EducationShivamogga

ಸಹ್ಯಾದ್ರಿ ಕಾಲೇಜ್ ಪಿಜಿ ಕೋರ್ಸ್ ಪುನರಆರಂಭಕ್ಕೆ ಶಾಸಕ ಚೆನ್ನಬಸಪ್ಪ ಒತ್ತಾಯ| ಕುವೆಂಪು ವಿವಿ ಕುಲಪತಿ ಜೊತೆ ಭೇಟಿ,ಚರ್ಚೆ|ಪರಿಷ್ಕೃತ ಅಧಿಸೂಚನೆಗೆ ಮನವಿ

ಬೇಡಿಕೆಯಿರುವ ಎಂಎಸ್ಸಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಜನರಲ್ ಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್ ಹಾಗೂ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತ್ತಕೋತ್ತರ ಕೋರ್ಸಗಳನ್ನು ಕೈಬಿಟ್ಟಿರುವುದು ದುರದೃಷ್ಟಕರವೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಇಲ್ಲಿಯ ಸಹ್ಯಾದ್ರಿ ವಿಜ್ಞಾನ,ಕಲಾ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಯನ್ನು ಕೈಬಿಟ್ಟಿರುವುದನ್ನು ಶಿವಮೊಗ್ಗ ನಗರ ಶಾಸಕರ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ತಕ್ಷಣವೇ ಪರಿಷ್ಕೃತ ಅಧಿಸೂಚನೆ ಹೊರಡಿಸುವಂತೆ ಕುವೆಂಪು ವಿವಿ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರನ್ನು ಸೋಮವಾರದಂದು ಭೇಟಿ ಮಾಡಿ ಒತ್ತಾಯಿಸಿದರು

75 ವರ್ಷಗಳ ಸುದೀರ್ಘ ಶೈಕ್ಷಣಿಕ ಪರಂಪರೆ ಹೊಂದಿರುವ ಸಹ್ಯಾದ್ರಿ ಕಾಲೇಜುಗಳು ಮಲೆನಾಡು ಭಾಗದ ಸಾವಿರಾರು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಸಾರಿಗೆ ಸಂಪರ್ಕದ ದೃಷ್ಟಿಯಿಂದ ನಗರದ ಹೃದಯಭಾಗದಲ್ಲಿರುವ ಸಹ್ಯಾದ್ರಿ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಮೊದಲ ಆದ್ಯತೆ ನೀಡುತ್ತಾರೆ.

ಬೇಡಿಕೆಯಿರುವ ಎಂಎಸ್ಸಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಜನರಲ್ ಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್ ಹಾಗೂ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತ್ತಕೋತ್ತರ ಕೋರ್ಸಗಳನ್ನು ಕೈಬಿಟ್ಟಿರುವುದು ದುರದೃಷ್ಟಕರವೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಸ್ನಾತಕೋತ್ತರ ಪದವಿ ಪ್ರವೇಶಾತಿ ಮುಂದುವರೆಸಲು ಆಗ್ರಹಿಸಿ, ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ
ಸ್ನಾತಕೋತ್ತರ ಪದವಿ ಪ್ರವೇಶಾತಿ ಮುಂದುವರೆಸಲು ಆಗ್ರಹಿಸಿ, ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ

ಮೂಲಭೂತಸೌಕರ್ಯವಿದ್ದರೂ ಕೋರ್ಸ್‌ಗಳನ್ನು ಕೈ ಕೈಬಿಟ್ಟಿದ್ದು ಅವೈಜ್ಞಾನಿಕ ಕ್ರಮ ಎಂದು ನೇರವಾಗಿ ಹೇಳಿದರು.

ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿಭಾಗಗಳಲ್ಲಿ ಬೋಧನೆ ಮಾಡುತ್ತಿರುವ ಶೇ. 99 ರಷ್ಟು ಅಧ್ಯಾಪಕರು ಇದೇ ಕಾಲೇಜಿನ ಖಾಯಂ ಪ್ರಾಧ್ಯಾಪಕರಾಗಿದ್ದು, ಎಲ್ಲರೂ ಪಿಹೆಚ್‌ಡಿ ಪದವೀಧರರಾಗಿದ್ದಾರೆ.

ಇವರಿಂದ ಈಗಾಗಲೇ 24 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಪಡೆದಿದ್ದು, ಪ್ರಸ್ತುತ 20 ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ಗಮನಕ್ಕೆ ತಂದರು.

ಮೂಲಸೌಕರ್ಯ ಹಾಗೂ ಪರಿಣಿತ ಶಿಕ್ಷಕರಿದ್ದರೂ ವಿಶ್ವವಿದ್ಯಾಲಯಕ್ಕೆ ಯಾವುದೇ ಆರ್ಥಿಕ ಹೊರೆಯಾಗದ ಈ ಕೋರ್ಸ್‌ಗಳನ್ನು ರದ್ದು ಮಾಡಿರುವುದಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು.

Follow Us

Leave a Reply

Your email address will not be published. Required fields are marked *

Back to top button