇತಿಯನ್ನು ಸಿಮ್ಸ್ನಲ್ಲಿ ಹಮ್ಮಿಕೊಳ್ಳಲಾಗಿದೆ

ಶಿವಮೊಗ್ಗ: ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನ “ಕ್ಯಾಪಿಕಾನ್-2026” ಇದೇ ಮೇ 8 ರಿಂದ 10ರವರೆಗೆ ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ ಎಂದು ಎ.ಪಿ.ಐ. ಶಿವಮೊಗ್ಗ ಘಟಕದ ಅಧ್ಯಕ್ಷ ಡಾ.ಎಸ್ ಬಿ ಹೆಗಡೆ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮೇಳನವನ್ನು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಗೆ ಹೃದ್ರೋಗ ತಜ್ಞ ವೈದ್ಯ ಪದ್ಮಶ್ರೀ ಡಾ.ಸಿ. ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸಹ್ಯಾದ್ರಿ ಶಾಖೆಯಿಂದ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತ 2000ಕ್ಕೂ ಹೆಚ್ಚು ವೈದ್ಯರು ನೊಂದಣಿ ಮಾಡಿಕೊಂಡಿದ್ದಾರೆ ತಿಳಿಸಿದರು.
ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ, ಚರ್ಚೆ, ಕಾರ್ಯಗಾರಗಳು 3 ದಿನಗಳು ನಡೆಯಲಿವೆ. ಸಾವಿರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದರು.
ದೇಶ, ವಿದೇಶಗಳಿಂದ ನುರಿತ ವೈದ್ಯರು ಉಪನ್ಯಾಸ ನೀಡಲು ಆಗಮಿಸಲಿದ್ದು, ಮೇ 8 ರಂದು ಬೆಳಿಗ್ಗೆ 9 ರಿಂದ 11ರವರೆಗೆ ಶಿವಮೊಗ್ಗದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಜೀವರಕ್ಷಕ ತರಬೇತಿಯನ್ನು ಸಿಮ್ಸ್ನಲ್ಲಿ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಮ್ಮೇಳನದಲ್ಲಿ ಎಪಿಐ ಕರ್ನಾಟಕದ ಅಧ್ಯಕ್ಷ ಡಾ.ಬಿ. ಮಹಾಲಿಂಗಪ್ಪ, ಎಪಿಐ ಇಂಡಿಯಾದ ಅಧ್ಯಕ್ಷ ಡಾ. ಜಿ. ನರಸಿಂಹಲು, ಮಾಜಿ ಅಧ್ಯಕ್ಷ ಡಾ.ಜ್ಯೋತಿರ್ಮಯ್ ಪಾಲ್, ಎಪಿಐ ಜರ್ನಲ್ ಸಂಪಾದಕಿ ಡಾ.ನಂದಿನಿ ಚಟರ್ಜಿ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರ ಎಸ್. ಭಾಗವಹಿಸಲಿದ್ದಾರೆ ಎಂದರು.
ಸಂಘಟನಾ ಕಾರ್ಯದರ್ಶಿ ಡಾ.ಪೃಥ್ವಿ ಬಿ. ಸಿ., ಖಜಾಂಚಿ ಡಾ.ಮಹೇಶ್ಮೂರ್ತಿ ಬಿ. ಆರ್., ಡಾ. ರವೀಶ್ ಕೆ. ಆರ್., ಡಾ.ಪರಮೇಶ್ವರ್ ಎಸ್., ಡಾ.ಅರವಿಂದ ಸಿ. ಎಲ್., ಡಾ. ಪ್ರವೀಣ್ ದೇವರಬಾವಿ, ಡಾ.ಪಿ. ಕೆ. ಪೈ, ಡಾ.ಡಿ. ಜಿ. ಶಿವಕುಮಾರ್, ಡಾ.ಈಶ್ವರಪ್ಪ, ಡಾ.ಗೋಪಾಲ್ ಮತ್ತಿತರರ ತಜ್ಞ ವೈದ್ಯರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







