ಪರೀಕ್ಷೆ ಮುಗಿದ ಐದೇ ನಿಮಿಷಕ್ಕೆ ಎಂಜಿನಿಯರಿಂಗ್ ಫಲಿತಾಂಶ | ಹಳೆಯ ದಾಖಲೆಯನ್ನು ಮುರಿದ ವಿಟಿಯು | ಡಿಜಿಟಲ್ ಫಲಿತಾಂಶ ದೇಶಕ್ಕೆ ವಿಟಿಯೂ ಮಾದರಿ
ಜೂನ್ 30 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಬಿ.ಇ./ಬಿ.ಟೆಕ್ನ 6ನೇ ಸೆಮಿಸ್ಟರ್ ಪರೀಕ್ಷೆಯು ಮಂಗಳವಾರ ಸಂಜೆ 5.30ಕ್ಕೆ ಮುಕ್ತಾಯಗೊಂಡರೇ ಮುಂದೆ 5ನಿಮಿಷಕ್ಕೆ ಫಲಿತಾಂಶವನ್ನು ಪ್ರಕಟಿಸಿದ್ದಲ್ಲದೇ ಅದನ್ನು ವಿದ್ಯಾರ್ಥಿಗಳ ಮೊಬೈಲ್ಗೆ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 6ನೇ ಸೆಮಿಸ್ಟರ್ನ ಇಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿದೆ. ಇದರೊಂದಿಗೆ ವಿಟಿಯು ಮತ್ತೊಂದು ದಾಖಲೆ ಬರೆದಿದೆ.
ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಫಲಿತಾಂಶವನ್ನು ಲೋಪವಿಲ್ಲದೇ ಶೀಘ್ರ ಫಲಿತಾಂಶ ನೀಡುವುದೇ ಒಂದು ಸವಾಲಿನ ಕೆಲಸ. ಆದರೆ ಅತಿದೊಡ್ಡ ವಿಶ್ವವಿದ್ಯಾಲಯವೆನಿಸಿಕೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪರೀಕ್ಷೆ ಮುಗಿದ ಐದೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಹೌದು. ಜೂನ್ 30 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಬಿ.ಇ./ಬಿ.ಟೆಕ್ನ 6ನೇ ಸೆಮಿಸ್ಟರ್ ಪರೀಕ್ಷೆಯು ಮಂಗಳವಾರ ಸಂಜೆ 5.30ಕ್ಕೆ ಮುಕ್ತಾಯಗೊಂಡರೇ ಮುಂದೆ 5ನಿಮಿಷಕ್ಕೆ ಫಲಿತಾಂಶವನ್ನು ಪ್ರಕಟಿಸಿದ್ದಲ್ಲದೇ ಅದನ್ನು ವಿದ್ಯಾರ್ಥಿಗಳ ಮೊಬೈಲ್ಗೆ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಹಳೇ ದಾಖಲೆ ಮುರಿದ ವಿಟಿಯು|
ಈ ಹಿಂದೆಯು ಸಹ ವಿಟಿಯು ಬಿ.ಇ./ಬಿ.ಟೆಕ್ನ ಅಂತಿಮ ವರ್ಷದ ಫಲಿತಾಂಶವನ್ನು ಕೇವಲ 10 ನಿಮಿಷದಲ್ಲಿ ಪ್ರಕಟಿಸುವ ಮೂಲಕ ದಾಖಲೆ ಬರೆದಿತ್ತು. ಇದೀಗ ಪರೀಕ್ಷೆ ಮುಗಿದ 5 ನಿಮಿಷಕ್ಕೆ ಫಲಿತಾಂಶವನ್ನು ಪ್ರಕಟಿಸಿ ತನ್ನದೇ ಹಳೆ ದಾಖಲೆಯನ್ನು ಮುರಿದಿದೆ.
ಈ ಬಾರಿ 60,856 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 76.84 ಫಲಿತಾಂಶ ದಾಖಲಾಗಿದೆ. ಡಿಜಿಟಲ್ ಮೌಲ್ಯಮಾಪನ ಹಾಗೂ ತಂತ್ರಜ್ಞಾನ ಬಳಕೆಯಿಂದ ಕಡಿಮೆ ಸಮಯದಲ್ಲಿ ಫಲಿತಾಂಶ ಪ್ರಕಟಿಸಿದೆ.
ಡಿಜಿಟಲ್ ಮೌಲ್ಯಮಾಪನ ಹಾಗೂ ಅತ್ಯುನ್ನತ ತಂತ್ರಜ್ಞಾನ ಬಳಕೆ ಮೂಲಕ ಫಲಿತಾಂಶವನ್ನ ಲೋಪವಿಲ್ಲದೇ ವಿದ್ಯಾರ್ಥಿ ಸ್ನೇಹಿಯಾಗಿ ನೀಡುವಲ್ಲಿ ವಿಟಿಯೂ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ.
ಕಡಿಮೆ ಸಮಯದಲ್ಲಿ ಫಲಿತಾಂಶ ಪ್ರಕಟಿಸಲು ಸಹಕರಿಸಿದ ವಿಟಿಯು ಸಿಬ್ಬಂದಿ, ಪರೀಕ್ಷಾ ವಿಭಾಗ ಮತ್ತು ಸಂಯೋಜಿತ ಕಾಲೇಜುಗಳ ಸಹಕಾರಕ್ಕೆ ವಿಟಿಯು ಉಪಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಎಜ್ಯುಕೇಶನ್ ವಿಭಾಗ
ನ್ಯೂಇಂಡಿಯಾ ಕನ್ನಡ








