ShivamoggaSports

ಎಸ್‌ಜಿಎಫ್‌ಐ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ|ಶಿವಮೊಗ್ಗದ ಅಕ್ಷಯ್‌ಗೆ ಮೊದಲ ಸ್ಥಾನ|ಅಣ್ಣನನ್ನೇ ಮೀರಿಸಿದ ತಮ್ಮ|

ಶಿವಮೊಗ್ಗ: 14 ವರ್ಷದೊಳಗಿನ ಎಸ್‌ಜಿಎಫ್‌ಐ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಪ್ರತಿಭೆ ಅಕ್ಷಯ್ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾನೆ.

6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ಷಯ್‌ ಜಿ, ಗುರುಪುರದ ನಿವಾಸಿ ಗಿರೀಶ್ ಹಾಗೂ ಶೃತಿ ದಂಪತಿಯ ಎರಡನೇ ಪುತ್ರನಾಗಿದ್ದು ತಂದೆ ಗಿರೀಶ್‌, ಸಿಟಿ ಸೆಂಟ್ರಲ್ ಮಾಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ

ನಗರದ ಬಿಜಿಎಸ್ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ ಅಕ್ಷಯ್ ಗೆ ಕರಾಟೆ ಬಗ್ಗೆ ಆಸಕ್ತಿ ಮೂಡಲು ಅಣ್ಣ ಚಿರಾಗ್‌ನೇ ಸ್ಪೂರ್ತಿಯಾಗಿದ್ದಾನೆ.

ಅಕ್ಷಯ್ ,ಅಣ್ಣ ಚಿರಾಗ್ ಕೂಡ ಉತ್ತಮ ಕರಾಟೆಪಟುವಾಗಿದ್ದು, ಅಸ್ಟ್ರಾ ಸ್ಪೋಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು ಜಿಲ್ಲಾ ಮಟ್ಟದವರೆಗೂ ಸಾಧನೆ ಮಾಡಿದ್ದಾನೆ.

ಅಣ್ಣನಿಂದ ಸ್ಪೂರ್ತಿಗೊಂಡ ಅಕ್ಷಯ್ ಅದೇ ಅಕಾಡೆಮಿಯಲ್ಲಿ ತರಬೇತುದಾರ ಕಿಶೋರ್ ಗರಡಿಯಲ್ಲಿ ಪಳಗಿ ತಾಲೂಕು, ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾನೆ.

ದೇವನಹಳ್ಳಿಯಲ್ಲಿ ಜಿಲ್ಲಾಪಂಚಾಯತ್, ಶಾಲಾಶಿಕ್ಷಣ ಇಲಾಖೆ ಆಯೋಜಿಸಿದ್ದ 16 ವರ್ಷದೊಳಗಿನ ಬಾಲಕರ 20 ಕೆಜಿ ವಿಭಾಗದಲ್ಲಿ SGFI ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅತ್ಯುತ್ತಮ‌ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಲೂಧಿಯಾನದಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ಅಕ್ಷಯ್ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಗೆ ಒಂದು ಕಿರೀಟವಿದ್ದಂತೆ ಎಂದು ಅಸೋಸಿಯೇಶನ್ ಅಧ್ಯಕ್ಷ ವಿನೋದ್ ಅಭಿನಂದಿಸಿದ್ದಾರೆ.

ಮಧ್ಯಮವರ್ಗದ ಕುಟುಂಬದಿಂದ ಬಂದ ಅಕ್ಷಯ್ ಸಾಧನೆಗೆ ಪೋಷಕರೇ ಬೆನ್ನೆಲುಬು.

ಜಿಲ್ಲೆಯ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿರುವ ಅಕ್ಷಯಗೆ ಶಾಲಾ ಆಡಳಿತ ಮಂಡಳಿ ವಿದ್ಯಾಭ್ಯಾಸ ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡಿದರೆ ಮತ್ತಷ್ಟು ಬಲಸಿಕ್ಕಂತಾಗುತ್ತದೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

ಬಿಜಿಎಸ್ ಶಾಲೆಗೆ ಕೀರ್ತಿ ತಂದ ಅಕ್ಷಯಗೆ ಆದಿಚುಂಚನಗಿರಿ ಸಂಸ್ಥಾನದ ಶ್ರೀಗಳು ಅಭಿನಂದಿಸಿ ಆಶೀರ್ವಚನ ನೀಡಿದ್ದಾರೆ. ಇನ್ನು ಅಸ್ಟ್ರಾ ಅಕಾಡೆಮಿ ಮತ್ತು ಸಿಟಿ ಕರಾಟೆ ಅಸೋಸಿಯೇಶನಗೆ ಹೆಮ್ಮೆಯ ಕ್ರೀಡಾಪಟುವನ್ನು ಅಭಿನಂದಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲೂ ಕರ್ನಾಟಕದ ಕೀರ್ತಿ ಬೆಳಗಿಸಲೆಂದು, ಸಿಟಿ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಅನೂಪ್ ಆರ್ ಶೇಖರ್, ಖಜಾಂಚಿ ಶ್ರೇಯಸ್,ತರಬೇತುದಾರ,ಕಿಶೋರ್, ದಿಗಂತ್ ಹಾರೈಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button