UPDATED:ಹಣಕಾಸು ವ್ಯವಹಾರ ಹಿನ್ನೆಲೆ|ರಾಮೇನಕೊಪ್ಪದಲ್ಲಿ ಕುಳ್ಳಿ ಕಿರಣನನ್ನು ಕೊಲೆಗೈದ ದುರುಳರು|ಮೂವರು ಆರೋಪಿಗಳ ಶೀಘ್ರ ಬಂಧನ-ಎಸ್ಪಿ ನಿಖಿಲ್.ಬಿ
ಹಲ್ಲೆ ನಡೆಯುತ್ತದೆ ಎಂಬ ಸಣ್ಣ ಸುಳಿವು ಇಲ್ಲದೇ ಕುಳ್ಳಿ ಕಿರಣ ಭಾನುವಾರದಂದು ರಾಮೇನಕೊಪ್ಪದಲ್ಲಿರುವ ತೋಟವೊಂದನ್ನು ನೋಡಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಬಂದ ಮೂರು ಜನರ ತಂಡವೊಂದು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ವಾರದ ರಜೆ ಮೂಡನಲ್ಲಿದ್ದ ಶಿವಮೊಗ್ಗ ಜನರಿಗೆ ಸಂಜೆಯೊಷ್ಟತ್ತಿಗೆ ಭೀಕರ ಕೊಲೆ ಸುದ್ದಿ ಕೇಳಿ ಬೆಚ್ಚಿ ಬೀಳುವಂತೆ ಮಾಡಿದೆ.
ಸೀಗೆಹಟ್ಟಿಯ ನಿವಾಸಿ ಎನ್ನಲಾದ ಕುಳ್ಳಿ ಕಿರಣ್ (32) ಎಂಬಾತನನ್ನು ರಾಮೇನಕೊಪ್ಪ ಬಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮಾರಕಾಸ್ತ್ರಗಳಿಂದ ಕಂಡಕಂಡಲ್ಲಿ ತಿವಿದ ಪರಿಣಾಮ ಕುಳ್ಳಿ ಕಿರಣ್ ಸ್ಥಳದಲ್ಲಿಯೇ ಕೊನೆಯುಸಿರು ಎಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ವ್ಯವಹಾರವೇ ಕೊಲೆಗೆ ಕಾರಣ|
ಎಸ್ಪಿ ಬಿ.ನಿಖಿಲ್ ಹೇಳಿಕೆ|
ಹಣಕಾಸು ವ್ಯವಹಾರವೇ ಕುಳ್ಳಿ ಕಿರಣ್ ಎಂಬಾತನ ಮೇಲೆ ಹಲ್ಲೆಗೈದು ಕೊಲೆ ಮಾಡಲು ಕಾರಣವೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.
ಕೊಲೆ ವಿಷಯ ತಿಳಿದ ಕೂಡಲೇ ಮಾಧ್ಯಮದವರ ವ್ಯಾಟ್ಸ್ಅಪ್ ಗ್ರೂಪನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಉಹಾಪೋಹ, ಕಪೋಕಲ್ಪಿತ ವರದಿಗಳು ಪ್ರಸಾರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪೂರ್ತಿ ವಿಷಯ ತಿಳಿದು ಸುದ್ದಿ ಪ್ರಕಟಿಸುವಂತೇ ಎಸ್ಪಿ ಬಿ.ನಿಖಿಲ್ ಮನವಿ ಮಾಡಿದ್ದಾರೆ.

ಹಲ್ಲೆ ಮಾಡಿದ ಗುಂಪಿನಲ್ಲಿ ಎರಡರಿಂದ ಮೂರು ಜನ ಇದ್ದರು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಹೊಂಚು ಹಾಕಿದ್ದ ಕೊಲೆಗಾರರು|
ಹಲ್ಲೆ ನಡೆಯುತ್ತದೆ ಎಂಬ ಸಣ್ಣ ಸುಳಿವು ಇಲ್ಲದೇ ಕುಳ್ಳಿ ಕಿರಣ ಭಾನುವಾರದಂದು ರಾಮೇನಕೊಪ್ಪದಲ್ಲಿರುವ ತೋಟವೊಂದನ್ನು ನೋಡಲು ತೆರಳಿದ್ದಾನೆ.

ಖಚಿತ ಮಾಹಿತಿ ಪಡದೇ ಬಂದಿದ್ದ ಮೂರು ಜನರ ತಂಡವೊಂದು ಏಕಾಏಕಿ ಕುಳ್ಳಿ ಕಿರಣನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಠಾತ್ ನಡೆದ ದಾಳಿಯಿಂದ ಕುಳ್ಳಿ ಕಿರಣಗೆ ತಪ್ಪಿಸಿಕೊಳ್ಳಲು ಆಗಿಲ್ಲ.
ಮುಖ ಸೇರಿದಂತೆ ಕಂಡಕಂಡಲ್ಲಿ ತಿವಿದ ಪರಿಣಾಮ ಕುಳ್ಳಿ ಕಿರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಕುಳ್ಳಿ ಕಿರಣನ ಜೊತೆ ಇದ್ದವರು ಯಾರು ಅವರ ಮೇಲೆ ಹಲ್ಲೆ ನಡೆದಿಯೇ? ಅಥವಾ ಹಲ್ಲೆ ನಡೆದ ಸಂದರ್ಭದಲ್ಲಿ ಅವರು ಓಡಿ ಹೋದರಾ? ಎಂಬ ಬಗ್ಗೆ ವಿಚಾರಣೆಯಿಂದ ತಿಳಿದು ಬರಬೇಕಿದೆ.
ಕೊಲೆಗಾರರ ಬಂಧನಕ್ಕೆ ಪೊಲೀಸರ ಬಲೆ|
ಕೊಲೆ ಮಾಡಿದವರು ಇಂತಿಷ್ಟೇ ಜನ ಇದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸ್ರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಈಗಾಗಲೇ ಜಾಲ ಬೀಸಲಾಗಿದೆ.
ಎಸ್ಪಿ ನಿಖಿಲ್ ಅವರು ನೀಡಿದ ಹೇಳಿಕೆ ಗಮನಿಸಿದಾಗ ಶೀಘ್ರದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







