KarnatakaShivamogga

ಉಡಾನ್ 6.0 ಟೆಂಡರ್‌ನಲ್ಲಿ ಶಿವಮೊಗ್ಗ ಏರಪೋರ್ಟ್ ಸೇರ್ಪಡೆ|ಶೀಘ್ರದಲ್ಲೇ ಮತ್ತೆ ವಿಮಾನ ಹಾರಾಟ-ಬಿ.ವೈ.ರಾಘವೇಂದ್ರ

ಉಡಾನ್ ಯೋಜನೆಯಡಿ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಒಂದೆರಡು ತಿಂಗಳಲ್ಲೇ ವಿಮಾನಯಾನ ಮತ್ತೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂಬ ಆತಂಕದ ನಡುವೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ಹೊರಬಿದ್ದಿದ್ದು, ಉಡಾನ್ 6.0ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಏರಪೋರ್ಟ್ ಸೇರ್ಪಡೆಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸೋಮವಾರದಂದು ಮಾತನಾಡಿದ ಅವರು, ಹಿಂದಿನ ಉಡಾನ್ ನೀತಿಯಡಿ ಮೂರು ವರ್ಷದ ಅವಧಿ ಮುಗಿದ ಬಳಿಕ 1 ವರ್ಷದ ಕಮರ್ಶಿಯಲ್ ಬ್ರೇಕ್ ನೀಡಲಾಗುತ್ತಿತ್ತು.

ಆದರೆ ಹಿರಿಯ ನಾಯಕರ ಸತತ ಪ್ರಯತ್ನದ ಪರಿಣಾಮ ಡಿಸೆಂಬರ್ ಮೊದಲ ವಾರದಲ್ಲಿ ಉಡಾನ್ 6.0 ಹೊಸ ಯೋಜನೆಗೆ ಶಿವಮೊಗ್ಗ ಏರಪೋರ್ಟ್ ಸೇರ್ಪಡೆಯಾಗಿದ್ದು ಸಂತೋಷದ ವಿಚಾರವೆಂದು ಹೇಳಿದರು.

ಉಡಾನ್ ಯೋಜನೆಯಡಿ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಒಂದೆರಡು ತಿಂಗಳಲ್ಲೇ ವಿಮಾನಯಾನ ಮತ್ತೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಮಧ್ಯದ ಅವಧಿಯಲ್ಲಿ ಕನಿಷ್ಠ ಶಿವಮೊಗ್ಗ – ಬೆಂಗಳೂರು, ಶಿವಮೊಗ್ಗ ಹೈದರಾಬಾದ್ ಎರಡು ಮಾರ್ಗಗಳಿಗೆ ರಾಜ್ಯ ಸರ್ಕಾರ ವಿಜಿಎಫ್ ಹಣಕಾಸಿನ ಬೆಂಬಲ ನೀಡಿ ಸಹಕರಿಸುವಂತೆ ಅವರು ಕೋರಿದರು.

ಉಡಾನ್ ಅಡಿಯಲ್ಲಿ ಟೆಂಡರ್ ಪಡೆದು ಹೊಸ ವಿಮಾನಯಾನ ಸಂಸ್ಥೆ ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಮುಂದೆ ಬಂದರೆ ರಾಜ್ಯ ಸರ್ಕಾರ ವಿಜಿಎಫ್ ಸಹಾಯ ನಿಲ್ಲಿಸಬಹುದು.

ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಶಿವಮೊಗ್ಗ ಏರಪೋರ್ಟ್ ವಿಮಾನಯಾನವನ್ನು ರಾಜ್ಯ ಸರ್ಕಾರ ನೆರವು ನೀಡಿ ಮುಂದುವರಿಸಬೇಕೆಂದು ಬಿವೈ ರಾಘವೇಂದ್ರ ಮತ್ತೊಮ್ಮೆ ಒತ್ತಾಯಿಸಿದರು

ಈ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ ನಿರ್ಧಿಷ್ಟ ಮಾರ್ಗಗಳನ್ನು ಸೂಚಿಸಿಲ್ಲ ಬದಲಾಗಿ ಬೇಕಾದ ಮಾರ್ಗಗಳ ಕಾರ್ಯಸಾಧ್ಯತೆ ಅಧ್ಯಯನ ನಡೆಸಿ ವಿಮಾನಯಾನ ಸಂಸ್ಥೆಗಳೇ ನಿರ್ಧಿಷ್ಟ ಮಾರ್ಗಗಳನ್ನು ಆಯ್ದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

Follow Us

Leave a Reply

Your email address will not be published. Required fields are marked *

Back to top button