KarnatakaShivamogga
Trending

ಶಿವಮೊಗ್ಗ: ಪಾಲಿಕೆಯಿಂದ ಇ-ಆಸ್ತಿ ಆಂದೋಲನ|ವಿವಿಧ ವಾರ್ಡ್‌ಗಳಲ್ಲಿ ಇ-ಖಾತಾ ಮೇಳ|ನವೆಂಬರ್‌ 24 ರಿಂದ ಚಾಲನೆ

ಮಹಾನಗರಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಆಸ್ತಿ’ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ‘ಇ-ಆಸ್ತಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತ ಮಾಯಣ್ಣಗೌಡ ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.

ಆಯುಕ್ತ ಮಾಯಣ್ಣಗೌಡ

ಆಸ್ತಿ ಮಾಲೀಕರು, ಪ್ರಜಾ ಸೇವಾ ಕೇಂದ್ರ (ಕರ್ನಾಟಕ ಒನ್/ಶಿವಮೊಗ್ಗ ಒನ್), ಪಾಲಿಕೆಯ 3 ವಲಯ ಕಚೇರಿಗಳು, ‘Citizen Portal’ (https://eaasthi.karnataka.gov.in/) ಹಾಗೂ ವಾರ್ಡ್‌ವಾರು ‘ಇ-ಖಾತಾ ಮೇಳ’ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ, ಮಹಾನಗರಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ನವೆಂಬರ್ ಮತ್ತು ಡಿಸೆಂಬರ್ ಮಾಹೆಗಳ ಅವಧಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ವಾರ್ಡ್‌ಗಳಲ್ಲಿ ಇ-ಖಾತಾ ಮೇಳಗಳು ನಡೆಯಲಿವೆ. ದಿನಾಂಕ ಹಾಗೂ ಸ್ಥಳದ ವಿವರ ಈ ಕೆಳಗಿನಂತೇ ಇದೆ.

ಇನ್ನು ಇಸಿ ಕಡ್ಡಾಯವಿರುವುದಿಲ್ಲ, ಇಸಿ ನೀಡಿದಲ್ಲಿ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ಮತ್ತು ಇಸಿ ಇಲ್ಲದಿದ್ದಲ್ಲಿ ನಾನ್ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ನೀಡಲಾಗುವುದು ಎಂದು ಆಯುಕ್ತ ಮಾಯಣ್ಣಗೌಡ ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Follow Us

Leave a Reply

Your email address will not be published. Required fields are marked *

Back to top button