ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡ|ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆ|ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ
ಯಾವಾಗ ಇವರಿಬ್ಬರ ಲವ್ವಿಡವ್ವಿ ವಿಷಯ ಈಕೆಯ ಗಂಡ ಪ್ರಕಾಶ್ ಬಾಬುವಿಗೆ ಗೊತ್ತಾಯಿತೋ ಗಲಾಟೆ ಶುರುವಾಗಿದೆ. ಆಗ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಗಂಡನನ್ನೆ ಕೊಲೆಗೈಯಲು ಪ್ರಿಯಕರನ ಜೊತೆ ಸೇರಿ ಫ್ಲೋರಾ ನ್ಯಾನ್ಸಿ ಪ್ಲ್ಯಾನ್ ಮಾಡುತ್ತಾಳೆ.
ಶಿವಮೊಗ್ಗ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಕುರಿತು ಸಮಗ್ರ ವಿಚಾರಣೆ ನಡೆಸಿದ್ದ ನ್ಯಾಯಾಧಿಶರಾದ ಶ್ರೀಮತಿ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪಿಗಳಾದ ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಅವರಿಗೆ ಗಲ್ಲು ಶಿಕ್ಷೆಯ ಜೊತೆಯಲ್ಲಿ ೧೪ಲಕ್ಷರೂ ದಂಡ ವಿಧಿಸಿದ್ದಲ್ಲದೇ ದೂರು ಕೊಟ್ಟ ಫಿರ್ಯಾಧಿದಾರರಿಗೆ ಐದು ಲಕ್ಷರೂ ಪರಿಹಾರ ನೀಡಲು ಸೂಚಿಸಿದ್ದಾರೆ.
ಏನಿದು ಘಟನೆ?
ಭದ್ರಾವತಿ ಪೇಪರ್ ಟೌನ್ ಪೊಲಿಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿಯಾದ ಫ್ಲೋರಾ ನ್ಯಾನ್ಸಿ ಎಂಬ ವಿವಾಹಿತ ಮಹಿಳೆಯು ಗಂಡನಿಗೆ ಗೊತ್ತಿಲ್ಲದಂತೇ ರಾಜಶೇಖರಯ್ಯ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ.

ಯಾವಾಗ ಇವರಿಬ್ಬರ ಲವ್ವಿಡವ್ವಿ ವಿಷಯ ಈಕೆಯ ಗಂಡ ಪ್ರಕಾಶ್ ಬಾಬುವಿಗೆ ಗೊತ್ತಾಯಿತೋ ಗಲಾಟೆ ಶುರುವಾಗಿದೆ. ಆಗ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಗಂಡನನ್ನೆ ಕೊಲೆಗೈಯಲು ಪ್ರಿಯಕರನ ಜೊತೆ ಸೇರಿ ಫ್ಲೋರಾ ನ್ಯಾನ್ಸಿ ಪ್ಲ್ಯಾನ್ ಮಾಡುತ್ತಾಳೆ.
ಉಸಿರುಗಟ್ಟಿಸಿ ಕೊಂದ ಪಾಪಿಗಳು|
ಕಳೆದ 15-01-2020 ರಂದು ಮನೆಯಲ್ಲಿದ್ದ ಗಂಡ ಪ್ರಕಾಶ್ ಬಾಬುಗೆ ಮೊದಲಿಗೆ ಎಚ್ಚರ ತಪ್ಪಿಸಲು ಯಾವುದೋ ಔಷಧಿಯನ್ನು ಊಟದಲ್ಲಿ ಸೇರಿಸುತ್ತಾಳೆ.
ಆತ ಎಚ್ಚರತಪ್ಪಿ ಮಲಗಿದ್ದನ್ನು ಖಚಿತಪಡಿಸಿಕೊಂಡು ತನ್ನ ಪ್ರಿಯಕರನನ್ನು ಕರೆಸಿಕೊಳ್ಳುವ ಈ ಕೊಲೆಗಾತಿ ಇಬ್ಬರು ಸೇರಿಕೊಂಡು ಗಂಡನನ್ನು ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ.
ಬಳಿಕ ರಮೇಶಬಾಬು ಸಂಬಂಧಿಕರು ದೂರು ನೀಡಿದ ಬಳಿಕ ಹೆಂಡತಿ ಹಾಗೂ ಪ್ರಿಯಕರನೇ ಕೊಲೆ ಮಾಡಿದ್ದು ಬಯಲಿಗೆ ಬಂದಿದೆ.

ಬಳಿಕ ಇಬ್ಬರನ್ನು ಭದ್ರಾವತಿ ಪೇಪರ್ ಟೌನ್ ಪೊಲಿಸ್ ಠಾಣಾ ಪೊಲೀಸರು ಬಂಧಿಸಿರುತ್ತಾರೆ.
ಆರೋಪಿಗಳ ಮೇಲೆ ಗುನ್ನೆ ಸಂಖ್ಯೆ 50/2020 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಈ. ಓ. ಪೊಲೀಸ್ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ಅವರು ವಾದ ಮಂಡಿಸಿರುತ್ತಾರೆ.
ವಾದ ಪ್ರತಿವಾದ ಆಲಿಸಿದ ಘನ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಈಗ ಆದೇಶ ಹೊರಡಿಸಿರುತ್ತಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







