ShivamoggaSpecial Stories

ಶಿವಮೊಗ್ಗ: ಕ್ರಾಂತಿದೀಪ ದಿನಪತ್ರಿಕೆಗೆ 42ನೇ ವರುಷದ ಸಂಭ್ರಮ|ಸಂಪಾದಕ ಎನ್‌.ಮಂಜುನಾಥ್‌ ಸಾಧನೆ ಅಪಾರ|”ನ್ಯೂಇಂಡಿಯಾ ಕನ್ನಡ”ದಿಂದ ಅಭಿನಂದನೆ

ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯು ಪ್ರತಿದಿನವೂ ಸರಿಯಾಗಿ ಪತ್ರಿಕೆಯನ್ನು ಹೊರತರುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಎನ್‌.ಮಂಜುನಾಥ್‌ ಸರ್‌, ಅವರ ಧೈರ್ಯ, ತಾಳ್ಮೆ, ಸಹನೆ ಸಾಹಸವನ್ನು ಮೆಚ್ಚಲೇಬೇಕು.

ಶಿವಮೊಗ್ಗದ ಕ್ರಾಂತಿದೀಪ ದಿನಪತ್ರಿಕೆಯು ಆರಂಭಗೊಂಡು ಇಂದು ಆಗಸ್ಟ್‌ 15ರಂದು 43ನೇ ವರುಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಸಂಪಾದಕರು ಹಿರಿಯರು ಆದ ಎನ್‌ ಮಂಜುನಾಥ್‌ ಸರ್‌, ಅವರಿಗೆ ನಮ್ಮ ನ್ಯೂಇಂಡಿಯಾ ಕನ್ನಡ ಡಿಜಿಟಲ್‌ ಪತ್ರಿಕೆಯ ಎಲ್ಲ ಸಿಬ್ಬಂದಿ ವತಿಯಿಂದ ಹಾಗೂ ವೈಯಕ್ತಿಕವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕ್ರಾಂತಿದೀಪ ದಿನಪತ್ರಿಕೆ ಸಂಪಾದಕರು ಹಿರಿಯರು ಆದ ಎನ್‌ ಮಂಜುನಾಥ್‌

ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯು ಪ್ರತಿದಿನವೂ ಸರಿಯಾಗಿ ಪತ್ರಿಕೆಯನ್ನು ಹೊರತರುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಎನ್‌.ಮಂಜುನಾಥ್‌ ಸರ್‌, ಅವರ ಧೈರ್ಯ, ತಾಳ್ಮೆ, ಸಹನೆ ಸಾಹಸವನ್ನು ಮೆಚ್ಚಲೇಬೇಕು.

ಈಗ 42ವರುಷಗಳ ಹಿಂದೆ ಆರಂಭಗೊಂಡ ಕ್ರಾಂತಿದೀಪ ದಿನಪತ್ರಿಕೆಯನ್ನು ಇಷ್ಟು ಸುದೀರ್ಘವಾಗಿ ಅದು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಎನ್‌.ಮಂಜುನಾಥ್‌ ಸರ್‌, ಅವರ ಸಾಹಸ, ಸಾಧನೆ ಅಪಾರವಾದದ್ದು.

ಒಂದು ಪತ್ರಿಕೆಯನ್ನು ಅದು ಕಲರ್‌ನಲ್ಲಿ ಮುದ್ರಿಸಿ, ಹಲವಾರು ಸಿಬ್ಬಂದಿಗೆ ಸಂಬಳ, ನ್ಯೂಸ್‌ ಪ್ರಿಂಟ್‌ ಖರ್ಚು ಎಲ್ಲವನ್ನು ನೆನೆಸಿಕೊಂಡರೇ ಭಯ ಆಗುತ್ತೆ.

ಅಂತಹದರಲ್ಲಿ ಅದೇಷ್ಟು ಸಾಲ ಸೋಲ ಮಾಡಿ ಇವತ್ತು ಕ್ರಾಂತಿದೀಪ ದಿನಪತ್ರಿಕೆಯನ್ನು ಪ್ರಾದೇಶಿಕ ಮಟ್ಟಕ್ಕೆ ಬೆಳೆಸಿದ್ದಲ್ಲದೇ ಆರ್ಥಿಕವಾಗಿ ಸದೃಢವಾಗಿ ನಿಲ್ಲುವಂತೇ ಮಾಡಿರುವ ಎನ್‌.ಮಂಜುನಾಥ್‌ ಸರ್‌ ಅವರ ಸಾಧನೆ ಕಂಡು ಸಂತೋಷ ಹಾಗೂ ಸಂತಸವಾಗುತ್ತದೆ.

ಸರ್‌, ತಮ್ಮ ನೇತೃತ್ವದಲ್ಲಿ ಕ್ರಾಂತಿದೀಪ ದಿನಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ತಮ್ಮ ಗರಡಿಯಲ್ಲಿ ಇನ್ನಷ್ಟು ಜನರು ಪತ್ರಕರ್ತರು ಹೊರಹೊಮ್ಮಲಿ ಎಂದು ಹಾರೈಸುತ್ತೇನೆ.

ಕೊನೆಯ ಮಾತು: ಒಂದು ಪತ್ರಿಕೆ ಅದು ದಿನಪತ್ರಿಕೆ ನಡೆಸುವುದು ಅಷ್ಟು ಸುಲಭವಲ್ಲ. ಜನರಿಗಿಂತ ನಮ್ಮವರೇ ಕಪೋಕಲ್ಪಿತ ಮಾತುಗಳನ್ನು ಆಡುತ್ತಾರೆ.

ಅಂತಹದರಲ್ಲಿ ಎನ್‌.ಮಂಜುನಾಥ್‌ ಸರ್‌, ಅವರು ಸುದೀರ್ಘ 42 ವರುಷಗಳ ಕಾಲ ಒಂದಿನವೂ ಪತ್ರಿಕೆ ಪ್ರಕಟಣೆ ನಿಲ್ಲಿಸದೇ ಅವರ ಪಟ್ಟ ಕಷ್ಟ ಅವರಿಗೆ ಮಾತ್ರ ಗೊತ್ತು.

ಈ ಮಧ್ಯೆ ಅವರಿಗೆ ಫೋನ್‌ ಮುಖಾಂತರ ಅಭಿನಂದನೆ ಸಲ್ಲಿಸದೇ ನಮ್ಮ ಪತ್ರಿಕೆಯ ಮುಖಾಂತರ ಬಹಿರಂಗವಾಗಿ ಹೆಮ್ಮೆಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ.

ತಮ್ಮ

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button