ನೀಟ್ ಪರೀಕ್ಷಾ ಹಗರಣ|ಬಿಜೆಪಿ, ಕಾಂಗ್ರೆಸ್ ಮಧ್ಯೆ ಸೇರಿಗೆ ಸವ್ವಾಸೇರು|ಪರಸ್ಪರ ಕಚೇರಿಗೆ ನುಗ್ಗಿ ದಾಂಧಲೆ|ಉದ್ವಿಗ್ನ ಸ್ಥಿತಿ, ಆತಂಕದ ವಾತಾವರಣ ಸೃಷ್ಟಿಸಿದ ಪ್ರತಿಭಟನೆಗಳು
ಮಹಾವೀರ ಸರ್ಕಲ್ ವರೆಗೆ ಮಾತ್ರ ಅನುಮತಿ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು, ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿನ ಬಿಜೆಪಿ ಕಾರ್ಯಾಲಯಕ್ಕೆ ನುಗ್ಗಿದ ಘಟನೆ ನಡೆದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ನಡೆದಿದೆ.

ಶಿವಮೊಗ್ಗ: ನೀಟ್ ಅಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಹೈಡ್ರಾಮಾ ನಡೆದ ಘಟನೆ ಗುರುವಾರದಂದು ನಡೆದಿದೆ.

ಪ್ರತಿಭಟನೆಗೆ ಮಹಾವೀರ ಸರ್ಕಲ್ ವರೆಗೆ ಮಾತ್ರ ಅನುಮತಿ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು, ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿನ ಬಿಜೆಪಿ ಕಾರ್ಯಾಲಯಕ್ಕೆ ನುಗ್ಗಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ನಡೆದಿದೆ.

ಸಕಾಲದಲ್ಲಿ ಪೊಲೀಸರು ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಬಳಿಕ ಬಿಜೆಪಿ ಸಹ ಕಾಂಗ್ರೆಸ್ ಕಚೇರಿಗೆ ನುಗ್ಗುವ ವಿಫಲ ಯತ್ನ ನಡೆಸಿದ ಘಟನೆ ನಡೆಯಿತು.
ನೀಟ್ ಪರೀಕ್ಷೆ ಅಕ್ರಮ ವಿಚಾರ|
ಶಿವಮೊಗ್ಗಕ್ಕೂ ಕಾಲಿಟ್ಟ ಪ್ರತಿಭಟನೆ ಬಿಸಿ|
ದೆಹಲಿಯ ಜಂತರಮಂತರನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ, ಶಿವಮೊಗ್ಗದಲ್ಲಿಯು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆದರೆ ಪ್ರತಿಭಟನೆಯ ದಿಕ್ಕು ಬಿಜೆಪಿ ಕಚೇರಿ ಮೇಲೆ ತಿರುಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಯಿತು.
ಬಿಜೆಪಿ ಕಚೇರಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಧಾಂದಲೆ ನಡೆಸಿದ್ದಾರೆ ಎಂದು ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಗೆ ಚಪ್ಪಲಿ ತೂರಿದ್ದಾರೆಂದು ಎಂದು ಹೇಳಲಾಗಿದೆ. ಇದೇ ವೇಳೆ ಪೊಲೀಸ್ ವ್ಯಾನ್ ಮೇಲೆ ನಿಂತು ಕಾಂಗ್ರೆಸ್ ಧ್ವಜ ಹಾರಿಸಿದ ವಿಚಿತ್ರ ಘಟನೆ ಸಹ ನಡೆದಿದೆ.
ದಾಂಧಲೆ ಶುರು ಆಗಿದ್ದು ಹೇಗೆ?
ಬೆಳಗ್ಗೆಯಿಂದ ನಡೆದ ಘಟನೆಗಳು|
ನೀಟ್ ಪರೀಕ್ಷೆ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಹಾವೀರ ಸರ್ಕಲ್‌ನಲ್ಲಿ ಕಾಂಗ್ರೆಸ್ ಮುಖಂಡರುಗಳಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ವೇಳೆ ಮಾಜಿ ಮೇಯರ್ ಪುತ್ರ ಶರತ್ ಮರಿಯಪ್ಪ, ಮುಖಂಡ ರಂಗನಾಥ್, ಗಿರೀಶ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿನ ಬಿಜೆಪಿ ಕಾರ್ಯಾಲಯದೊಳಗೆ ಪ್ರವೇಶಿಸಿ ದಾಂಧಲೆ ನಡೆಸಿ ಕಚೇರಿ ಬಾಗಿಲು ಬಂದ್ ಮಾಡಿಸುವ ಪ್ರಯತ್ನ ನಡೆಯಿತು ಎಂದು ಆರೋಪಿಸಲಾಗಿದೆ.

ಇದರಿಂದ ಕೆಲಕಾಲ ಸ್ಥಳದಲ್ಲಿ ಹೈಡ್ರಾಮ ನಡೆಯಲು ಕಾರಣವಾಯಿತು. ಕೆಲಕಾಲ ಕಾಂಗ್ರೆಸ್ , ಬಿಜೆಪಿ ಕಾರ್ಯಕರ್ತರ ನಡುವೆ ಗೊಂದಲಮಯ ವಾತಾರಣ ಸಹ ಸೃಷ್ಟಿಯಾಗಿತ್ತು.
ಪೊಲೀಸ್ ವಶಕ್ಕೆ, ಕಾಂಗ್ರೆಸ್ ಮುಖಂಡರು !
ಸುಮಾರು ಹೊತ್ತು ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತೆರಳುತ್ತಿದ್ದಂತೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತರಲು ಹರಸಾಹಸ ಪಟ್ಟರು.

ಬಳಿಕ ಉದ್ವಿಗ್ನ ಗುಂಪನ್ನು ಚದುರಿಸಲು ಮುಂದಾದ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.
ಗದ್ದಲಕ್ಕೆ ಪೋಲಿಸರೇ ಕಾರಣ|
ಬಿಜೆಪಿ ಮುಖಂಡ ಹರಿಕೃಷ್ಣ ಆರೋಪ|
ಬಿಜೆಪಿ ಕಚೇರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಲು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಆರೋಪಿಸಿದರು.
ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಗೆ ಪಡೆದ ಅನುಮತಿ ಸ್ಥಳ ಬಿಟ್ಟು ಬಿಜೆಪಿ ಕಚೇರಿಯನ್ನು ಟಾರ್ಗೆಟ್ ಮಾಡಿದ್ದರ ಹಿಂದೆ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮತ್ತು ಮತ್ತು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ನೇರ ಆರೋಪ ಮಾಡಿದರು.
ಬಿಜೆಪಿಯಿಂದಲೂ ಪ್ರತಿ ಧರಣಿ|
ಪ್ಲೆಕ್ಸ್ಗಗಳನ್ನು ಹರಿದು ಹಾಕಿ ಆಕ್ರೋಶ|
ಈ ಮಧ್ಯೆ ಪರಿಸ್ಥಿತಿ ಶಾಂತಗೊಳ್ಳುತ್ತಿದ್ದಂತೆ, ಧಾಂದಲೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮೇಲೇ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿದರು.
ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಬಂದು ಮೊಟ್ಟೆ ತೂರಿ, ಅಲ್ಲಿದ್ದ ಪ್ಲೆಕ್ಸ್ಗಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದರು.
ಬಿಜೆಪಿ ಕಾರ್ಯಕರ್ತರನ್ನ ತಡೆದ ಪೊಲೀಸರು, ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಇಂತಹ ಬೆದರಿಕೆ ಧಾಂದಲೆಗಳಿಗೆ ಬಿಜೆಪಿ ಕಾರ್ಯಕರ್ತರು ಜಗ್ಗುವುದಿಲ್ಲವೆಂದು ತಿರುಗೇಟು ನೀಡಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಕಚೇರಿ ಶಾಶ್ವತವಾಗಿ ಬಾಗಿಲು ಮುಚ್ಚಿಸುವಂತೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ದಾಂಧಲೆ ಕಾಲಕ್ಕೆ ವಾಹನಗಳ ಜಖಂ|
ಬಿಜೆಪಿ ಕಚೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ, ಹತ್ತಿರದ ಅಲ್ಲಿಯೇ ಪಾರ್ಕ್ ಮಾಡಲಾಗಿದ್ದ ಬ್ಯಾಂಕ್‌ವೊಂದರ ಕಚೇರಿ ಉದ್ಯೋಗಿಗಳ ಐದಾರು ವಾಹನಗಳಿಗೆ ಕಿಡಿಗೇಡಿಗಳು ಜಖಂ ಮಾಡಿದ ಘಟನೆ ನಡೆದಿದೆ.
ಎಸ್ಪಿಗೆ ದೂರು ನೀಡಿದ ಬಿಜೆಪಿ|

ಏಕಾಏಕಿ ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಬಿಜೆಪಿ ಮುಖಂಡರುಗಳು ಎಸ್ಪಿ ನಿಖಿಲ್ ಬಿ. ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿದರು.
ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪೀಠೋಪಕರಣ ಧ್ವಂಸಗೊಳಿಸಿ, ಚಪ್ಪಲಿ ತೂರಲಾಗಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯ ಕನ್ನಡ
ಶಿವಮೊಗ್ಗ.






