CrimeNationalNew DelhiSpecial Stories

ಹುಬ್ಬಳ್ಳಿ: ವಿದೇಶದಲ್ಲಿ ನೌಕರಿ ಕೊಡಿಸುವ ಆಮಿಷ|ಗಾಲಿ ಪ್ರೇಮಕುಮಾರ್‌ ಸಂದೀಪ್‌ ಎಂಬ ವಂಚಕನಿದ್ದಾನೆ ಹುಷಾರ್..!‌ಇದು ಶಿಪ್ಪಿಂಗ್‌ನಲ್ಲಿ ನೌಕರಿ ಕೊಡಿಸುವ ಮೋಸದ ದಂಧೆ!

ವೈಭವನನ್ನು ಅಪಹರಣ ಮಾಡಿದರೇ ಇನ್ನು ಹೆಚ್ಚಿನ ದುಡ್ಡು ಪೀಕಬಹುದು ಎಂದು ಯೋಚಿಸಿದ್ದಾನೆ. ಲಾಡ್ಜ್‌ನಲಿದ್ದ ಒಬ್ಬ ವ್ಯಕ್ತಿ ಈ ಬಗ್ಗೆ ವೈಭವಗೆ ಸುಳಿವು ನೀಡಿದ್ದರಿಂದ ರಾತ್ರೋರಾತ್ರಿ ಅಲ್ಲಿಂದ ರೂಮ್‌ಖಾಲಿ ಮಾಡುವ ಮೂಲಕ ಬಚಾವಾಗಿದ್ದಾನೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಯುವಕನೋರ್ವನಿಗೆ ವಿದೇಶದಲ್ಲಿ ನೌಕರಿ ಕೊಡಿಸುವ ಆಮಿಷವೊಡ್ಡಿದ್ದ ವಂಚಕನೊಬ್ಬ ಆನ್‌ಲೈನ್‌ಮುಖಾಂತರ ಬರೋಬ್ಬರಿ ಒಂದುವರೆ ಲಕ್ಷರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.

ವ್ಯಾಟ್ಸಾಪ್‌ಗೆ ಬಂದ ಸಂದೇಶವನ್ನು ನಂಬಿದ್ದ ಯುವಕನಿಗೆ ಎರಡು ದಿನದಲ್ಲಿಯೇ ಸೌದಿ ಅರೇಬಿಯಾಕ್ಕೆ ತೆರಳಬೇಕು ಎಂದು ನವದೆಹಲಿವರೆಗೆ ಕರೆಸಿದ್ದ ವಂಚಕ, ಹಂತ ಹಂತವಾಗಿ ಒಂದುವರೆ ಲಕ್ಷರೂ. ಹಣ ಪೀಕಿದ್ದಾನೆ.

ಇಷ್ಟೇ ಅಲ್ಲದೇ ಆ ಯುವಕನಿಂದ ಪಾಸಪೋರ್ಟ್‌ಹಾಗೂ ಸಿಡಿಸಿ ಅನ್ನು ಇಸಿದುಕೊಂಡು , ಮತ್ತೆ ಅದನ್ನು ನೀಡಲು ಹಣ ಕೇಳಿದ್ದಾನೆ.

ಕೊನೆಗೆ ತಾವು ಮೋಸ ಹೋಗಿದ್ದೇವೆ ಅಂತ ಅರಿತ ಯುವಕನ ಪೋಷಕರು ಈಗ ಆ ವಂಚಕನ ವಿರುದ್ದ ಹುಬ್ಬಳ್ಳಿಯ ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದೇಶದಲ್ಲಿ ನೌಕರಿ ಸಿಗುತ್ತೆ ಎಂಬ ಆಸೆಯಿಂದ ಈಗ ಹಣ ಕಳೆದುಕೊಂಡು ಮೋಸ ಹೋಗಿರುವ ಯುವಕನ ಹೆಸರು ವೈಭವ ಜಾಧವ. ಹುಬ್ಬಳ್ಳಿಯ ದೇಶಪಾಂಡೆನಗರ ನಿವಾಸಿಯಾಗಿರುವ ಈ ಯುವಕನಿಗೆ ಕಳೆದ ಜನೆವರಿ 19 ರಂದು 9625712579 ಎಂಬ ನಂಬರಿನಿಂದ ವ್ಯಾಟ್ಸಾಪ್‌ ಸಂದೇಶವೊಂದು ಬರುತ್ತದೆ.

ಆ ಸಂದೇಶದಲ್ಲಿ aroya crusies aroyaship (imo9733117) ಎಂಬ ಶಿಪ್ಪಿಂಗ್‌ಸಂಸ್ಥೆಯಲ್ಲಿ ಸೂಕ್ತವಾದ ಕೆಲಸವಿದ್ದು, ಇದೇ 21ಕ್ಕೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಕಳುಹಿಸಲಾಗಿತ್ತು. ಇದನ್ನು ನಂಬಿದ ವಂಚಿತ ಯುವಕ ವೈಭವ, ಕೆಲಸಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ಮರ್ಚೆಂಟ್‌ನೇವಿಯಲ್ಲಿ ಕೋರ್ಸ್‌ಮುಗಿಸಿದ್ದ ವೈಭವನಿಗೆ ಬಹುದೊಡ್ಡ ಶಿಪ್ಪಿಂಗ್‌ಕಂಪನಿಯಲ್ಲಿ ನೌಕರಿ ಆಫರ್‌ಬಂದಿದ್ದು ಸಹಜವಾಗಿ ಸಂತಸ ತಂದಿದೆ.

ಆ ಕಡೆಯಿಂದ ಫೋನ್‌ ಮಾಡಿದ ಆ ವಂಚಕ ತನ್ನ ಹೆಸರು ಗಾಲಿ ಪ್ರೇಮಕುಮಾರ್‌ಸಂದೀಪ್‌ಎಂದು ಹೇಳಿದ್ದಾನೆ. ನಾಳೆ ಬೆಳಗ್ಗೆ ನವದೆಹಲಿಗೆ ಬರಬೇಕು. ನಾಡಿದ್ದು ಸೌದಿ ಅರೇಬಿಯಾಕ್ಕೆ ವಿಮಾನವಿದ್ದು, ಬುಕ್‌ ಮಾಡುತ್ತೇನೆ ಎಂದು ಹೇಳಿದ್ದಾನೆ.

ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ ಸ್ಥಾಪಿಸಿರುವ ನಕಲಿ ಕಂಪನಿ

ವಿದೇಶದಲ್ಲಿ ನೌಕರಿ ಸಿಗುತ್ತೆ ಎಂಬ ಆಸೆಯೊಂದಿಗೆ ವಂಚಿತ ಯುವಕ ವೈಭವ ತನ್ನ ತಂದೆಗೆ ಕಾಡಿಬೇಡಿದ್ದಾನೆ. ಮಗನಿಗೆ ವಿದೇಶದಲ್ಲಿ ನೌಕರಿ ಸಿಗುತ್ತೆ ಎಂಬ ನಂಬಿಕೆಯಿಂದ ಅವರು ಸಹ ಹಣ ಹೊಂದಿಸಿದ್ದಾರೆ. ಅಂದು ಸಂಜೆಯೇ ನವದೆಹಲಿಗೆ ಹುಬ್ಬಳ್ಳಿಯಿಂದ ವಿಮಾನ ಮೂಲಕ ಕಳುಹಿಸಲಾಗಿದೆ.

ಜನೆವರಿ 19 ರಂದು ರಾತ್ರಿಯೆ ನವದೆಹಲಿ ತಲುಪಿದ್ದ ವೈಭವ ಜಾಧವ. ಮರುದಿನ ಅಂದರೇ ಜನೆವರಿ ೨೦ ರಂದು ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ ಕಳುಹಿಸಿದ್ದ ಲೋಕೇಶನ ಪ್ರಕಾರ ಅದು ನವದೆಹಲಿಯ ಪಿಪಿ ಟವರ್‌ನಲ್ಲಿರುವ ಬಿಲ್ಡಿಂಗ್‌ತೋರಿಸಿತ್ತು. ಸರಿಯಾಗಿ 11 ಗಂಟೆಗೆ ಅಲ್ಲಿಗೆ ತೆರಳಿದ್ದಾನೆ.

ಅಮಾಯಕರನ್ನು ವಂಚಿಸಲು ಗಂಟೆ ಲೆಕ್ಕದಲ್ಲಿ ನವದೆಹಲಿಯ ಪಿಪಿ ಟವರ್‌ನಲ್ಲಿ ಕಚೇರಿ ಪಡೆದಿದ್ದ ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌

ಅಲ್ಲಿ ಈ ವೈಭವನನ್ನು ಭೇಟಿಯಾದ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌, ಮೊದಲಿಗೆ ವೈಭವನಿಂದ ಪಾಸ್‌ಪೋರ್ಟ್‌ಹಾಗೂ ಸಿಡಿಸಿ ( ಹಡಗಿನಲ್ಲಿ ಬೇರೆ ದೇಶಕ್ಕೆ ಹೋಗಲು ಇರುವ ಪಾಸ್‌ಪೋರ್ಟ್‌) ಪಡೆದಿದ್ದಾನೆ. ಒಟ್ಟು 150,000 ರೂ. ನಮಗೆ ಕಮಿಷನ್‌ ನೀಡಬೇಕು ಎಂದಿದ್ದಾನೆ.

ಅದರಲ್ಲಿ ಸೌದಿಗೆ ತೆರಳುವ ವಿಮಾನ ಟಿಕೆಟ್‌ ಸೇರಿರುತ್ತದೆ ಎಂದು ಹೇಳಿದ್ದಾನೆ. ಬಳಿಕ 25 ಸಾವಿರರೂ. ಹಣ ಸಂದಾಯ ಮಾಡಲು ತಿಳಿಸಿದ್ದಾನೆ. ಈ ಕಡೆ ಹುಬ್ಬಳ್ಳಿಯಿಂದ ವೈಭವನ ತಂದೆ ಪ್ರಶಾಂತ್‌ಅವರು 25 ಸಾವಿರರೂ. ಆನ್‌ಲೈನ ಮೂಲಕ ಸಂದಾಯ ಮಾಡಿದ್ದಾರೆ.

ನಂತರ ಜನೆವರಿ 22 ರಂದು ಬೆಳಗ್ಗೆ ಸೌದಿ ಅರೇಬಿಯಾಕ್ಕೆ ಹೊರಡಬೇಕು. ಕೆಲವು ಸಾಮಾನುಗಳನ್ನು ಖರೀದಿ ಮಾಡಿಕೊಂಡು ನೇರವಾಗಿ ವಿಮಾನ ನಿಲ್ದಾಣಕ್ಕೆ ಬರಲು ತಿಳಿಸಿದ್ದಾನೆ ಈ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌.

ವಂಚಕನ ಮಾತು ನಂಬಿಕೊಂಡು ಅಲ್ಲಿಂದ ರೂಮಿಗೆ ಬಂದ ವೈಭವಗೆ, ಮತ್ತೆ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌ನ ಫೋನ್‌ಬರುತ್ತದೆ. ಕೂಡಲೇ ಉಳಿದ ಹಣವನ್ನು ಸಂದಾಯ ಮಾಡು ಎಂದಿದ್ದಾನೆ.

ಈ ಮಧ್ಯೆ ಸೌದಿಯ ಜೆಡ್ಡಾಗೆ ತೆರಳುವ ಯಾವುದೋ ಫೇಕ್‌ಟಿಕೆಟ್‌ಹಾಗೂ ನಕಲಿ ವೀಸಾವನ್ನು ವೈಭವ ಜಾಧವನಿಗೆ ಕಳುಹಿಸಿದ್ದಾನೆ. ಒಂದೆಡೆ ವೀಸಾ ಹಾಗೂ ವಿಮಾನದ ಟಿಕೆಟ್‌ ಬಂದಿದ್ದು ನೋಡಿ ಮತ್ತಷ್ಟು ನಂಬಿದ ವೈಭವ್‌, ತನ್ನ ತಂದೆಗೆ ಕರೆ ಮಾಡಿ ಬಾಕಿ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ.

ಹಣವಿಲ್ಲದೇ ಒದ್ದಾಡುತ್ತಿದ್ದ ವೈಭವನ ತಂದೆ, ತಮ್ಮ ಸ್ನೇಹಿತನೋರ್ವನಿಂದ 32,000 ರೂ ಹಣವನ್ನು ಗಾಲಿ ಪ್ರೇಮಕುಮಾರ್‌ಸಂದೀಪ್‌ಗೆ ಫೋನ್‌ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ.

ಮರುದಿನ ಜನೆವರಿ 21 ರಂದು ಮತ್ತೆ ವೈಭವನ ತಂದೆ ಅವರು 50,000 ಹಣವನ್ನು ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ಗೆ ಅಕೌಂಟ್‌ಗೆ ಫೋನ್‌ಪೇ ಮಾಡಿದ್ದಾರೆ.

ಆ ಬಳಿಕ ಮತ್ತೆ ವೈಭವ್‌ಗೆ ಫೋನ್‌ಮಾಡಿದ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌, ಈ ಕೂಡಲೇ ಬಾಕಿ 42.500ರೂ. ಹಣವನ್ನು ನೀಡಬೇಕು ಎಂದಿದ್ದಾನೆ.

ವೈಭವನ ತಂದೆಯ ಸ್ನೇಹಿತ ಪವನ ಅಗ್ರವಾಲ ಎಂಬುವವರು 42,500ರೂ. ಹಣವನ್ನು ಫೋನ್‌ಪೇ ಮೂಲಕ ವಂಚಕ ನೀಡಿದ್ದ ಪೃಥ್ವಿ ತನ್ನೀರು ಎಂಬಾತನ ಅಕೌಂಟಿಗೆ ಫೋನ್‌ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ.

ಹೀಗೆ ಒಟ್ಟು 150,000 ರೂ. ಹಣವನ್ನು ಎರಡು ದಿನದಲ್ಲಿ ವಸೂಲಿ ಮಾಡಿದ್ದ ವಂಚಕ ಈಗ ಹೊಸ ವರಸೆ ಶುರು ಹಚ್ಚಿಕೊಂಡಿದ್ದನು. ಇನ್ನು 25 ಸಾವಿರ ರೂ. ಹಣ ಬೇಕು ಇಲ್ಲಾಂದರೆ ಸೌದಿಗೆ ಕಳುಹಿಸಲು ಆಗುವದಿಲ್ಲ ಎಂದು ತಗಾದೆ ತೆಗೆದಿದ್ದಾನೆ.

ಯಾವಾಗ ಒಂದುವರೆ ಲಕ್ಷರೂ. ಹಣವನ್ನು ಕೊಟ್ಟ ನಂತರವು ಮತ್ತೆ 25 ಸಾವಿರರೂ. ಹಣವನ್ನು ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌ಪೀಡಿಸತೊಡಗಿದಾಗ ತಾವು ಮೋಸ ಹೋಗಿದ್ದೇವೇ ಎಂದು ವೈಭವ ಹಾಗೂ ಆತನ ತಂದೆಗೆ ಅರಿವಾಗಿದೆ.

ಆದರೆ ಕಾಲಮಿಂಚಿ ಹೋಗಿತ್ತು. ಒಂದೆಡೆ ಹಣ ಹಾಗೂ ಇನ್ನೊಂದೆಡೆ ಪಾಸ್‌ಪೋರ್ಟ್‌ ವಂಚಕನ ಬಳಿಯೇ ಇತ್ತು. ವಂಚಿತ ಯುವಕ ವೈಭವ, ನನ್ನ ಪಾಸ್‌ಪೋರ್ಟ್‌ ವಾಪಸು ಕೊಡಿ ಎಂದು ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌ಗೆ ಕರೆ ಮಾಡಿ ಕೇಳಿದ್ದಾನೆ.

ಆಗ ಆತನಿಂದ ಬಂದ ಉತ್ತರ ಕೇಳಿ ವಂಚಿತ ಯುವಕ ವೈಭವನ ಎದೆ ಝಲ್ಲೇಂದಿದೆ. ಇನ್ನು 10 ಸಾವಿರರೂ. ಕೊಟ್ಟರೇ ಮಾತ್ರ ಡಾಕುಮೆಂಟ್ಸ್‌ಕೊಡುತ್ತೇನೆ ಎಂದಿದ್ದಾನೆ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌.

ಹುಬ್ಬಳ್ಳಿಯಿಂದ ನವದೆಹಲಿಗೆ ಬಂದಾಗ ತನ್ನ ಕಚೇರಿ ಬಳಿಯಿರುವ ಇಂತಹ ಹೊಟೇಲ್‌ಗೆ ಹೋಗಿ ಇರಲು ಈ ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌, ವೈಭವ್‌ಗೆ ತಿಳಿಸಿದ್ದರಿಂದ ಆತ ಹೇಳಿದ ರೂಮ್‌ನಲ್ಲಿಯೇ ಇಳಿದುಕೊಂಡಿದ್ದ.

ಯಾವಾಗ ಈ ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌ಕ್ಷಣ ಕ್ಷಣಕ್ಕೂ ಹಣ ಕೇಳಿದ್ದು, ಈ ಕಡೆಯಿಂದ ವೈಭವ್‌ನ ತಂದೆ ಸಹ ಅದೇ ಪ್ರಕಾರ ಹಣ ಹಾಕುತ್ತಿದ್ದರಿಂದ ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌, ಕೊನೆಗೆ ಮತ್ತೊಂದು ಪ್ಲ್ಯಾನ್‌ಮಾಡಿದ್ದಾನೆ.

ವೈಭವನನ್ನು ಅಪಹರಣ ಮಾಡಿದರೇ ಇನ್ನು ಹೆಚ್ಚಿನ ದುಡ್ಡು ಪೀಕಬಹುದು ಎಂದು ಯೋಚಿಸಿದ್ದಾನೆ. ಲಾಡ್ಜ್‌ನಲಿದ್ದ ಒಬ್ಬ ವ್ಯಕ್ತಿ ಈ ಬಗ್ಗೆ ವೈಭವಗೆ ಸುಳಿವು ನೀಡಿದ್ದರಿಂದ ರಾತ್ರೋರಾತ್ರಿ ಅಲ್ಲಿಂದ ರೂಮ್‌ಖಾಲಿ ಮಾಡುವ ಮೂಲಕ ಬಚಾವಾಗಿದ್ದಾನೆ.

ಈ ಕಡೆ ವೈಭವ ರೂಮ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮತ್ತೆ ಆ ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ ಫೋನ್‌ ಮಾಡಿದ್ದಾನೆ.

ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಕೂಡಲೇ ಬಾ ಎಂದಿದ್ದಾನೆ. ಆದರೆ ವೈಭವ ಅಲ್ಲಿ ಹೋಗದೆ ಮರುದಿನ ಬರುತ್ತೇನೆ ಎಂದು ಫೋನ್‌ಇಟ್ಟಿದ್ದಾನೆ.

ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ನ ಅಪಹರಣದ ಪ್ಲ್ಯಾನ್‌ ಬಗ್ಗೆ ವೈಭವ್‌, ತನ್ನ ತಂದೆಗೆ ತಿಳಿಸಿದ್ದ. ಆ ಕೂಡಲೇ ವೈಭವನ ತಂದೆ ಪ್ರಶಾಂತ ಹುಬ್ಬಳ್ಳಿಯವರೇ ಆದ ಕಾಂಗ್ರೆಸ್‌ಮುಖಂಡರ ನೆರವು ಕೇಳಿದ್ದಾರೆ.

ನವದೆಹಲಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಆ ಕಾಂಗ್ರೆಸ್‌ಮುಖಂಡರು, ಆ ಕೂಡಲೇ ತಮ್ಮ ಪಕ್ಷದ ಕಾರ್ಯಕರ್ತನಿಗೆ ವಿಷಯ ತಿಳಿಸಿದ್ದಾರೆ.

ರೂಮ್‌ಖಾಲಿ ಮಾಡಿ ಗಾಬರಿಯಲ್ಲಿ ರಸ್ತೆ ಬದಿಯ ಸಂದಿಯೊಂದರಲ್ಲಿ ನಿಂತಿದ್ದ ವೈಭವನನ್ನು ಅವರು ರಕ್ಷಣೆ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ತೀವ್ರ ಗಾಬರಿಯಾಗಿದ್ದ ವಂಚಿತ ಯುವಕ ವೈಭವ್‌ನಿಗೆ ರಾತ್ರಿ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದ ನವದೆಹಲಿಯ ಆ ಕಾಂಗ್ರೆಸ್‌ ಮುಖಂಡರು, ಜನೆವರಿ 22 ರಂದು ಬೆಳಗ್ಗೆ ವೈಭವನನ್ನು ಕರೆದುಕೊಂಡು ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌ತಿಳಿಸಿದ್ದ ಪಿಪಿ ಟವರ್‌ನಲ್ಲಿರುವ ಆತನ ಕಚೇರಿಗೆ ಬಂದಿದ್ದಾರೆ.

ಅಲ್ಲಿಗೆ ಬಂದು ವಿಚಾರಿಸಿದಾಗ ಆ ಬಿಲ್ಡಿಂಗನಲ್ಲಿರುವ ಕಚೇರಿಗಳನ್ನು ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ನೀಡುವುದು ಗೊತ್ತಾಗಿದೆ.

ಈ ವಂಚಕ ಗಾಲಿ ಪ್ರೇಮಕುಮಾರ ಸಹ ಎರಡು ಗಂಟೆಗೋಸ್ಕರ ಬಾಡಿಗೆ ಪಡೆದು ತನ್ನದೆ ಕಚೇರಿ ಎಂದು ಬಿಂಬಿಸಿದ್ದು ಬೆಳಕಿಗೆ ಬಂದಿದೆ.

ಹೀಗೆ ಗಂಟೆ ಲೆಕ್ಕದಲ್ಲಿ ಬಾಡಿಗೆ ಪಡೆದ ವಂಚಕ ಗಾಲಿ ಪ್ರೇಮಕುಮಾರ ಈಗಾಗಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ ಎಂಬುದು ಸಹ ಗೊತ್ತಾಗಿದೆ.

ಕಳ್ಳರು ಎಷ್ಟೇ ಚಾಣಾಕ್ಷವಾಗಿ ಕಳ್ಳತನ ಮಾಡಿದರೂ ಕೊನೆಗೆ ಒಂದು ಸುಳಿವು ಬಿಟ್ಟು ಹೋಗಿರುತ್ತಾರೆ ಎಂಬಂತೇ ಈ ಖದೀಮ ವಂಚಕ ಗಾಲಿ ಪ್ರೇಮಕುಮಾರ್‌ ಸಂದೀಪ್‌.

ಗಂಟೆ ಲೆಕ್ಕದಲ್ಲಿ ಕಚೇರಿ ಪಡೆಯುವ ಮುನ್ನ ಅಲ್ಲಿ ತನ್ನ ಆಧಾರ ಹಾಗೂ ಪ್ಯಾನ್‌ಕಾರ್ಡ್‌ಗಳನ್ನು ನಕಲು ಪ್ರತಿ ನೀಡಿದ್ದನು.

ಮೊದಲಿಗೆ ಆತನ ದಾಖಲೆಗಳನ್ನು ಅಲ್ಲಿಯ ಬಿಲ್ಡಿಂಗ್‌ಮಾಲೀಕರು ನೀಡಲು ಒಪ್ಪಿಲ್ಲ. ಕೊನೆಗೂ ಪೊಲೀಸರನ್ನು ಕರೆಸುತ್ತೇನೆ ಎಂದು ಹೇಳಿದಾಗ ದಾಖಲೆಗಳನ್ನು ನೀಡಿದ್ದಾರೆ.

ಆಗ ಗೊತ್ತಾಗಿದ್ದೇ ಈ ಖದೀಮ, ವಂಚಕ ಗಾಲಿ ಪ್ರೇಮಕುಮಾರ್‌ಸಂದೀಪ್‌ದೂರದ ಹೈದಾರಾಬಾದ್‌ನ ವಿಶಾಖಪಟ್ಟಣದಿಂದ ನವದೆಹಲಿಗೆ ಬಂದು ಮೋಸ ಮಾಡುತ್ತಿರುವುದು ಬಯಲಿಗೆ ಬಂದಿದೆ.

Follow Us

Leave a Reply

Your email address will not be published. Required fields are marked *

Back to top button