ಸದ್ಗುರು ಶ್ರೀ ನಾರಾಯಣ ಮಹಾರಾಜರ ಪುಣ್ಯತಿಥಿ|ಪುಣೆ, ಬೇಟ್‌ನಿಂದ ಬಂದ ಭಕ್ತ ಸಮೂಹ|ಅವಿಸ್ಮರಣೀಯ ಘಟನೆಗಳನ್ನು ನೆನೆದ ನಾರಾಯಣಮೂರ್ತಿ ವಾಳ್ವೇಕರ
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ್ ವಾಳ್ವೇಕರ ಅವರ ನರಗುಂದದಲ್ಲಿರುವ ಪೂರ್ವಜರ ಮನೆಯಲ್ಲಿ ಜನಿಸಿದ ಸದ್ಗುರು ಶ್ರೀ ನಾರಾಯಣ ಮಹಾರಾಜರ ಪೂಜಾ ಪುನಸ್ಕಾರವನ್ನು ನಾರಾಯಣಮೂರ್ತಿ ವಾಳ್ವೇಕರ್ ಅವರು ಯಥಾವತ್ತಾಗಿ ನಡೆಸಿಕೊಂಡು ಬಂದಿದ್ದಾರೆ.
ಬೆಂಗಳೂರು: ದತ್ತಾತ್ರೇಯ ಗುರುಗಳ ಅವತಾರವೆಂದೆ ಗುರುತಿಸಲ್ಪಡುವ ಮಹಾರಾಷ್ಟ್ರದ ಬೇಟ್‌ನ ಪವಾಡ ಪುರುಷರು ಆದ ಸದ್ಗುರು ಶ್ರೀ ನಾರಾಯಣ ಮಹಾರಾಜರ ಪುಣ್ಯತಿಥಿಯ ನಿಮಿತ್ತ ಮಂಗಳವಾರದಂದು ವಿಧಿವತ್ತಾಗಿ ಪೂಜಾರ್ಚನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಬೆಂಗಳೂರಿನಲ್ಲಿರುವ ಬಸವನಗುಡಿ ಗವಿಪುರ ಗುಟ್ಟಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಎದುರು ಇರುವ ಸಮಾಧಿ ಮಂದಿರದಲ್ಲಿ ನಡೆದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ನೂರಾರು ಭಕ್ತಾಧಿಗಳು ಆಗಮಿಸಿ, ಮಹಾರಾಜರ ದರ್ಶನ ಪಡೆದು ಪುನೀತರಾದರು.





ನಾರಾಯಣಮೂರ್ತಿ ವಾಳ್ವೇಕರ ಅವರ ಪೂರ್ವಜರ ನರಗುಂದದ ಮನೆಯಲ್ಲಿ ಜನಿಸಿದ ಶ್ರೀ ದತ್ತನ ಅವತಾರಿ ಸದ್ಗುರು ಶ್ರೀ ನಾರಾಯಣ ಮಹಾರಾಜರು ಚಿಕ್ಕವರಿದ್ದಾಗಲೇ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಬೇಟ್ ನಗರದಲ್ಲಿ ವಾಸವಿದ್ದರು. ಆದರೆ ಅವರು ಬೆಂಗಳೂರಿನಲ್ಲಿ ಅವಸಾನ ಹೊಂದಿದ್ದರಿಂದ ಇಲ್ಲಿ ಅವರ ಸಮಾಧಿ ಇದೆ.
ವಿಧಿವತ್ತಾಗಿ ಪೂಜಾರ್ಚನೆ|
ಪ್ರತಿ ವರುಷ ಸದ್ಗುರು ಶ್ರೀ ನಾರಾಯಣ ಮಹಾರಾಜರ ಅವರ ಪುಣ್ಯತಿಥಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಿಕೊಂಡು ಬರಲಾಗುತ್ತದೆ.
ಸಮಾಧಿ ಮಂದಿರದಲ್ಲಿ ವಿಧಿವತ್ತಾಗಿ ಪೂಜಾರ್ಚನೆ ಹಾಗೂ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬೇಟ್‌ನಿಂದ ಬಂದ ಐವರು ಭಕ್ತರು|
ನಾರಾಯಣಮೂರ್ತಿ ವಾಳ್ವೇಕರ ಅವರಿಂದ ಆಶೀರ್ವಾದ|
ಸದ್ಗುರು ಶ್ರೀ ನಾರಾಯಣ ಮಹಾರಾಜರ ಪುಣ್ಯತಿಥಿಯ ಪಾವನ ಸಂದರ್ಭದಲ್ಲಿ ಪುಣೆ ಹಾಗೂ ಬೇಟ್ ಗ್ರಾಮದಿಂದ ಮಹಾರಾಜರ ಐವರು ಶಿಷ್ಯರು ಬೆಂಗಳೂರಿನ ಸಮಾಧಿ ಮಂದಿರಕ್ಕೆ ಆಗಮಿಸಿ, ಮಹಾರಾಜರ ಪವಿತ್ರ ಸಮಾಧಿಯ ದರ್ಶನ ಪಡೆದರು.






ಬಳಿಕ, ಸದ್ಗುರು ಶ್ರೀ ನಾರಾಯಣ ಮಹಾರಾಜರ ವಂಶಜರು ಆದ ನಾರಾಯಣಮೂರ್ತಿ ವಾಳ್ವೇಕರ್ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದರು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ್ ವಾಳ್ವೇಕರ ಅವರ ನರಗುಂದದಲ್ಲಿರುವ ಪೂರ್ವಜರ ಮನೆಯಲ್ಲಿ ಜನಿಸಿದ ಸದ್ಗುರು ಶ್ರೀ ನಾರಾಯಣ ಮಹಾರಾಜರ ಪೂಜಾ ಪುನಸ್ಕಾರವನ್ನು ನಾರಾಯಣಮೂರ್ತಿ ವಾಳ್ವೇಕರ್ ಅವರು ಯಥಾವತ್ತಾಗಿ ನಡೆಸಿಕೊಂಡು ಬಂದಿದ್ದಾರೆ.

ಇಂದಿಗೂ ನಾರಾಯಣಮೂರ್ತಿ ವಾಳ್ವೇಕರ್ ಅವರ ಮನೆಯಲ್ಲಿ ವಾಸವಿದ್ದ ಸದ್ಗುರು ಶ್ರೀ ನಾರಾಯಣ ಮಹಾರಾಜರ ಮೂಲ ಮನೆಯನ್ನು ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಶ್ರೀ ನಾರಾಯಣ ಮಹಾರಾಜರ
ಪ್ರೇರಣಾದಾಯಕ ಪವಾಡಗಳು|
ಬೇಟ್‌ನಿಂದ ಬಂದಿದ್ದ ಐವರು ಭಕ್ತರನ್ನು ಬರಮಾಡಿಕೊಂಡ ನಾರಾಯಣಮೂರ್ತಿ ವಾಳ್ವೇಕರ್ ಅವರು, ಸದ್ಗುರು ಶ್ರೀ ನಾರಾಯಣ ಮಹಾರಾಜರ ಜನ್ಮವೃತ್ತಾಂತ ಹಾಗೂ ಮಹಾರಾಜರಿಗೆ ಸಂಬಂಧಿಸಿದ ಅನೇಕ ಅವಿಸ್ಮರಣೀಯ ನೆನಪುಗಳನ್ನು ಅತ್ಯಂತ ಭಾವಪೂರ್ಣವಾಗಿ ಹಂಚಿಕೊಂಡರು.

ಮಹಾರಾಜರ ಜೀವನದ ಕೆಲವು ಪ್ರೇರಣಾದಾಯಕ ಪವಾಡಗಳು, ಘಟನೆಗಳು ಹಾಗೂ ಅವರು ನೀಡಿದ ಅಮೂಲ್ಯ ಬೋಧನೆಗಳನ್ನು ಸದ್ಗುರು ಶ್ರೀ ನಾರಾಯಣ ಮಹಾರಾಜರ ವಂಶಜ ನಾರಾಯಣಮೂರ್ತಿ ವಾಳ್ವೇಕರ್ ಸ್ಮರಿಸಿದರು.
ವರದಿ: ವಿಜಯೀಂದ್ರ ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು







