KarnatakaVijayanagara

ಶಿಕ್ಷಕರ ಹೆಸರಿನ ಹಿಂದೆ “Tr.” ಬಳಸಲು ಅವಕಾಶ|ಜೀವನಪರ್ಯಂತ ನಿಸ್ವಾರ್ಥ ಸೇವೆಗೆ ಗೌರವ|ಶಿಕ್ಷಕರಿಗೆ ಕೋಟಿ ನಮನ ಸಲ್ಲಿಸಿದ ಸಿಎಂ ಡಿ.ಕೆ.ಶಿವಕುಮಾರ್‌

ಪರರ ಬದುಕನ್ನು ರೂಪಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಚೇತನಗಳಿಗೆ ಇಡೀ ಸಮಾಜವು ಸಲ್ಲಿಸುತ್ತಿರುವ ಶಿಕ್ಷಕರಿಗೆ ಕೃತಜ್ಞತೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಶಿಕ್ಷಕರಿಗೆ ಗೌರವ ನೀಡುವ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಿಕ್ಷಕರ ದಿನದಂದು ಬಹುಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ,

ಬಹುಶಃ ಇದು ಭಾರತದಲ್ಲಿಯೇ ಕರ್ನಾಟಕವು ಮೊದಲ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಲಿದೆ.

ಹೌದು. ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ, ಆ ವ್ಯಕ್ತಿಯನ್ನು ರೂಪಿಸಿದ ಒಬ್ಬ ಶಿಕ್ಷಕರಿರುತ್ತಾರೆ ಎಂದು ಹೇಳಿರುವ ಸಿಎಂ ಡಿ.ಕೆ.ಶಿವಕುಮಾರ್‌.

ಶಿಕ್ಷಕರ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸಲು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (ಟೀಚರ್) ಎಂಬ ಗೌರವಸೂಚಕ ಪದವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ‌ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

ಬಳಿಕ ಮಾತನಾಡಿದ ಅವರು, ಈ ಪದದ ಹಿಂದೆ ಶಿಕ್ಷಕರ ಜೀವನಪರ್ಯಂತದ ನಿಸ್ವಾರ್ಥ ಸೇವೆಯಿದೆ. “Tr.” ಎನ್ನುವುದು ಕೇವಲ ಒಂದು ಬಿರುದಲ್ಲ.

ಪರರ ಬದುಕನ್ನು ರೂಪಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಚೇತನಗಳಿಗೆ ಇಡೀ ಸಮಾಜವು ಸಲ್ಲಿಸುತ್ತಿರುವ ಶಿಕ್ಷಕರಿಗೆ ಕೃತಜ್ಞತೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಯಾವ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆಯೋ, ಆ ಸಮಾಜದ ಭವಿಷ್ಯವೂ ಅಷ್ಟೇ ಉಜ್ವಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ನಡೆವ ದಾರಿ ತೋರಿ, ನಡತೆಯನ್ನು ತಿದ್ದಿ, ಕನಸುಗಳಿಗೆ ಆಕಾಶ ತೆರೆದಿಟ್ಟು, ನಮ್ಮ ಸಾಮರ್ಥ್ಯದ ಮೇಲೆ ಮೊದಲು ವಿಶ್ವಾಸವಿಟ್ಟ ಪ್ರತಿಯೊಬ್ಬ ಶಿಕ್ಷಕರಿಗೂ ಕರ್ನಾಟಕದ ಜನತೆಯ ಪರವಾಗಿ ಕೋಟಿ ಕೋಟಿ ನಮನಗಳನ್ನು ಸಿಎಂ ಡಿ.ಕೆ.ಶಿವಕುಮಾರ್‌ ಸಲ್ಲಿಸಿದರು.

ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರೂ ಸೇರಿದಂತೆ, ಭಾರತದ ಒಂದು ಕೋಟಿಗೂ ಅಧಿಕ ಶಿಕ್ಷಕರು ಪ್ರತಿದಿನವೂ ಮಕ್ಕಳ ಮನಸ್ಸು, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿದ್ದಿ ತೀಡುತ್ತಿದ್ದಾರೆ.

ರೋಗ ಗುಣಪಡಿಸುವ ವೈದ್ಯರಿರಲಿ, ನಾಡು ಕಟ್ಟುವ ಎಂಜಿನಿಯರಿರಲಿ, ಅನ್ನ ನೀಡುವ ರೈತನಿರಲಿ, ಸೇವೆ ಸಲ್ಲಿಸುವ ಅಧಿಕಾರಿಯಿರಲಿ, ನಾವೀನ್ಯತೆ ತರುವ ಉದ್ಯಮಿಯಿರಲಿ ಅಥವಾ ಸಮಾಜವನ್ನು ಮುನ್ನಡೆಸುವ ನಾಯಕರೇ ಇರಲಿ, ಪ್ರತಿಯೊಬ್ಬರ ಹಿಂದೆಯೂ ಶಿಕ್ಷಕರ ಶ್ರಮವಿದೆ.

ಮಕ್ಕಳ ಸಾಮರ್ಥ್ಯವನ್ನು ಮೊದಲು ಗುರುತಿಸಿ, ‘ಸಾಧಿಸುವುದು ನಿನಗೆ ಸಾಧ್ಯ’ ಎಂದು ಆತ್ಮವಿಶ್ವಾಸ ತುಂಬುವವರು ಶಿಕ್ಷಕರು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಗೌರವ ಸಲ್ಲಿಸಿದರು.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button