ಆಪರೇಶನ್ ಸಿಂಧೂರಕ್ಕೆ ಒಂದು ವರ್ಷ|ಭಾರತವನ್ನು ಕೆಣಕಿದರೇ ಸುಮ್ಮನಿರಲ್ಲ-ಸಂಸದ ಬಿ.ವೈ.ರಾಘವೇಂದ್ರ
ಭಾರತವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ' ಎಂಬ ಸಂದೇಶ ಗಡಿಯಾಚೆಗಿನ ಶತ್ರುಗಳಿಗೂ ಸ್ಪಷ್ಟವಾಗಿ ತಲುಪಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಪೆಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ “ಆಪರೇಶನ್ ಸಿಂಧೂರ”ದ ಮೂಲಕ ಯಶಸ್ವಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬದಲಾದ ಬಲಿಷ್ಠ ಭಾರತದ ‘ಸಂಕಲ್ಪದ ಸಂಕೇತ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಆಪರೇಶನ್ ಸಿಂಧೂರಕ್ಕೆ ಒಂದು ವರ್ಷ ಸಂದ ಹಿನ್ನಲೆ ಗುರುವಾರದಂದು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಮಿಲಿಟರಿ ಕಾರ್ಯಾಚರಣೆ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
ಪೆಹಲ್ಗಾಮ್ನಲ್ಲಿ 26 ಅಮಾಯಕ ಭಾರತೀಯರನ್ನು, ಧರ್ಮ ಕೇಳಿ ಹತ್ಯೆ ಮಾಡಿದ ಉಗ್ರರಿಗೆ ಭಾರತ ಆಪರೇಷನ್ ಸಿಂಧೂರದ ಮೂಲಕ ದೇಶದಾಚೆ ಅಡಗಿದ್ದ ಶತ್ರುಗಳ ಗುಹೆಗೆ ನುಗ್ಗಿ ಹೊಡೆಯುವ ಶಕ್ತಿ ನಮಗಿದೆ ಎಂದು ಜಗತ್ತಿಗೆ ಸಾರಿದ ದಿನ ಎಂದು ಸ್ಮರಿಸಿದರು.

ಭಾರತವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ’ ಎಂಬ ಸಂದೇಶ ಗಡಿಯಾಚೆಗಿನ ಶತ್ರುಗಳಿಗೂ ಸ್ಪಷ್ಟವಾಗಿ ತಲುಪಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಆತ್ಮ ನಿರ್ಭರ ಭಾರತಕ್ಕೆ
ಆಪರೇಶನ್ ಸಿಂಧೂರ ಸಾಕ್ಷಿ|
2025ರ ಮೇ 7 ರಂದು ಪಾಕಿಸ್ತಾನದ ಒಳಗೆ ಉಗ್ರರನ್ನು ಪೋಷಿಸುತ್ತಿದ್ದ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಹೆಮ್ಮೆಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳ ಶಕ್ತಿ, ಶೌರ್ಯ, ಪರಾಕ್ರಮ ತೋರಲು ಬಳಕೆಯಾಗಿದ್ದು ಆತ್ಮ ನಿರ್ಭರ ಭಾರತದ ಸ್ವದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು ಎಂದು ಸಂಸದ ಬಿ.ವೈ.ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಹಿಂದಿನಂತೆ ಭಾರತವನ್ನ ಕೆಣಕಿದವರ ಜೊತೆ ರಾಜಿಯಾಗದೇ ಆಪರೇಶನ್ ಸಿಂಧೂರದ ಮೂಲಕ ಭಾರತೀಯ ಸೇನಾ ಶಕ್ತಿಯನ್ನ ಪ್ರಪಂಚಕ್ಕೆ ತೋರಿಸಿದೆ ಎಂದು ಹೇಳಿದರು.
ಪ್ರಧಾನಿ ನೇತೃತ್ವದ ಸಧೃಢ ನಾಯಕತ್ವದಲ್ಲಿ ಭಾರತ ಭಯೋತ್ಪಾದನೆ ವಿರುದ್ದ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತದೆ ಎಂಬ ಸಂದೇಶವನ್ನ ಇಡೀ ಜಗತ್ತಿಗೆ ಸಾರಿದ್ದು ಆಪರೇಶನ್ ಸಿಂಧೂರ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಅವರು ವಿವರಿಸಿದರು.

ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಸಾಹಸ, ಯಶಸ್ಸು, ನಮ್ಮ ಯುವಜನತೆಗೆ ಸದಾ ಪ್ರೇರಣೆಯಾಗಿದೆ. ಆಪರೇಷನ್ ಸಿಂಧೂರ ‘ನಮ್ಮ ಗಡಿಗಳು ಸುರಕ್ಷಿತವಾಗಿವೆ’ ಎಂಬ ಭರವಸೆಯನ್ನು ಪ್ರತಿಯೊಬ್ಬ ಭಾರತೀಯನಿಗೂ ಮೂಡಿಸುವಲ್ಲಿ ಆಪರೇಶನ್ ಸಿಂಧೂರ ಮಹತ್ವದ ಪಾತ್ರವಹಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








