ಪಾರಿವಾಳದ ಗೂಡಾದ ಶಿವಮೊಗ್ಗ ಐಟಿಪಾರ್ಕ್|ಕಟ್ಟಡದ ದುಸ್ಥಿತಿ, ಕಾಲ್ಕಿತ್ತ ಐಟಿ ಕಂಪನಿಗಳು|ಕಿಯೋನಿಕ್ಸ್ ಕಾಯಕಲ್ಪಕ್ಕೆ ಶಾಸಕ ಡಿ.ಎಸ್.ಅರುಣ್ ಆಗ್ರಹ
ಕಿಯೋನಿಕ್ಸ್ ಐಟಿ ಪಾರ್ಕ್ನಲ್ಲಿ ಸ್ಥಿರತಾ ಪ್ರಮಾಣಪತ್ರದ ಕೊರತೆ, ಮೂಲಸೌಕರ್ಯ ಹಾಗೂ ಸುರಕ್ಷತಾ ಸಮಸ್ಯೆಗಳಿಂದ ಕಂಪನಿಗಳು ನಿರ್ಗಮಿಸುತ್ತಿವೆ ಎಂದು ಶಾಸಕ ಡಿ.ಎಸ್.ಅರುಣ್ ಸತ್ಯಾಂಶ ಬಿಚ್ಚಿಟ್ಟರು.

ಶಿವಮೊಗ್ಗ: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ 13 ಕೋಟಿ ವೆಚ್ಚದ ಕಿಯೋನಿಕ್ಸ್ ಐಟಿ ಪಾರ್ಕ್, ಈಗ ಪಾರಿವಾಳಗಳ ಗೂಡಾಗಿ ಮಾರ್ಪಟ್ಟಿದ್ದು, ನೂರಾರು ಕಂಪನಿಗಳು ಇಲ್ಲಿಂದ ಕಾಲ್ಕಿತ್ತಿದ್ದು ಐಟಿ ಪಾರ್ಕ್ ಇದ್ದೂ ಇಲ್ಲದಂತಾಗಿದೆ ಎಂದು ಶಾಸಕ ಡಿ.ಎಸ್.ಅರುಣ್ ಹೇಳಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಬೆಂಗಳೂರಿಗೆ ಸೀಮಿತವಾಗಿದ್ದ ಐಟಿ ಕ್ಷೇತ್ರವನ್ನು ಇತರ ನಗರಗಳಿಗೂ ವಿಸ್ತರಿಸುವ ಕನಸಿನೊಂದಿಗೆ ಶಿವಮೊಗ್ಗದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು ಎಂದು ಸ್ಮರಿಸಿದರು.

ನಿಧಿಗೆ ಬಳಿ 13 ಕೋಟಿರೂ. ವೆಚ್ಚದಲ್ಲಿ ಕಿಯೋನಿಕ್ ಐಟಿ ಪಾರ್ಕ್ನ 70 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಕಟ್ಟಡ ತಲೆಎತ್ತಿತು ಎಂದು ಹೇಳಿದರು.
ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಹಲವು ಕಂಪನಿಗಳು ನಿರ್ಗಮಿಸಿದ್ದು, ಉಳಿದ ಕಂಪನಿಗಳ ಗುತ್ತಿಗೆ ನವೀಕರಣಕ್ಕೂ ಆಡಳಿತಾತ್ಮಕ ತೊಡಕು ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪನಿಗಳ ನವೀಕರಣಕ್ಕೆ ನೂರೆಂಟು ತೊಡಕು|
ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಅಗತ್ಯವಾದ ಕಟ್ಟಡದ ಸ್ವಾಧೀನ ಪ್ರಮಾಣಪತ್ರ, ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡಲು ಸರ್ಕಾರದ ಆಡಳಿತ ವಿಫಲವಾಗಿದೆ ಎಂದು ಶಾಸಕ ಡಿ.ಎಸ್.ಅರುಣ್ ದೂರಿದರು.

ಐಟಿ ಪಾರ್ಕ್ನಲ್ಲಿ ಟಿಸಿಎಸ್ ಸೇರಿದಂತೆ ವಿವಿಧ ಕಂಪನಿಗಳ ನೇಮಕಾತಿ ಪರೀಕ್ಷಾ ಕೇಂದ್ರವಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ.
ಶೌಚಾಲಯ, ಕ್ಯಾಂಟೀನ್, ವೈ-ಫೈ ಹಾಗೂ ಅಸಮರ್ಪಕ ಜಾಮರ್ ವ್ಯವಸ್ಥೆ ಒಡೆದಿರುವ ಕಟ್ಟಡದ ಗಾಜು, ವಿದ್ಯುತ್ ಉಪಕರಣಗಳಿರುವೆಡೆ ಮಳೆ ನೀರು ಬೀಳುತ್ತಿದ್ದು ಉದ್ಯೋಗಿಗಳು ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸುರಕ್ಷತೆ, ಸ್ಥಿರತೆಯ ಕೊರತೆ|
ಜಾಗ ಖಾಲಿ ಮಾಡಿದ ಕಂಪನಿಗಳು|
ಕಿಯೋನಿಕ್ಸ್ ಐಟಿ ಪಾರ್ಕ್ನಲ್ಲಿ ಸ್ಥಿರತಾ ಪ್ರಮಾಣಪತ್ರದ ಕೊರತೆ, ಮೂಲಸೌಕರ್ಯ ಹಾಗೂ ಸುರಕ್ಷತಾ ಸಮಸ್ಯೆಗಳಿಂದ ಕಂಪನಿಗಳು ನಿರ್ಗಮಿಸುತ್ತಿವೆ ಎಂದು ಶಾಸಕ ಡಿ.ಎಸ್.ಅರುಣ್ ಸತ್ಯಾಂಶ ಬಿಚ್ಚಿಟ್ಟರು.

ಕೆಡಿಎಂನಿಂದ ಶಿವಮೊಗ್ಗಕ್ಕೆ ಐಟಿ ವಲಯದ ಉತ್ತೇಜನ ದೊರೆಯುತ್ತಿಲ್ಲ. ಕಲಬುರಗಿಯಂತೆ ಶಿವಮೊಗ್ಗದಲ್ಲಿಯೂ ಐಟಿ ಪಾರ್ಕ್ ದುರಸ್ತಿ, ನವೀಕರಣ ಕೈಗೊಂಡು ಕಂಪನಿಗಳಿಗೆ ಸ್ಥಿರತಾ ಪ್ರಮಾಣಪತ್ರ ನೀಡಬೇಕು.
ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರದ ಸುರಕ್ಷತೆಗೆ ಆದ್ಯತೆ ನೀಡಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ. ಗೋಪಿನಾಥ್ ಆಗ್ರಹಿಸಿದರು.
ಮಾಸಿಕ 15 ಲಕ್ಷ ಬಾಡಿಗೆ ಆದಾಯಕ್ಕೆ ಖೋತಾ!
ಕಿಯೋನಿಕ್ಸ್ ಕಟ್ಟಡದಲ್ಲಿ ಹಲವು ಕಂಪನಿಗಳು ಕಾರ್ಯಾರಂಭ ಮಾಡಿದ್ದವು. ವಿವಿಧ ಕಂಪನಿಗಳಿಂದ ಬಾಡಿಗೆ ರೂಪದಲ್ಲಿ ಮಾಸಿಕ ಸುಮಾರು ₹15 ಲಕ್ಷ ಆದಾಯ ಬರುತ್ತಿತ್ತು ಎನ್ನಲಾಗಿದೆ.

ಕಟ್ಟಡದ ನಾಲ್ಕು ಮಹಡಿಗಳಲ್ಲಿಯೂ ಎಸಿ ವ್ಯವಸ್ಥೆ ಸಮರ್ಪಕವಾಗಿಲ್ಲ, ಮಳೆ ಬಂದಾಗ ಕಟ್ಟಡದೊಳಗೆ ನೀರು ನುಗ್ಗುತ್ತದೆ. ಪಿಒಪಿ ಮೇಲ್ಛಾವಣಿ ಕುಸಿಯುತ್ತಿದೆ. ಕಟ್ಟಡದ ಕೆಲವು ಭಾಗಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿವೆ.
ಎಲ್ಲೆಡೆ ಅಸ್ವಚ್ಛತೆಯಿಂದಾಗಿರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ನರಕಯಾತನೆ ಅನುಭವಿಸುವಂತಾಗಿದ್ದರಿಂದ ಕಂಪನಿಗಳು ಜಾಗೆ ಖಾಲಿ ಮಾಡಲು ಇದು ಸಹ ಕಾರಣವಾಗಿದೆ
ಕಿಯೋನಿಕ್ಸ್ನ ಮಾಜಿ ನಿರ್ದೇಶಕ ಪ್ರಶಾಂತ್, ಚಂದ್ರಶೇಖರ್, ಮಂಜುನಾಥ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ






