ಶಿವಮೊಗ್ಗ: ಪಾಲಿಕೆಯಿಂದ ಇ-ಆಸ್ತಿ ಆಂದೋಲನ|ವಿವಿಧ ವಾರ್ಡ್ಗಳಲ್ಲಿ ಇ-ಖಾತಾ ಮೇಳ|ನವೆಂಬರ್ 24 ರಿಂದ ಚಾಲನೆ
ಮಹಾನಗರಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಆಸ್ತಿ’ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಾರ್ಡ್ಗಳಲ್ಲಿ ‘ಇ-ಆಸ್ತಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತ ಮಾಯಣ್ಣಗೌಡ ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಹಲವೆಡೆ ಅವಕಾಶ|
ಆಸ್ತಿ ಮಾಲೀಕರು, ಪ್ರಜಾ ಸೇವಾ ಕೇಂದ್ರ (ಕರ್ನಾಟಕ ಒನ್/ಶಿವಮೊಗ್ಗ ಒನ್), ಪಾಲಿಕೆಯ 3 ವಲಯ ಕಚೇರಿಗಳು, ‘Citizen Portal’ (https://eaasthi.karnataka.gov.in/) ಹಾಗೂ ವಾರ್ಡ್ವಾರು ‘ಇ-ಖಾತಾ ಮೇಳ’ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ, ಮಹಾನಗರಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ನವೆಂಬರ್ ಮತ್ತು ಡಿಸೆಂಬರ್ ಮಾಹೆಗಳ ಅವಧಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ವಾರ್ಡ್ಗಳಲ್ಲಿ ಇ-ಖಾತಾ ಮೇಳಗಳು ನಡೆಯಲಿವೆ. ದಿನಾಂಕ ಹಾಗೂ ಸ್ಥಳದ ವಿವರ ಈ ಕೆಳಗಿನಂತೇ ಇದೆ.
- 24-11-2026: ವಲಯ-1, ವಾರ್ಡ್-1 -ಗುರುಸಿದ್ದೇಶ್ವರ ಮಠ, ತಮಿಳ್ತಾಯ್ ಸಮುದಾಯ ಭವನ, ಸೋಮಿನಕೊಪ್ಪ ಮುಖ್ಯರಸ್ತೆ.
- 25-11-2026: ವಲಯ-3, ವಾರ್ಡ್-14 -ಚನ್ನಬಸವೇಶ್ವರ ಸಮುದಾಯ ಭವನ, ಮಲವಗೊಪ್ಪ, ಬಿ.ಹೆಚ್.ರಸ್ತೆ.
- 26-11-2026: ವಲಯ-2, ವಾರ್ಡ್-26 – ದ್ರೌಪದಮ್ಮ ದೇವಸ್ಥಾನ, ಗೋಪಾಳ.
- 02-12-2026: ವಲಯ-1, ವಾರ್ಡ್-8 -ಶಾಂತಿನಗರ, ಸರ್ಕಾರಿ ಶಾಲೆ.
- 03-12-2026: ವಲಯ-2, ವಾರ್ಡ್-20, 21, 22 -ರಾಮಣ್ಣ ಶ್ರೇಷ್ಠಿ ಪಾರ್ಕ್.
- 05-12-2026: ವಲಯ-3, ವಾರ್ಡ್-18, 19 -ಕೋಟೆ ಮಾರಿಕಾಂಬ ಸಮುದಾಯ ಭವನ, ಕೋಟೆ ರಸ್ತೆ.
- 09-12-2026: ವಲಯ-1, ವಾರ್ಡ್-34 – ಕೆ.ಹೆಚ್.ಬಿ. ಕಛೇರಿ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ.
- 11-12-2026: ವಲಯ-2, ವಾರ್ಡ್-10, 11 -ಮಾರಿಕಾಂಬ ದೇವಸ್ಥಾನ, ಟ್ಯಾಂಕ್ ಮೊಹಲ್ಲಾ.
- 16-12-2026: ವಲಯ-1, ವಾರ್ಡ್-3, 4, 6, 7 – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ರವೀಂದ್ರನಗರ.
- 17-12-2026: ವಲಯ-3, ವಾರ್ಡ್-27 – ಭಾರತೀಯ ಸಭಾ ಭವನ, ಆರ್.ಎಂ.ಎಲ್. ನಗರ ಮುಖ್ಯ ರಸ್ತೆ.
- 18-12-2026: ವಲಯ-2, ವಾರ್ಡ್-30 -ಪ್ರಸನ್ನ ಗಣಪತಿ ದೇವಸ್ಥಾನ, ನಾಗರಾಜಪುರ ಬಡಾವಣೆ.
- 22-12-2026: ವಲಯ-2, ವಾರ್ಡ್-35 -ಅಗಮುಡಿ ಕಲ್ಯಾಣ ಮಂದಿರ, ಗೋಪಾಲಗೌಡ ಬಡಾವಣೆ.
- 23-12-2026: ವಲಯ-1, ವಾರ್ಡ್-32, 33 – ವೀಣಾ ಶಾರದಾ ಶಾಲೆ, ಹೊಸಮನೆ.
- 24-12-2026: ವಲಯ-3, ವಾರ್ಡ್-16, 17 -ಚೌಡೇಶ್ವರಿ ಸಮುದಾಯ ಭವನ, 6ನೇ ತಿರುವು, ಎಡಭಾಗ, ವಿದ್ಯಾನಗರ.
- 29-12-2026: ವಲಯ-2, ವಾರ್ಡ್-5, 29 -ಕಾಮಾಕ್ಷಿ ಬೀದಿ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಗಣಪತಿ ದೇವಸ್ಥಾನ ಹತ್ತಿರ.
- 30-12-2026: ವಲಯ-1, ವಾರ್ಡ್-34 -ಕೆ.ಹೆಚ್.ಬಿ. ಕಛೇರಿ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ.
- 31-12-2026: ವಲಯ-3, ವಾರ್ಡ್-28 -ಗೌಡ ಸಾರಸ್ವತ ಕಲ್ಯಾಣ ಮಂದಿರ, ಜಿ.ಎಸ್.ಕೆ.ಎಂ. ರಸ್ತೆ.

ಅರ್ಜಿದಾರರು, ಇ ಆಸ್ತಿ ನೊಂದಣಿ ಅರ್ಜಿಯೊಂದಿಗೆ ಮಾಲೀಕತ್ವ ಸಾಬೀತುಪಡಿಸುವ ದಾಖಲೆ (ನೋಂದಾಯಿತ ಆಸ್ತಿ ದಾಖಲಾತಿ ಪತ್ರ), ಮಾಲೀಕರ ಭಾವಚಿತ್ರ ಮತ್ತು ಆಧಾರ್ ಕಾರ್ಡ್, ವೋಟರ್ ಐಡಿ, ಕಟ್ಟಡ/ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ವಿದ್ಯುತ್ ಬಿಲ್ ಹಾಗೂ ಚಾಲ್ತಿ ಸಾಲಿನ ಕಂದಾಯ ಪಾವತಿ ರಶೀದಿಯನ್ನು ಸಲ್ಲಿಸಬೇಕು.

ಇನ್ನು ಇಸಿ ಕಡ್ಡಾಯವಿರುವುದಿಲ್ಲ, ಇಸಿ ನೀಡಿದಲ್ಲಿ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ಮತ್ತು ಇಸಿ ಇಲ್ಲದಿದ್ದಲ್ಲಿ ನಾನ್ ಟ್ರ್ಯಾನ್ಸ್ಯಾಕ್ಟಬಲ್ ಇ-ಆಸ್ತಿ ನೀಡಲಾಗುವುದು ಎಂದು ಆಯುಕ್ತ ಮಾಯಣ್ಣಗೌಡ ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ






