ದ್ವೇಷ ಭಾಷಣ ಕಾಯ್ದೆ ವಿರುದ್ದ ಬಿಜೆಪಿ ಜನಾಂದೋಲನ|ಶಿವಮೊಗ್ಗದಲ್ಲಿ ಡಿ.26ಕ್ಕೆ ಬೃಹತ್ ಪ್ರತಿಭಟನೆ-ಶಾಸಕ ಎಸ್.ಎನ್.ಚೆನ್ನಬಸಪ್ಪ
ಕಾಂಗ್ರೆಸ್ ವಿಚಾರಗಳಿಗೆ ಯಾರೇ ಅಡ್ಡಿಯಾದರೂ ಇತಿಹಾಸದ ಸತ್ಯಸಂಗತಿಗಳನ್ನ ಮಾತನಾಡಿದರೂ ಅದು ದ್ವೇಷ ಭಾಷಣದ ವ್ಯಾಪ್ತಿಗೆ ಬರಲಿದ್ದು ಜೈಲಿಗಟ್ಟಬಹುದಾಗಿದೆ ಎಂದು ಎಸ್.ಎನ್.ಚೆನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಇದರ ವಿರುದ್ದ ಬಿಜೆಪಿ ವತಿಯಿಂದ ಡಿ.26ರಂದು ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಭಟನೆ ಮೂಲಕ ಜನಾಂದೋಲನ ರೂಪಿಸಲಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚೆನ್ನಬಸಪ್ಪ ಹೇಳಿದ್ದಾರೆ.

ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಸೂದೆಯು ಪ್ರತಿಪಕ್ಷಗಳು ಸತ್ಯ ಹೇಳದಂತೆ , ಕಾಂಗ್ರೆಸ್ ವಿಚಾರಗಳ ವಿರುದ್ದ ಧ್ವನಿ ಎತ್ತದಂತೆ ಕಟ್ಟಿಹಾಕುವ ಕುತಂತ್ರದ ಭಾಗವಾಗಿದೆ.
ಅಧಿವೇಶನದಲ್ಲಿ ದ್ವೇಷಭಾಷಣ ಕಾಯ್ದೆಯನ್ನ ಚರ್ಚೆಗೊಳಪಡಿಸದೇ ಬೇಕಂತಲೇ ಬಿಜೆಪಿ ಪಕ್ಷದವರನ್ನ ಕೆರಳಿಸುವ ಹೇಳಿಕೆ ನೀಡಿ ಗದ್ದಲ ಸೃಷ್ಠಿಯಾದ ವೇಳೆ ಅಭಿಪ್ರಾಯ ಪಡೆಯದೇ ತರಾತುರಿಯಲ್ಲಿ ಸಭಾಧ್ಯಕ್ಷರು ಮಸೂದೆಯನ್ನ ಅಂಗೀಕರಿಸಿದ್ದಾರೆ.

ಇದು ಅನ್ಯಾಯ ಮತ್ತು ಖಂಡನೀಯ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಆರೋಪಿಸಿದರು.
ದ್ವೇಷ ಭಾಷಣ ತಡೆ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ. ಇಲ್ಲಿ ಸತ್ಯ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ.
ಕಾಂಗ್ರೆಸ್ ವಿಚಾರಗಳಿಗೆ ಯಾರೇ ಅಡ್ಡಿಯಾದರೂ ಇತಿಹಾಸದ ಸತ್ಯಸಂಗತಿಗಳನ್ನ ಮಾತನಾಡಿದರೂ ಅದು ದ್ವೇಷ ಭಾಷಣದ ವ್ಯಾಪ್ತಿಗೆ ಬರಲಿದ್ದು ಜೈಲಿಗಟ್ಟಬಹುದಾಗಿದೆ ಎಂದು ಎಸ್.ಎನ್.ಚೆನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.

ಕನ್ನಡಿಗರು ಪರಭಾಷಿಗರ ದಬ್ಬಾಳಿಕೆ ವಿರುದ್ದ ಪ್ರತಿಕ್ರಿಯಿಸಿದರೆ ಅದೂ ಕೂಡ ದ್ವೇಷ ಭಾಷಣವಾಗಲಿದೆ ಎಂದರು. ಸುಪ್ರೀಂಕೋರ್ಟ್ ತೀರ್ಪುಗಳಿಗೂ ಕೂಡ ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ವಿರುದ್ಧವಾಗಿದೆ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಆರೋಪಿಸಿದರು.
ಈ ಮಸೂದೆಯು ಮೂರುವರ್ಷ ಚಾಲ್ತಿಯಲ್ಲಿದ್ದರೆ ಮುಂದೆ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಇದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಅಂತಹ ನಿಯಮ ಇದರಲ್ಲಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತು ಇನ್ನು ಮೂರುವರ್ಷ ಆದ ನಂತರ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ.
ಆಗ ಬಿಜೆಪಿ ಪಕ್ಷ ಆಡಳಿತ ನಡೆಸಿದರೂ ಕೂಡ ಈ ಮಸೂದೆಗೆ ಏನು ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆಲ ಒಕ್ಕಣೆಗಳನ್ನೂ ಸೇರಿಸಿದ್ದಾರೆಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎನ್.ಜೆ. ನಾಗರಾಜ್, ಮಂಜುನಾಥ್ ನವುಲೆ, ದೀನದಯಾಳ್, ಎಂ.ಬಿ. ಹರಿಕೃಷ್ಣ, ಮುರಳಿ, ಶ್ರೀನಾಗ್, ಮೋಹನ್ ರೆಡ್ಡಿ, ಮಂಜು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







