ಹೆಪಟೈಟಿಸ್ ಹೆಮ್ಮಾರಿ ಸೋಂಕಿನಿಂದ ಲಿವರ್ ಕ್ಯಾನ್ಸರ್|ರಕ್ತ ಪರೀಕ್ಷೆಯಿಂದ ರೋಗ ಪತ್ತೆ ಸುಲಭ|ಸುಶೋಧ ಆಸ್ಪತ್ರೆಯಿಂದ ಉಚಿತ ಲಸಿಕಾ ಅಭಿಯಾನ
ಇತ್ತೀಚಿನ ದಿನಗಳಲ್ಲಿ ಲಿವರ್ ಡ್ಯಾಮೇಜ್, ಲಿವರ್ ಕ್ಯಾನ್ಸ್ರ್ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಹೆಪಟೈಟಿಸ್ ಬಿ ಸೋಂಕಿನ ನಿರ್ಮೂಲನೆಗೆ ಹೆಪಟೈಟಿಸ್ ಬಿ ವ್ಯಾಕ್ಸಿನೇಷನ್ ಮೂರು ಡೋಸ್ ಪಡೆಯುವುದೊಂದೇ ಪರಿಹಾರವಾಗಿದೆ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ಹೇಳಿದರು.

ಶಿವಮೊಗ್ಗ: ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಸವಳಂಗ ರಸ್ತೆಯಲ್ಲಿರುವ ಸುಶೋಧ ಇಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಆಸ್ಪತ್ರೆ ವತಿಯಿಂದ ಜುಲೈ26 ರಿಂದ ಆಗಸ್ಟ್ 1 ರವರೆಗೆ ಸಾರ್ವಜನಿಕರಿಗೆ ಉಚಿತ ಹೆಪಟೈಟೀಸ್ ಬಿ ಮತ್ತು ಸಿ ತಪಾಸಣೆ ಹಾಗೂ ಲಸಿಕಾ ಅಭಿಯಾನವನ್ನು ಆಯೋಜಿಸಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಡಾ.ಪ್ರದೀಪ್ಕುಮಾರ್ ಜೆ.ಕೆ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿವರ್ ಕ್ಯಾನ್ಸರ್ಗೆ ಹೆಪಟೈಟಿಸ್ ಬಿ ಹಾಗೂ ಹೆಪಟೈಟಿಸ್ ಸಿ ಸೋಂಕು ಕಾರಣವಾಗಲಿದೆ ಎಂದರು.
ಸರಳ ರಕ್ತ ಪರೀಕ್ಷೆ ಮೂಲಕ ಸುಲಭವಾಗಿ ಇದನ್ನು ಪತ್ತೆ ಹಚ್ಚು ಮೂಲಕ ಗುಣಪಡಿಸಬಹುದಾಗಿದೆ. ಲಿವರ್ನಲ್ಲಿ ಕಂಡುಬರುವ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಸ್ಪರ್ಶದಿಂದ ಹರಡುವುದಿಲ್ಲ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ಹೇಳಿದರು.

ಜನರಲ್ಲಿ ಲಿವರ್ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ತಿಳಿಸಿದರು.
ಹೆಪಟೈಟಿಸ್ ಲಸಿಕೆ ಪಡೆಯರಿ|
ಲಿವರ್ ಸೋಂಕಿನಿಂದ ರಕ್ಷಣೆ|
ಹೆಪಟೈಟಿಸ್ ಬಿ ಲಸಿಕೆ ಪಡೆಯುವುದರಿಂದ ಶೇಖಡಾ 95%ರಷ್ಟು ಲಿವರ್ ಸೋಂಕಿನಿಂದ ರಕ್ಷಣೆ ಸಿಗಲಿದೆ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ಹೇಳಿದರು.
ಡಾ.ಪ್ರದೀಪ್ಕುಮಾರ್ ಜೆ.ಕೆ, ಜುಲೈ 26 ರಂದು ಬೆಳಿಗ್ಗೆ 9 ಗಂಟೆಗೆ ಸುಶೋಧ ಆಸ್ಪತ್ರೆಯಲ್ಲಿ ಚಿತ್ರನಟ ದಿಗಂತ್ ಹೆಪಟೈಟಿಸ್ ಬಿ ಲಸಿಕಾ ಶಿಬಿರವನ್ನು ಉದ್ಘಾಟಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಹೆಪಟೈಟಿಸ್ ಬಿ ಸೋಂಕಿನ ನಿರ್ಮೂಲನೆ|
ವ್ಯಾಕ್ಸಿನೇಷನ್ ಪರಿಹಾರ- ಡಾ.ಪ್ರದೀಪ್ಕುಮಾರ್|
ಇತ್ತೀಚಿನ ದಿನಗಳಲ್ಲಿ ಲಿವರ್ ಡ್ಯಾಮೇಜ್, ಲಿವರ್ ಕ್ಯಾನ್ಸ್ರ್ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಹೆಪಟೈಟಿಸ್ ಬಿ ಸೋಂಕಿನ ನಿರ್ಮೂಲನೆಗೆ ಹೆಪಟೈಟಿಸ್ ಬಿ ವ್ಯಾಕ್ಸಿನೇಷನ್ ಮೂರು ಡೋಸ್ ಪಡೆಯುವುದೊಂದೇ ಪರಿಹಾರವಾಗಿದೆ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ಹೇಳಿದರು.

3 ಡೋಸ್ ವ್ಯಾಕ್ಸಿನ್ ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಡಾ.ಪ್ರದೀಪ್ಕುಮಾರ್ ಜೆ.ಕೆ ಮನವಿ ಮಾಡಿದರು.
18 ವರ್ಷ ನಂತರದ ಯಾರಾದಾರೂ ಹೆಪಟೈಟೀಸ್ ಬಿ ಲಸಿಕೆ ಹಾಕಿಸಕೊಳ್ಳಬಹುದಾಗಿದ್ದು, ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ 7 ದಿನ ಲಸಿಕಾ ಶಿಬಿರದ ಪ್ರಯೋಜನ ಶಿವಮೊಗ್ಗದ ಜನತೆ ಪಡೆದುಕೊಳ್ಳಬಹುದಾಗಿದೆ ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ತಿಳಿಸಿದರು.
ಹೆಪಟೈಟೀಸ್ ಬಿ ಅರಿವು|
ಸಿಜೆ ಸೈಕ್ಲೋಥಾನ್ ಜಾಥಾ|

ಜುಲೈ 26 ರಂದು ಸಿಜೆ ಸೈಕ್ಲೋಥಾನ್ ಹೆಸರಿನಡಿ ಸೈಕಲ್ ಜಾಥಾ ಮೂಲಕ ನಗರದ ವಿವಿದೆಡೆ ತೆರಳಿ ಹೆಪಟೈಟೀಸ್ ಬಿ ಲಸಿಕೆಯ ಮಹತ್ವದ ಅರಿವು ಮೂಡಿಸಲಾಗುವುದು ಎಂದು ಡಾ.ಪ್ರದೀಪ್ಕುಮಾರ್ ಜೆ.ಕೆ ತಿಳಿಸಿದರು.

ಪೊಲೀಸ್ ಚೌಕಿಯಿಂದ ಆರಂಭವಾಗುವ ಈ ಸೈಕಲ್ ಜಾಥಾವು ಶಿವಮೂರ್ತಿ ಸರ್ಕಲ್ವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪೂರ್ವ ನೋಂದಣಿ ಮಾಡುವ ಮೂಲಕ ಈ ಸೈಕಲ್ ಜಾಥಾದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







