“ಬಿಎಸ್‌ವೈ” ರಾಜಕೀಯ ಸೇವೆಗೆ 50 ವರ್ಷದ ಸಂಭ್ರಮ|ಚಿತ್ರದುರ್ಗದಲ್ಲಿ ಬೃಹತ್ ಅಭಿಮಾನೋತ್ಸವಕ್ಕೆ ಕ್ಷಣಗಣನೆ|”ಮಾತೃ ಹೃದಯಿ”ಗೆ ಅಮಿತ್ ಶಾ ಅವರಿಂದ ಸನ್ಮಾನ
ಯಡಿಯೂರಪ್ಪನವರ ಹೋರಾಟ, ಜೀವನವೇ ಒಂದು ಪಾಠವಿದ್ದಂತೆ , ಇದನ್ನ ಅವೀಸ್ಮರಣೀಯಗೊಳಿಸುವ ಸಲುವಾಗಿ ಯಡಿಯೂರಪ್ಪ ಅಭಿಮಾನೋತ್ಸವ ಜರುಗುತ್ತಿದೆ ಪಕ್ಷಾತೀತವಾಗಿ ಎಲ್ಲ ನಾಯಕರೂ, ಎಲ್ಲ ಸಮಾಜದ ಸ್ವಾಮೀಜಿಗಳು, ಮುಖಂಡರು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗ: ಬಿಜೆಪಿ ಪಕ್ಷವನ್ನ ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪನವರ ರಾಜಕೀಯ ಸೇವೆಗೆ 50 ವರ್ಷ ಸಂದ ಹಿನ್ನೆಲೆ ಮೇ 9 ರಂದು ಆಯೋಜಿಸಿರುವ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಚಿತ್ರದುರ್ಗ ಸಾಕ್ಷಿಯಾಗಲಿದೆ ಎಂದು ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಮಾನೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 10 ಲಕ್ಷ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ ಎಂದರು. ಪಕ್ಷದ ಸಿದ್ದಾಂತ, ಹೋರಾಟಗಳ ಮೂಲಕ ಅಧಿಕಾರಕ್ಕೆ ಬಂದು ಜನಮೆಚ್ಚಿದ, ರೈತನಾಯಕನಾಗಿ ಹೊರಹೊಮ್ಮಿದ ಮಾತೃ ಹೃದಯಿ ನಾಯಕನಾಗಿದ್ದು ಶಿವಮೊಗ್ಗ ಜಿಲ್ಲೆ ಅವರ ಅಸಂಖ್ಯಾತ ಕೊಡುಗೆಗೆ ಫಲಾನುಭವಿ ಎಂದು ಶಾಸಕ ಆರಗ ಜ್ಞಾನೇಂದ್ರ ಬಣ್ಣಿಸಿದರು.
ಮಾತೃಹೃದಯಿ ನಾಯಕ ಬಿಎಸ್‌ವೈ
ಯಡಿಯೂರಪ್ಪನವರ ಜೊತೆಗಿನ ರಾಜಕೀಯ ಒಡನಾಟದಲ್ಲಿ ಕಂಡ, ಹಲವು ವಿಚಾರಗಳನ್ನ ಮೆಲುಕುಹಾಕಿದ ಅವರು, ಯಡಿಯೂರಪ್ಪನವರದ್ದು ಸುಧೀರ್ಘ ಹೋರಾಟದ ಹಾದಿ, ಶಾರ್ಟ್ ಕಟ್ ಆಗಿರಲಿಲ್ಲ.
ರೈತಪರ ಬಜೆಟ್ ಮಂಡಿಸಿದ ಧೀಮಂತ ನಾಯಕ|
ಈ ಹಿಂದೆ ಬಿಜೆಪಿ ಪಕ್ಷವೆಂದರೆ ಮೇಲ್ವರ್ಗಕ್ಕೆ ಸೀಮಿತ ಎಂಬ ಹಣೆಪಟ್ಟಿಯನ್ನ ಕಳಚಿ ರೈತಪರ ಬಜೆಟ್ ಮಂಡನೆ, ರೈತರ ಸಾಲಮನ್ನಾ, ಭಾಗ್ಯಲಕ್ಷ್ಮೀ , ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆಯಂತಹ ಯೋಜನೆಗಳ ಮೂಲಕ ಸರ್ವಸ್ಪರ್ಶಿ, ಸರ್ವವ್ಯಾಪಿ ಪಕ್ಷವಾಗಿಸಿದ ಕೀರ್ತಿ ಬಿಎಸ್ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದರು.

ಇತ್ತೀಚಿನ ದಿನಗಳ ರಾಜಕಾರಣದಲ್ಲಿ ಸಿದ್ದಾಂತದ ಜಾಗದಲ್ಲಿ ಜಾತಿ , ಹಣ ,ಜಾಗ ಮಾಡಿಕೊಂಡಿದೆ. ಸಿದ್ದಾಂತ ಹೋರಾಟದ ಹಾದಿಗಿಂತ, ತಕ್ಷಣ ಗದ್ದುಗೆಗೇರಬೇಕು ಅಧಿಕಾರ ಚಲಾಯಿಸಬೇಕೆಂಬ ತಕ್ಷಣ ಮಾರ್ಗ ಬಯಸುವವರೇ ಹೆಚ್ಚಾಗಿದ್ದಾರೆಂದು ವಿಷಾದಿಸಿದರು.
ಹಲವು ಮುಖ್ಯಮಂತ್ರಿಗಳ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದು ಯಡಿಯರಪ್ಪನಂತಹ ಮತ್ತೊಬ್ಬ ರಾಜಕಾರಣಿಯನ್ನ ನೋಡಲಾಗದು ಎಂದರು.

ಯಡಿಯೂರಪ್ಪನವರು ನಿಂತಲ್ಲೇ ನೀತಿ ನಿರೂಪಣೆ ಮಾಡಬಲ್ಲ ಸ್ಥಳದಲ್ಲಿ ಅನುದಾನಗಳನ್ನ ಘೋಷಿಸುವ ಛಾತಿ , ಸಹಾನುಭೂತಿವುಳ್ಳ ಅಪರೂಪದ ವ್ಯಕ್ತಿತ್ವವೆಂದು ಹಲವು ಘಟನೆಗಳನ್ನ ಮೆಲುಕುಹಾಕಿದರು.
ಯಡಿಯೂರಪ್ಪನವರ ಹೋರಾಟ, ಜೀವನವೇ ಒಂದು ಪಾಠವಿದ್ದಂತೆ , ಇದನ್ನ ಅವೀಸ್ಮರಣೀಯಗೊಳಿಸುವ ಸಲುವಾಗಿ ಯಡಿಯೂರಪ್ಪ ಅಭಿಮಾನೋತ್ಸವ ಜರುಗುತ್ತಿದೆ.
ಪಕ್ಷಾತೀತವಾಗಿ ಎಲ್ಲ ನಾಯಕರೂ, ಎಲ್ಲ ಸಮಾಜದ ಸ್ವಾಮೀಜಿಗಳು, ಮುಖಂಡರು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗಕ್ಕೆ ಬರಲಿರುವ ಅಮಿತ್ ಷಾ|
ಬಿ.ಎಸ್.ಅಭಿಮಾನೋತ್ಸವಕ್ಕೆ ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮಿಸಲಿದ್ದಾರೆ.
ಬಳಿಕ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗದ ಸಮಾರಂಭದ ಮೈದಾನಕ್ಕೆ ಆಗಮಿಸಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಭಿಮಾನೋತ್ಸವಕ್ಕೆ ಬಿಎಸ್‌ವೈ ತವರು ಜಿಲ್ಲೆ ಶಿವಮೊಗ್ಗದಿಂದ 60 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಧನಂಜಯ ಸರ್ಜಿ, ಅರುಣ್, ಮಾಜಿ ಶಾಸಕರಾದ ಅಶೋಕ್ ನಾಯಕ್, ಆರ್ ಕೆ ಸಿದ್ದರಾಮಣ್ಣ, ರಾಜ್ಯ ಬಿಜೆಪಿ ಪ್ರಕೋಷ್ಠಕ ದತ್ತಾತ್ರಿ, ಮಾಧ್ಯಮ ಪ್ರಮುಖ್ ಚಂದ್ರಶೇಖರ್, ಸಂತೋಷ್ ಬಳ್ಳೇಕೆರೆ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







