CrimeDistrictShivamogga

ಇಬ್ಬರು ಹೆಂಗಸರ ಜಗಳ, ಕೊಲೆಯಲ್ಲಿ ಅಂತ್ಯ|ಮಲಗಿದ್ದವಳ ಮೇಲೆ ಚಾಕುವಿನಿಂದ ಇರಿದು ಭೀಕರ ಕೊಲೆ|ಹನುಮಂತ್‌ ನಾಯ್ಕ್‌ನಿಗೆ ಜೀವಾವಧಿ ಶಿಕ್ಷೆ

ತನ್ನ ಮತ್ತು ಜ್ಯೋತಿಬಾಯಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಊರಿನಲ್ಲಿ ಕೆಟ್ಟದಾಗಿ ಮಾತಾಡಿದ ಬಗ್ಗೆ ಅಪರಾಧಿ ಹನುಮಂತ್‌ ನಾಯಕ್‌, ಮೃತೆ ರತ್ನಾಬಾಯಿ ಬಗ್ಗೆ ಭಾರಿ ಸಿಟ್ಟು ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.

ಶಿವಮೊಗ್ಗ: ಊರಿನವರ ಮುಂದೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ದ್ವೇಷದಿಂದ ತನ್ನ ಮನೆಯಲ್ಲಿಯೇ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ 1ನೇ ಶಿವಮೊಗ್ಗ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.

ಜೀವಾವಧಿ ಶಿಕ್ಷೆಗೊಳಗಾಗಿರುವ ಅಪರಾಧಿ ಹನುಮಂತ್ ನಾಯ್ಕ್ , ತನ್ನ ಶಿವಮೊಗ್ಗ ತಾಲ್ಲೂಕಿನ ಸುತ್ತುಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಾಂಪೌಂಡ್ ಒಳಭಾಗದಲ್ಲಿರುವ ಕಡಿಮಾಡುವಿನಲ್ಲಿರುವ ಮನೆಯ ಒಂದು ಭಾಗದಲ್ಲಿ ಜ್ಯೋತಿ ಬಾಯಿ ಎಂಬ ಮಹಿಳೆಗೆ ವಾಸಕ್ಕೆ ಬಿಟ್ಟುಕೊಟ್ಟಿರುತ್ತಾನೆ.

ಈಗ ಕೊಲೆಯಾಗಿರುವ ರತ್ನಾಬಾಯಿ ಮತ್ತು ಜ್ಯೋತಿ ಬಾಯಿ ಮಧ್ಯೆ ಆಸ್ತಿ ಹಂಚಿಕೆ ವಿಚಾರದಲ್ಲಿ ವೈಷಮ್ಯವಿತ್ತು ಎನ್ನಲಾಗಿದೆ. ಈ ಮಧ್ಯೆ ಜ್ಯೋತಿಬಾಯಿಗೆ ಬೆಂಬಲಕ್ಕೆ ನಿಂತಿದ್ದರಿಂದ ಅಪರಾಧಿ ಹನುಮಂತ್ ನಾಯ್ಕ್ ನ ಬಗ್ಗೆ ಮೃತೆ ರತ್ನಾಬಾಯಿ ಊರಿನಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಳೆಂದು ಹೇಳಲಾಗಿದೆ.

ತನ್ನ ಮತ್ತು ಜ್ಯೋತಿಬಾಯಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಊರಿನಲ್ಲಿ ಕೆಟ್ಟದಾಗಿ ಮಾತಾಡಿದ ಬಗ್ಗೆ ಅಪರಾಧಿ ಹನುಮಂತ್‌ ನಾಯಕ್‌, ಮೃತೆ ರತ್ನಾಬಾಯಿ ಬಗ್ಗೆ ಭಾರಿ ಸಿಟ್ಟು ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.

ಈಕೆಯ ಮನೆಯವರಲ್ಲಿ ಒಬ್ಬರನ್ನು ಸಾಯಿಸಿದರೇ ಬುದ್ದಿ ಬರುತ್ತದೆ ಎಂದು ನಿರ್ಧಾರಕ್ಕೆ ಬಂದ ಆತ ಕೊನೆಗೆ ಕೊಲೆ ಮಾಡಲು ನಿರ್ಧರಿಸಿದ ಎಂದು ಹೇಳಲಾಗಿದೆ.

ಈ ಮಧ್ಯೆ ಆಸ್ತಿ ಹಂಚಿಕೆ ವಿಚಾರದಲ್ಲಿ ತನ್ನ ಮನೆಯಲ್ಲಿದ್ದ ಜ್ಯೋತಿಬಾಯಿ ಮತ್ತು ರತ್ನಾಬಾಯಿ ಮಧ್ಯೆ ಇದ್ದ ಜಗಳವು ಸಹ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

ದಿನಾಂಕ: 15-03-2023 ರಂದು ತನ್ನ ಮನೆಯಲ್ಲಿ ವಾಸಕ್ಕೆ ಕೊಟ್ಟಿದ್ದ ಜ್ಯೋತಿಬಾಯಿ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದ್ದ ರತ್ನಾಬಾಯಿಯನ್ನು ಚಾಕುವಿನಿಂದ ಮನಬಂದಂತೇ ಚುಚ್ಚಿ ಕೊಲೆ ಮಾಡಿದ್ದಾನೆ.

ರತ್ನಾಬಾಯಿಯ ಕೊಲೆ ಮಾಡಿದ ನಂತರ ಆಕೆಯ ಪತಿ ನೀಡಿದ ದೂರಿನ ಮೇರೆಗೆ ಆರೋಪಿ ಹನುಮಂತ್ ನಾಯ್ಕ್‌ ವಿರುದ್ದ ಕುಂಸಿ ಪೊಲೀಸ್‌ ಠಾಣೆಯ ಪೊಲೀಸರು ಗುನ್ನೆ ನಂ 43/2023 ಕಲಂ 302,201 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

ಆಗಿನ ತನಿಖಾಧಿಕಾರಿಯಾಗಿದ್ದ ಪಿಐ ತಿಪ್ಪೇಸ್ವಾಮಿ ತನಿಖೆ ನಡೆಸಿ ಚಾರ್ಜಶೀಟ್‌ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಮಮತಾ ಬಿ.ಎಸ್ ವಾದ ಮಂಡಿಸಿದ್ದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.

ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ ಅವರು ದಿನಾಂಕ: 24-06-2026 ರಂದು ಆರೋಪಿತನಿಗೆ ಕಲಂ 302,201 ಐಪಿಸಿ ಕಾಯಿದೆಗಳಿಗೆ ಜೀವಾವಧಿ ಶಿಕ್ಷೆ ಮತ್ತು 30,000- ರೂ ದಂಡವನ್ನು, ವಿಧಿಸಿ ಆದೇಶ ಪ್ರಕಟಿಸಿದ್ದಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

Follow Us

Leave a Reply

Your email address will not be published. Required fields are marked *

Back to top button