Shivamogga

ಶರಣ್ ಪಂಪ್‌ವೆಲ್ ಜಿಲ್ಲಾಪ್ರವೇಶ ನಿಷೇಧ ಹಿನ್ನೆಲೆ|ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ|ಡಿಸಿ ಕಚೇರಿಗೆ ನುಗ್ಗಲು ವಿಫಲ ಯತ್ನ

ಗೋಪಿವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಹೆಚ್‌ಪಿ ಮತ್ತು ಭಜರಂಗದಳದ ನೂರಾರು ಕಾರ್ಯಕರ್ತರು, ಡಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದ್ದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಅವರಿಗೆ ಜಿಲ್ಲಾಪ್ರವೇಶ ನಿಷೇಧಿಸಿರುವದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಿದರು.

ಗೋಪಿವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಹೆಚ್‌ಪಿ ಮತ್ತು ಭಜರಂಗದಳದ ನೂರಾರು ಕಾರ್ಯಕರ್ತರು, ಡಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದ್ದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಜಿಲ್ಲೆಯಲ್ಲಿ ಗೋರಕ್ಷಣೆಗೆ ಮುಂದಾದ ಹಿಂದೂ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಹಿಂದೂ ಭಾಷಣಕಾರರಿಗೆ ನಿರ್ಬಂಧ ವಿಧಿಸಿ ನಮ್ಮ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪೊಲೀಸ್ ಇಲಾಖೆ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಣಿಕೆಗೆ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಕಳ್ಳರು ಹಲ್ಲೆ ನಡೆಸಿದವರನ್ನು ಬಂಧಿಸದೇ ಗೋರಕ್ಷಕರ ಮೇಲೆಯೇ ಕೇಸ್ ದಾಖಲಿಸುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಹಿಂದೂಪರ ಮುಖಂಡ ಶರಣ್ ಪಂಪ್‌ವೆಲ್ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಕೂಡಲೇ ಶಿಕಾರಿಪುರದಲ್ಲಿ ಹಲ್ಲೆ ನಡೆಸಿದ ಗೋಕಳ್ಳರನ್ನ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Follow Us

Leave a Reply

Your email address will not be published. Required fields are marked *

Back to top button