ಶಿವಮೊಗ್ಗ: ಮಹಿಳಾ ಮೀಸಲಾತಿ ಸೋಲಿಸಿದ ಕಾಂಗ್ರೆಸ್ ವಿರುದ್ದ ಬೃಹತ್ ಪ್ರತಿಭಟನೆ|ವಿರೋಧಪಕ್ಷಗಳ ನಾಯಕರಿಂದ ಹೆತ್ತ ತಾಯಿಗೆ ದ್ರೋಹ-ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ
ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ ಏಪ್ರಿಲ್ 16 ಮಹಿಳೆಯರ ಪಾಲಿನ ಕರಾಳ ದಿನವಾಗಿದ್ದು, ಮಹಿಳಾ ಮಸೂದೆ ಸೋಲನ್ನು ಹೆಣ್ಣು ಭ್ರೂಣಹತ್ಯೆಗೆ ಸಮವೆಂದು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ನೊಂದುಕೊಂಡರೆಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ: ಮಹಿಳಾ ಮೀಸಲಾತಿ ಬಿಲ್ ವಿರೋಧಿಸುವ ಮೂಲಕ ವಿರೋಧಪಕ್ಷಗಳು ಹೆತ್ತ ತಾಯಿಗೂ ದ್ರೋಹ ಬಗೆಯುವ ಕೆಲಸವನ್ನು ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಆರೋಪಿಸಿದ್ದಾರೆ.
ಸೋಮವಾರ ಬಿಜೆಪಿ ನಗರ ಮಹಿಳಾ ಮೋರ್ಚಾ, ವತಿಯಿಂದ ಆಯೋಜಿಸಿದ್ದ “ಮಹಿಳಾ ಆಕ್ರೋಶ ” ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ ಏಪ್ರಿಲ್ 16 ಮಹಿಳೆಯರ ಪಾಲಿನ ಕರಾಳ ದಿನವಾಗಿದ್ದು, ಮಹಿಳಾ ಮಸೂದೆ ಸೋಲನ್ನು ಹೆಣ್ಣು ಭ್ರೂಣಹತ್ಯೆಗೆ ಸಮವೆಂದು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ನೊಂದುಕೊಂಡರೆಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ಐದು ಬಾರಿ ಗುಜರಾತ್ ಸಿಎಂ ಆಗಿ ಮೂರನೇ ಬಾರಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ಕಟ್ಟಿಹಾಕಲು ಆಗದು ಎಂದರು.
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿದೇಶದಲ್ಲಿ ಕುಳಿತು ಭಾರತವನ್ನ ಟೀಕಿಸುವ, ಅವಮಾನಿಸುವ ಕೆಲಸ ಬಿಟ್ಟು ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವೆಂದು ಸಂಸದ ಬಿವೈ ರಾಘವೇಂದ್ರ ಹರಿಹಾಯ್ದರು.

ಶಾಸಕ ಚೆನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಸಬಲೀಕರಣದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಅಧಿಕಾರಕ್ಕಾಗಿ ಹಂಬಲಿಸುವ ಕಾಂಗ್ರೆಸ್, ಮಹಿಳೆಯರಿಗೆ ಸಿಗಬೇಕಾದ ಮೀಸಲಾತಿಯನ್ನು ತಡೆಯುವ ಮೂಲಕ ತನ್ನ ನೈಜ ಮುಖವನ್ನು ಬಯಲು ಮಾಡಿದೆ ಎಂದು ಆರೋಪಿಸಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಧುರ ಶಿವಾನಂದ ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಸಾಮಾಜಿಕವಾಗಿ ರಾಜಕೀಯವಾಗಿ ಮಹಿಳೆಯರನ್ನು ಮುನ್ನಡೆಸುವುದು, ಸಂಸತ್ನಲ್ಲಿ ಮಹಿಳೆಯರಿಗೆ 200ಕ್ಕೂ ಹೆಚ್ಚು ಸ್ಥಾನ ಸಿಕ್ಕರೆ ವಿರೋಧ ಪಕ್ಷಗಳಿಗೆ ಅಭದ್ರತೆ ಕಾಡಲಿದೆ ಹೀಗಾಗಿ ಮಹಿಳಾ ಮಸೂದೆಯನ್ನು ಸೋಲುವಂತೆ ಮಾಡಿದರು ಎಂದರು.
ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಮಾಜಿ ವಿಧಾನಪರಿಷತ್ ಸದಸ್ಯ ಆರ್ ಕೆ ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಮಂಜುಳಾ ಶ್ರೀನಿವಾಸ್, ಪದಾಧಿಕಾರಿಗಳಾದ ಲತಾ ಶ್ರೀನಿವಾಸ, ಶಾಂತಾ ಸುರೇಂದ್ರ ಸೇರಿದಂತೆ ಮಹಾಲಕ್ಷ್ಮಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







