EducationShivamogga

ಕುವೆಂಪು ವಿವಿ ಪಿಜಿ ಕೋರ್ಸ್ ಪ್ರವೇಶಾತಿ ಕೌನ್ಸಿಲಿಂಗ್|ಆಗಸ್ಟ್‌ 13,14ರಂದು ಜ್ಞಾನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಕೌನ್ಸಿಲಿಂಗ್|ಮೆರಿಟ್ ಪಟ್ಟಿ..ವೆಬ್‌ಸೈಟ್‌ನಲ್ಲಿ ಪ್ರಕಟ

ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ಆಯಾ ವಿಭಾಗಗಳಲ್ಲಿಯೇ ಕೇಂದ್ರಿಕೃತ ಕೌನ್ಸಿಲಿಂಗ್ ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.

ಶಿವಮೊಗ್ಗ: 2026-27ನೇ ಸಾಲಿನ ಕುವೆಂಪು ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ ಪಿಜಿ ಕೋರ್ಸಗಳಿಗೆ ಆ.13 ಮತ್ತು 14 ರಂದು ಪ್ರವೇಶಾತಿ ಕೌನ್ಸಿಲಿಂಗ್ ನಡೆಯಲಿದೆ ಎಂದು ಕುವೆಂಪು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ಆಯಾ ವಿಭಾಗಗಳಲ್ಲಿಯೇ ಕೇಂದ್ರಿಕೃತ ಕೌನ್ಸಿಲಿಂಗ್ ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.

ಆಗಸ್ಟ್ 13ರಂದು ಮೆರಿಟ್ ಕೋಟಾದಲ್ಲಿ ಪ್ರವೇಶಾತಿ ನಡೆಯಲಿದ್ದು, ಆ. 14ರಂದು ಮೆರಿಟ್ ಕಂ ಪೇಮೆಂಟ್ ಕೋಟದಲ್ಲಿ ಪ್ರವೇಶಾತಿ ಪಡೆಯಬಹುದು.

ಮೆರಿಟ್ ಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಯಾ ವಿಭಾಗಗಳಲ್ಲಿ ಬೆಳಗ್ಗೆ 9.30ಕ್ಕೆ ಹಾಜರಿರಲು ತಿಳಿಸಲಾಗಿದೆ.

Follow Us

Leave a Reply

Your email address will not be published. Required fields are marked *

Back to top button