Shivamogga

ಸಂಸದ ಬಿ.ವೈ.ರಾಘವೇಂದ್ರ ಹುಟ್ಟುಹಬ್ಬ ಆಚರಣೆ|ಅಭಿಮಾನಿಗಳಿಂದ ರಕ್ತದಾನ, ಪೂಜೆ ಸಲ್ಲಿಕೆ|ಪುತ್ರನ ಅಭಿವೃದ್ದಿ ಕೆಲಸಕ್ಕೆ ಬಿಎಸ್‌ವೈ ಶ್ಲಾಘನೆ

ತಮ್ಮ ಪುತ್ರ ರಾಘವೇಂದ್ರ, ಯಡಿಯೂರಪ್ಪನ ಪುತ್ರ ಎನ್ನುವುದಕ್ಕಿಂತ ಕ್ಷೇತ್ರದ ಸಂಸದರಾಗಿ ಅಭಿವೃದ್ಧಿ ಕೆಲಸಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಅವರ ಹುಟ್ಟು ಹಬ್ಬವನ್ನು ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯಾದ್ಯಂತ ಬಿವೈಆರ್ ಹೆಸರಲ್ಲಿ ವಿಶೇಷ ಪೂಜೆ ನೆರವೇರಿತು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಿರಿಮಾವು, ಅರೆಬಿಳಚಿ, ಹೊಳೆಹೊನ್ನೂರು, ಕೈಮರ, ಆಯನೂರಿನ ದೇವಸ್ಥಾನಗಳಲ್ಲಿ ಬಿಜೆಪಿ, ಮುಖಂಡರು ಕಾರ್ಯಕರ್ತರು ಪೂಜೆ ಸಲ್ಲಿಸಿದರು.

ಇನ್ನು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ಬಂಜಾರ ಭವನದಲ್ಲಿ ಬಿವೈಆರ್ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಹಿರಿಯ ಕಾರ್ಯಕರ್ತರಿಗೆ ಸನ್ಮಾನ.

ವಿಕಲಚೇತನರಿಗೆ ತ್ರಿಚಕ್ರವಾಹನ, ಕೃತಕ ಕಾಲು, ಸ್ವಸಹಾಯ ಸಂಘಕ್ಕೆ ಅಗರ್ ಬತ್ತಿ ಯಂತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು, ಪಕ್ಷದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿ, ತಮ್ಮ ಅವಧಿಯಲ್ಲಿ ಜನರು ಅಪೇಕ್ಷಿಸಿದ ಎಲ್ಲ ಅಭಿವೃದ್ದಿಯನ್ನು ಮಾಡಿದ ತೃಪ್ತಿ ಇದೆ.

ತಮ್ಮ ಪುತ್ರ ರಾಘವೇಂದ್ರ, ಯಡಿಯೂರಪ್ಪನ ಪುತ್ರ ಎನ್ನುವುದಕ್ಕಿಂತ ಕ್ಷೇತ್ರದ ಸಂಸದರಾಗಿ ಅಭಿವೃದ್ಧಿ ಕೆಲಸಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದರು.

ಹುಟ್ಟುಹಬ್ಬದ ನಿಮಿತ್ತ ರಕ್ತದಾನ ಶಿಬಿರ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸಹ ಆಯೋಜಿಸಲಾಗಿತ್ತು.

ಭಂಟರ ಭವನದಲ್ಲಿ ಅಭಿಮಾನಿ ಬಳಗದ ವತಿಯಿಂದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಜರುಗಿತು.

ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಬಿ.ವೈ.ರಾಘವೇಂದ್ರ ಅವರು, ಹಿಡಿದ ಕೆಲಸವನ್ನು ಛಲಬಿಡದೇ ಸಾಧಿಸುವ ಗುಣ ಹೊಂದಿದ್ದಾರೆ.

ಜಿಲ್ಲೆಗೆ ಲಕ್ಷ ಲಕ್ಷ ಕೋಟಿ ಅನುದಾನವನ್ನು ಹೊತ್ತು ತಂದ ನೈಜ ಅಭಿವೃದ್ಧಿಯ ಹರಿಕಾರನೆಂದು ಬಣ್ಣಿಸಿದರು.

ಸಂಸದ ಬಿವೈ ರಾಘವೇಂದ್ರ ಮಾತನಾಡಿ, ಮತದಾರರು ಕಾರ್ಯಕರ್ತರ ಹಾರೈಕೆ ಪ್ರೀತಿ , ಶ್ರಮದಿಂದಲೇ ಸಂಸತ್ ಸದಸ್ಯನಾಗಿದ್ದೇನೆ. ಕಾರ್ಯಕರ್ತರೇ ಪಕ್ಷದ ನಿಜವಾದ ಶಕ್ತಿ ಎಂದು ಅಭಿಪ್ರಾಯ ಪಟ್ಟರು.

ವಿಧಾನಪರಿಷತ್ ಸದಸ್ಯ ಡಾ ಧನಂಜಯ ಸರ್ಜಿ, ಬಿಜೆಪಿ ಮುಖಂಡ ಎಸ್ ದತ್ತಾತ್ರಿ, ಟಿ.ಡಿ.ಮೇಘರಾಜ್, ಸಂತೋಷ್ ಬಳ್ಳೇಕೆರೆ, ಪದ್ಮನಾಭ ಭಟ್, ರಾಘವೇಂದ್ರ ಸ್ವಾಮಿ, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ಮತ್ತಿತರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button