Shivamoggaರಂಗಭೂಮಿ

ಶಿವಮೊಗ್ಗದಲ್ಲಿ “ಬಂದರ ನೋಡ ಬಂಗಾರಿ” ನಾಟಕ|4 ತಿಂಗಳು ಕಾಲ ನಡೆಯಲಿರುವ ಪ್ರದರ್ಶನ|ಕಲಾವಿದರನ್ನು ಪ್ರೋತ್ಸಾಹಿಸಲು ಮಂಟೇಶ್ ಬಿ ದಂಡಿನ ಮನವಿ

ತಲೆಮಾರುಗಳಿಂದ ಆಶ್ರಯಿಸಿರುವ ರಂಗಭೂಮಿ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡು ನಾಟಕ ಕಂಪನಿಯನ್ನು ಮುನ್ನಡೆಸುವುದು ಸವಾಲಿನ ಕೆಲಸ ಎಂದು ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ಮಾಲೀಕ ಮಂಟೇಶ್ ಬಿ ದಂಡಿನ ಎಂದು ಹೇಳಿದರು.

ಶಿವಮೊಗ್ಗ: ಉತ್ತರ ಕರ್ನಾಟಕ ಸೊಗಡಿನ, ಆಶ್ಲೀಲತೆಯ ಸೋಂಕಿಲ್ಲದ ಶುದ್ದ ಹಾಸ್ಯ ನಾಟಕ “ಬಂದರ ನೋಡ ಬಂಗಾರಿ” ಶಿವಮೊಗ್ಗದಲ್ಲಿ ಶುಕ್ರವಾರ 21 ರಿಂದ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ಮಾಲೀಕ ಮಂಟೇಶ್ ಬಿ ದಂಡಿನ ತಿಳಿಸಿದರು.

ಗುರುವಾರದಂದು ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ನಾಟಕವು ಸಾಮಾಜಿಕ ಕಳಕಳಿಯುಳ್ಳ ಹಾಸ್ಯ ನಾಟಕವಾಗಿದೆ.

ವಿದ್ಯಾನಗರದ ಹಳೇ ರೈಲ್ವೇ ಸ್ಟೇಷನ್‌ ಎದುರಿನ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ರಂಗನಾಟಕ ಟೆಂಟ್ ಹಾಕಲಾಗಿದ್ದು ಪ್ರತಿ ದಿನ ಎರಡು ಪ್ರದರ್ಶನವಿರಲಿದೆ ಎಂದು ಮಂಟೇಶ್ ಬಿ ದಂಡಿನ ವಿವರ ನೀಡಿದರು.

“ಬಂದರ ನೋಡ ಬಂಗಾರಿ” ನಾಟಕವು ರಾಜ್ಯದ ಹಲವೆಡೆ 5 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. 30ಕ್ಕೂ ಹೆಚ್ಚು ಕಲಾವಿದರು ತಂಡದಲ್ಲಿದ್ದಾರೆ.

ಮುಖ್ಯ ಭೂಮಿಕೆಯಲ್ಲಿ ರಿತಿಕಾ, ಶರಣ್ ಮತ್ತಿತರು ಪಾತ್ರ ಮಾಡಿದ್ದಾರೆ ಎಂದು ಮಂಟೇಶ್ ಬಿ ದಂಡಿನ ಹೇಳಿದರು.

ನಾಲ್ಕು ತಿಂಗಳ ಕಾಲ “ಬಂದರ ನೋಡ ಬಂಗಾರಿ” ನಾಟಕವು ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿದೆ.

ರಂಗಭೂಮಿ, ಕಲೆ ನಶಿಸಿಹೋಗುತ್ತಿರುವ ದಿನಗಳಲ್ಲಿ ತಲೆಮಾರುಗಳಿಂದ ಆಶ್ರಯಿಸಿರುವ ರಂಗಭೂಮಿ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡು ನಾಟಕ ಕಂಪನಿಯನ್ನು ಮುನ್ನಡೆಸುವುದು ಸವಾಲಿನ ಕೆಲಸ ಎಂದು ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ಮಾಲೀಕ ಮಂಟೇಶ್ ಬಿ ದಂಡಿನ ಎಂದರು.

ಜನರ ಪ್ರೋತ್ಸಾಹ ಸಿಕ್ಕರೆ ಮುಂದಿನ ದಿನಗಳಲ್ಲಿ ಸಿನಿಮಾ ನಟಿ ಶೃತಿ, ಶರಣ್, ಕಾಮಿಡಿ ಕಿಲಾಡಿ ನಯನ ಮತ್ತು, ಸಂಜು ಬಸಯ್ಯರಂತಹ ಕಲಾವಿದರು ತಮ್ಮ ನಾಟಕ ಪ್ರದರ್ಶನಕ್ಕೆ ಕರೆಸುವ ಚಿಂತನೆಯಿದೆ ಎಂದು ತಿಳಿಸಿದರು.

ರಂಗನಟಿ ರಿತಿಕಾ ಮಾತನಾಡಿ, ಸ್ಟಾರ್ ಸುವರ್ಣದ ರಾಘವೇಂದ್ರ ಮಹಿಮೆ, ಕಲರ್ಸ್ ಕನ್ನಡದ ಮುದ್ದುಸೊಸೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದು, ರಂಗಭೂಮಿಯಲ್ಲಿ ದೊಡ್ಡ ಪಾತ್ರ ಮಾಡಿದ್ದೇನೆ.

ನಾಟಕಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಇನ್ನು ಎರಡುವರೆ ಗಂಟೆ ಅವಧಿಯ ಹಾಸ್ಯ ಮನೋರಂಜನೆ ಸಾಮಾಜಿಕ ಸಂದೇಶ ಸಾರುವ ಈ ನಾಟಕಕ್ಕೆ ಪ್ರವೇಶ ದರ 150 ರೂಪಾಯಿ ದರ ನಿಗದಿಪಡಿಸಲಾಗಿದೆ. ಪ್ರತಿದಿನ ಮಧ್ಯಾಹ್ನ 2.30 ಹಾಗೂ ಸಂಜೆ 6.15 ಕ್ಕೆ ಎರಡು ಪ್ರದರ್ಶನ ನಡೆಯಲಿದೆ.

ಮ್ಯಾನೇಜರ್ ಮಹದೇವಪ್ಪ, ಸಂಚಾಲಕ ಸುಹಾಸ್ ದಂಡಿನ , ಶರಣ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button