DistrictShivamogga

ಮನರೇಗಾ ದುರ್ಬಳಕೆ ತಡೆಗಟ್ಟಲು “ವಿಬಿ-ಜಿ ರಾಮ್‌ ಜಿ” ಜಾರಿಗೆ!ಮಹತ್ಮಾಗಾಂಧಿ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕೀಯ!ಮೋದಿ ಕ್ರಾಂತಿಕಾರಕ ಹೆಜ್ಜೆಗೆ ಸಂಸದ ರಾಘವೇಂದ್ರ ಸಮರ್ಥನೆ|

ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಈ ಹಿಂದೆ ಹೇಗೆ ದುರ್ಬಳಕೆಯಾಗುತ್ತಿತ್ತು ಅದನ್ನು ತಡೆಗಟ್ಟಲು ಹೊಸ ಯೋಜನೆಯಲ್ಲಿ ಯಾವ ರೀತಿ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂಬ ಅಂಶಗಳನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿವರಿಸಿದರು.

ಮನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿದ್ದ ಲೋಪದೋಷಗಳನ್ನ ಸರಿಪಡಿಸಿ ಕೇಂದ್ರ ಸರ್ಕಾರ ತಂದಿರುವ ʼ ವಿಬಿ-ಜಿ ರಾಮ್‌ ಜಿʼ ಹೆಸರಿನ ಕಾಯ್ದೆಗೆ ಕಾಂಗ್ರೆಸ್‌ ಪಕ್ಷ ಮಾತ್ರ ರಾಜಕೀಯ ಕಾರಣಗಳಿಗಾಗಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಬೌದ್ದಿಕ ದಿವಾಳಿತನ ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.

ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸೋಮವಾರದಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಬಿ-ಜೀ ರಾಮ್‌ಜೀ ಕಾಯ್ದೆಯ ಪ್ರಯೋಜನಗಳೇನು? ಮಾಡಿರುವ ಬದಲಾವಣೆಗಳೇನು ಎಂಬುದರ ಕುರಿತು ಸುದೀರ್ಘ ವಿವರಣೆ ನೀಡಿದರು.

ಇದು ನರೇಂದ್ರ ಮೋದಿ ಸರ್ಕಾರದ ದೂರದೃಷ್ಠಿಯುಳ್ಳ ಮಹತ್ವದ ಕ್ರಾಂತಿಕಾರಕ ಹೆಜ್ಜೆ ಎಂದು ಸಮರ್ಥಿಸಿಕೊಂಡರು.

ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಈ ಹಿಂದೆ ಹೇಗೆ ದುರ್ಬಳಕೆಯಾಗುತ್ತಿತ್ತು ಅದನ್ನು ತಡೆಗಟ್ಟಲು ಹೊಸ ಯೋಜನೆಯಲ್ಲಿ ಯಾವ ರೀತಿ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂಬ ಅಂಶಗಳನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿವರಿಸಿದರು.

ವಿಬಿ-ಜಿ ರಾಮ್‌ ಜಿ ಹೆಸರು ಸೂಕ್ತವಾಗಿದೆ ಇದು ಗಾಂಧೀಜಿಯ ಆಶಯಕ್ಕೆ ವಿರುದ್ದವಾಗಿಲ್ಲ ಎಂಬುದನ್ನ ಕೆಲವು ದಾಖಲೆ ನೀಡುವ ಮೂಲಕ ಅವರು ಸಮರ್ಥಿಸಿಕೊಂಡರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್‌.ಕೆ. ಜಗದೀಶ್, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಮತ್ತಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button